Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವರನಟ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

ವರನಟ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

ಈರೋಡು: ವರನಟ ಡಾ.ರಾಜ್‌ ಕುಮಾರ್‌ ಅವರ ಅಪಹರಣ ಪ್ರಕರಣದಲ್ಲಿ ಎಲ್ಲಾ 9 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್‌ನ‌  ಜಿಲ್ಲಾ ಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸಿದೆ.
ಜುಲೈ 30, 2000 ದಲ್ಲಿ , ಕುಖ್ಯಾತ ದಂತಚೋರ, ನರಹಂತಕ, ಕಾಡುಗಳ್ಳ ವೀರಪ್ಪನ್‌  ಡಾ.ರಾಜ್ ಅವರನ್ನು  ಗಾಜನೂರಿನಲ್ಲಿನ  ತೋಟದ ಮನೆಯಿಂದ ಅಪಹರಿಸಿದ್ದ. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾಗಿದ್ದರು.  108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. 
ಈ ಸೆನ್ಸೇಷನಲ್​​ಕೇಸ್​​ನಲ್ಲಿ ವೀರಪ್ಪನ್​ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವೀರಪ್ಪನ್​, ಸೇತುಕುಡಿ ಗೋವಿಂದನ್​ ಹಾಗೂ ರಂಗಸಾಮಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದಾರೆ. ಹದಿನೆಂಟು ವರ್ಷಗಳ ಬಳಿಕ ಪ್ರಕರಣ ವಿಚಾರಣೆ ಮುಗಿದು ಎಲ್ಲಾ 9 ಆರೋಪಿಗಳನ್ನು ನ್ಯಾಯಾಧೀಶರು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಶನ್‌ ಮತ್ತು ಪೊಲೀಸ್‌ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫ‌ಲವಾದ ಹಿನ್ನಲೆಯಲ್ಲಿ  ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!