Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ರೌಡಿಶೀಟರ್ ಗಳ ಲೈವ್ ಎನ್​ಕೌಂಟರ್..!

ರೌಡಿಶೀಟರ್ ಗಳ ಲೈವ್ ಎನ್​ಕೌಂಟರ್..!

ಮಂದಿಯ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ತಾಕಿಮ್​ ಮತ್ತು ನೌಷದ್​ ತಲೆಮರೆಸಿಕೊಂಡಿದ್ದರು. ಎರಡು ದಿನದ ಹಿಂದಷ್ಟೇ ಇದೇ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪರಾರಿಯಾಗಿದ್ದ ಮುಸ್ತಾಕಿಮ್​ ಮತ್ತು ನೌಷದ್​​ ಅಡಗಿರುವ ಸ್ಥಳದ ಖಚಿತ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚಾರಣೆಗಿಳಿಯುವ ಮುನ್ನ ಮಾಧ್ಯಮಗಳಿಗೆ ವಿಷಯ ಮುಟ್ಟಿಸಿ ಕಾರ್ಯಾಚರಣೆಯ ದೃಶ್ಯವನ್ನು ಸೆರೆ ಹಿಡಿಯಲು ಆಹ್ವಾನಿಸಿದ್ದಾರೆ.
ಇನ್ನು ಹಳೇ ಕಟ್ಟಡವೊಂದರಲ್ಲಿ ಅಡಗಿದ್ದ ಆರೋಪಿಗಳ ಅಡ್ಡೆಗೆ ದಾಳಿ ನಡೆಸಿದ ವೇಳೆ ಬೈಕ್​ನಲ್ಲಿ ಆರೋಪಿಗಳು ಎಸ್ಕೇಪ್​ ಆಗಲು ಪ್ರಯತ್ನಿಸಿದ್ದಾರೆ. ತಕ್ಷಣ ಬೆನ್ನಟ್ಟಿದ್ದ ಪೊಲೀಸರು ಸುಮಾರು 4 ಕಿ.ಮೀ ತನಕ ಚೇಸ್​ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಸುಮಾರು 25 ರಿಂದ 30 ಸುತ್ತು ಗುಂಡು ಹಾರಿಸಿದ್ದು, ಪರಿಣಾಮ ಒಬ್ಬ ಪೇದೆಗೆ ಗಾಯಗಳಾಗಿವೆ. ಕ್ರಿಮಿನಲ್​ಗಳು ಮತ್ತು ಪೊಲೀಸರ ನಡುವೆ ನಡೆದ 1 ಗಂಟೆಯ ಗುಂಡಿನ ಚಕಮಕಿಯಲ್ಲಿ ಆರೋಪಿಗಳಾದ ಮುಸ್ತಾಕಿಮ್​ ಮತ್ತು ನೌಷದ್​ನನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಡೀ ಈ ಎನ್​ಕೌಂಟರ್ ಪ್ರಸಂಗವನ್ನ ಮಾಧ್ಯಮಗಳು ಸೆರೆ ಹಿಡಿದಿದ್ದು, ತಮ್ಮ ವಾಹಿನಿಗಳಲ್ಲೂ ಪ್ರಸಾರ ಮಾಡಿವೆ. ಇನ್ನು ಎನ್​ಕೌಂಟರ್​​ಗೆ ಬಲಿಯಾದ ಮುಸ್ತಾಕಿಮ್​ ಮತ್ತು ನೌಷದ್​​ ಮೇಲೆ ಈ ಹಿಂದೆಯೂ ಕೊಲೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿತ್ತು ಎಂದು ಅಲೀಘಡ್​​ನ ಹಿರಿಯ ಪೊಲೀಸ್​​ ಅಧಿಕಾರಿ ಅಜಯ್​ ಸಾಹ್ನಿ ತಿಳಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!