Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ವಾಟರ್ ಬಾಯ್ ರೀತಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದ ಆಸ್ಟ್ರೇಲಿಯಾ ಪ್ರಧಾನಿ.

ವಾಟರ್ ಬಾಯ್ ರೀತಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದ ಆಸ್ಟ್ರೇಲಿಯಾ ಪ್ರಧಾನಿ.

 

ಕ್ಯಾನ್​ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟ್ ಆಟಗಾರರಿಗೆ ನೀರು ಮತ್ತು ತಂಪು ಪಾನೀಯ ಕೊಂಡೊಯ್ಯುವ ಮೂಲಕ ವಾಟರ್​ ಬಾಯ್​ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡದ ವಿರುದ್ಧದ ಟಿ-20 ಪಂದ್ಯ ನಡೆಯುವಾಗ ಬ್ರೇಕ್ ಸಮಯದಲ್ಲಿ ಆಟಗಾರರಿಗೆ ಕುಡಿಯಲು ನೀರು ಮತ್ತು ತಂಪು ಪಾನೀಯ ತೆಗೆದುಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ಕಾಟ್ ಮಾರಿಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್​ ಗಳಿಸಿತು. ಅಲ್ಪ ಮೊತ್ತವನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡ 19.5 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 132 ರನ್​ ಗಳಿಸುವ ಮೂಲಕ 1 ವಿಕೆಟ್​ನಿಂದ ರೋಚಕ ಗೆಲುವು ದಾಖಲಿಸಿದೆ.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!