Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಲೋಕಸಭೆ ಚುನಾವಣೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಲೋಕಸಭೆ ಚುನಾವಣೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ. ಮಾರ್ಚ್ 13ರಂದು ದೆಹಲಿಗೆ ತೆರಳಲಿರುವ ರಾಜ್ಯ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಹಾಲಿ ಸಂಸದರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 16 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದೆ. ಉಳಿದಂತೆ ಹಾಲಿ ಸಂಸದರ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ನೀಡುವಂತೆಯೂ ಕಾಂಗ್ರೆಸ್ ರಾಜ್ಯ ಚುನಾವಣಾ ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:ಬೀದರ್ ಲೋಕಸಭಾ ಕ್ಷೇತ್ರ: ಈಶ್ವರ್ ಖಂಡ್ರೆ, ಸಿ.ಎಂ.ಇಬ್ರಾಹಿಂ, ವಿಜಯ್ ಸಿಂಗ್ಬಾಗಲಕೋಟೆ ಕ್ಷೇತ್ರ : ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ, ಅಜಯ್ ಕುಮಾರ್ ಸರ್ ನಾಯಕ್ವಿಜಯಪುರ ಕ್ಷೇತ್ರ: ರಾಜು ಅಲಗೂರು, ಪ್ರಕಾಶ್ ರಾಥೋಡ್, ಕಾಂತಾ ನಾಯಕ್, ಶಿವರಾಜ್ ತಂಗಡಗಿಕೊಪ್ಪಳ ಕ್ಷೇತ್ರ : ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ, ಬಸವರಾಜ ರಾಯರೆಡ್ಡಿಬೆಳಗಾವಿ ಕ್ಷೇತ್ರ: ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್, ನಾಗರಾಜ್ ಯಾದವ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್ಧಾರವಾಡ ಕ್ಷೇತ್ರ : ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ.ಜಿ.ಸನದಿ ಪುತ್ರ), ವೀರಣ್ಣ ಮತ್ತಿಕಟ್ಟಿಹಾವೇರಿ ಕ್ಷೇತ್ರ: ಬಸವರಾಜ್ ಶಿವಣ್ಣನವರ, ಸಲೀಂ ಅಹಮದ್, ಡಿ.ಆರ್.ಪಾಟೀಲ್ದಾವಣಗೆರೆ ಕ್ಷೇತ್ರ : ಎಸ್.ಎಸ್. ಮಲ್ಲಿಕಾರ್ಜುನ, ಎಚ್.ಎಂ.ರೇವಣ್ಣಉತ್ತರ ಕನ್ನಡ: ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವಾ, ಭೀಮಣ್ಣ ನಾಯ್ಕ್ಉಡುಪಿ- ಚಿಕ್ಕಮಗಳೂರು: ಆರತಿ ಕೃಷ್ಣ, ಡಿ.ಎಲ್.ವಿಜಯ ಕುಮಾರ್ ,ಪ್ರಮೋದ್ ಮಧ್ವರಾಜ್,ಮಂಗಳೂರು: ರಮಾನಾಥ ರೈ, ಐವಾನ್ ಡಿಸೋಜಾ, ಮೋಯಿನುದ್ದೀನ್ ಬಾವಾಬೆಂಗಳೂರು ಕೇಂದ್ರ: ರಿಜ್ವಾನ್ ಅರ್ಷದ್, ಬಿ.ಕೆ. ಹರಿಪ್ರಸಾದ್, ರೋಷನ್ ಬೇಗ್, ಎಚ್.ಟಿ. ಸಾಂಗ್ಲಿಯಾನಾಬೆಂಗಳೂರು ದಕ್ಷಿಣ: ಪ್ರಿಯಕೃಷ್ಣ , ಕೃಷ್ಣ ಬೈರೇಗೌಡ ರಾಮಲಿಂಗಾ ರೆಡ್ಡಿಬೆಂಗಳೂರು ಉತ್ತರ: ಸಿ.ನಾರಾಯಣ ಸ್ವಾಮಿ, ಎಂ.ಆರ್.ಸೀತಾರಾಂ, ಬಿ.ಎಲ್.ಶಂಕರ್, ಬಿ. ವಿ. ಶ್ರೀನಿವಾಸ್ಮೈಸೂರು : ಸಿ.ಎಸ್.ವಿಜಯ್ ಶಂಕರ್, ಸೂರಜ್ ಹೆಗ್ಡೆ , ಕೆ.ವಾಸುಅನಿವಾರ್ಯ ಇದ್ದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಅಥವಾ ಕೊಪ್ಪಳದಿಂದ, ಅಂತೆಯೇ ಸಚಿವ ಸಂಪುಟದಲ್ಲಿರುವ ಕಾಂಗ್ರೆಸ್ ಪ್ರಭಾವಿ ಸಚಿವರು ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇದೆ ಎಂಬ ಮಾಹಿತಿ ಇದೆ.ಪ್ರಸಕ್ತ ಕಾಂಗ್ರೆಸ್ ಸಂಸದರು ಇರುವ 10 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೆಂದು ಚುನಾವಣಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಆದರೆ ಇವುಗಳಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಜೆಡಿಎಸ್ ತಮಗೆ ನೀಡುವಂತೆ ಪಟ್ಟು ಹಿಡಿದಿದೆ. ಒಂದು ವೇಳೆ ಕಾಂಗ್ರೆಸ್ ಈ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದೇ ಆದಲ್ಲಿ ಇಬ್ಬರು ಸಂಸದರಿಗೆ ಬೇರೆ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಬೇಕಾದ ಅನಿವಾರ್ಯತೆ ಕಂಡುಬರಬಹುದು ಎನ್ನಲಾಗಿದೆ.ಹಾಲಿ ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರ ಸಂಸದರು ಹೆಸರುಚಿಕ್ಕೋಡಿ : ಪ್ರಕಾಶ್ ಹುಕ್ಕೇರಿಕಲಬುರಗಿ : ಮಲ್ಲಿಕಾರ್ಜುನ ಖರ್ಗೆರಾಯಚೂರು : ಬಿ.ವಿ.ನಾಯಕ್ಬಳ್ಳಾರಿ ಕ್ಷೇತ್ರ : ವಿ.ಎಸ್.ಉಗ್ರಪ್ಪಚಿತ್ರದುರ್ಗ ಕ್ಷೇತ್ರ : ಬಿ.ಚಂದ್ರಪ್ಪತುಮಕೂರು : ಮುದ್ದ ಹನುಮೇಗೌಡಚಾಮರಾಜನಗರ : ಆರ್.ಧ್ರುವ ನಾರಾಯಣ್ಚಿಕ್ಕಬಳ್ಳಾಪುರ : ಡಾ.ಎಂ.ವೀರಪ್ಪ ಮೊಯಿಲಿಕೋಲಾರ ಕ್ಷೇತ್ರ : ಕೆ.ಎಚ್.ಮುನಿಯಪ್ಪಬೆಂಗಳೂರು ಗ್ರಾಮಾಂತರ : ಡಿ.ಕೆ.ಸುರೇಶ್

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!