Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ರೈತ ವಿರೋಧಿ ಸಂಸದರನ್ನು ಮನೆಗೆ ಕಳಿಸಲು ಮಹದಾಯಿ ಹೋರಾಟಗಾರರ ನಿರ್ಧಾರ: ಇಜಾರಿ

ರೈತ ವಿರೋಧಿ ಸಂಸದರನ್ನು ಮನೆಗೆ ಕಳಿಸಲು ಮಹದಾಯಿ ಹೋರಾಟಗಾರರ ನಿರ್ಧಾರ: ಇಜಾರಿ

Spread the love

ಹುಬ್ಬಳ್ಳಿ: ಸುಮಾರು ಮೂರ ದಶಕಗಳಿಂದ ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿರುವ ಮಹದಾಯಿ ಕಳಸಾ ಬಂಡೂರಿಯ ಬಗ್ಗೆ ಮಾತೆತ್ತದ ರೈತ ವಿರೋಧಿ ಸಂಸದರನ್ನು ಸೋಲಿಸುವ ಮೂಲಕ ಮನೆಗೆ ಕಳಿಸಬೇಕು ಎಂದು ಮಹದಾಯಿ ಕಳಸಾ ಬಂಡೂರ ಹೋರಾಟ ಸಮನ್ವಯ ಸಮಿತಿಯ ಮುಖಂಡ ಅಮೃತ ಇಜಾರಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರು ಮತ್ತು ನೀರಾವರಿಗೆ ಶಾಶ್ವತ ಪರಿಹಾರದ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಶೀಘ್ರವಾಗಿ ಸ್ಪಂಧಿಸಬೇಕಾಗಿದ್ದ ಸ್ಥಳೀಯ ಸಂಸದರು ನಿಷ್ಕಾಳಜಿ ತೋರುತ್ತಿರುವ ಹಿನ್ನೆಲೆಯಲ್ಲಿ ರೈತ ವಿರೋಧಿ ಸಂಸದರನ್ನು ಮನೆಗೆ ಕಳಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದರು. ಈ ಹಿಂದೆ ಶಾಸಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮನೆಯ ಮುಂದೆ ಧರಣಿ ಮಾಡಿದಾಗ ಸೌಜನ್ಯಕ್ಕೂ ಕೂಡ ಶೆಟ್ಟರ್ ಮಾತನಾಡಿಸಿಲ್ಲ ಅಲ್ಲದೇ ರೈತರ ಎಲ್ಲರೂ ಯಡಿಯೂರಪ್ಪನವರ ಭೇಟಿ ಮಾಡಿ ಮನವಿ ಮಾಡಿದಾಗ 15 ದಿನಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು ಆದರೇ ಯಾವುದೇ ಕಿಂಚಿತ್ತೂ ಕಾಳಜಿ ಕೂಡ ಅವರು ತೋರಿಲ್ಲ ಎಂದು ಅವರು ಬಿಜೆಪಿಯ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.ಮಹದಾಯಿ ಹೋರಾಟಗಾರರನ್ನು ಸಂಸದರು ಗೂಂಡಾಗಳೆಂದು ಹೇಳಿ ಅವರ ಮೇಲೆ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿದ್ದರು ಇಂತಹ ರೈತ ವಿರೋಧಿ ಸಂಸದರ ಅವಶ್ಯಕತೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಇಲ್ಲ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದು ನಿಶ್ಚಿತವಾಗಿದ್ದು, ಮಹದಾಯಿ ಹೋರಾಟದ ಸಮಸ್ವಯ ಸಮಿತಿಯಿಂದ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಹುಬ್ಬಳ್ಳಿ, ಡಿ.ಜಿ.ಜಂತ್ಲಿ, ಸುರೇಶಗೌಡ ಪಾಟೀಲ, ಎಂ.ಎಚ್.ಮುಲ್ಲಾ, ನಾಗರಾಜ ಬಡಿಗೇರ, ವಿನಯ ಗೋಕಾವಿ, ನಾಗಭೂಷಣ ಕಾಳೆ ಸೇರಿದಂತೆ ಇತರರು ಇದ್ದರು.

Check Also

ಹುಬ್ಬಳ್ಳಿಯಲ್ಲಿ ಮೀತಿಮಿರಿದ ಕಳ್ಳರ ಹಾವಳಿ: ಗಾಜು ಒಡೆದು ಉಪಕರಣ ದೋಚುವ ಕಳ್ಳರು

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!