Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ವಾಸಿಂ ಅಕ್ರಮ್ ದಾಖಲೆ ಬ್ರೇಕ್​ ಮಾಡಿದ ರೋಹಿತ ಶರ್ಮಾ.

ವಾಸಿಂ ಅಕ್ರಮ್ ದಾಖಲೆ ಬ್ರೇಕ್​ ಮಾಡಿದ ರೋಹಿತ ಶರ್ಮಾ.

​ವಿಶಾಖ ಪಟ್ಟಣ: ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿರುವ ರೋಹಿತ್​ 23 ವರ್ಷಗಳ ಹಿಂದೆ ವಾಸಿಂ ಅಕ್ರಮ್ ನಿರ್ಮಿಸಿದ್ದ ಅಪರೂಪದ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. 1996 ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಆಲ್​ರೌಂಡರ್​ ವಾಸಿಂ ಅಕ್ರಮ್ 12 ಸಿಕ್ಸರ್​ ಸಿಡಿಸಿ ಒಂದೇ ಟೆಸ್ಟ್​ ಮ್ಯಾಚ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. ಆದರೆ ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 13 ಸಿಕ್ಸರ್​ ಸಿ​ಡಿಸಿ 23 ವರ್ಷಗಳ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. ಆದರೆ ಅಕ್ರಮ್​ ಒಂದೇ ಇನ್ನಿಂಗಸ್​ನಲ್ಲಿ 12 ಸಿಕ್ಸರ್​ ಸಿಡಿಸಿರುವುದರಿಂದ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆ ಅವರ ಹೆಸರಲ್ಲೇ ಉಳಿದುಕೊಂಡಿದೆ. ಅಕ್ರಮ್​ ಆ ಪಂದ್ಯದಲ್ಲಿ 257 ರನ್​ಗಳಿಸಿದ್ದರು.ರೋಹಿತ್​ ಮೊದಲ ಇನ್ನಿಂಗ್ಸ್​ನಲ್ಲಿ23 ಬೌಂಡರಿ, 6 ಸಿಕ್ಸರ್​ ಸಿಡಿಸಹಿತ 176 ರನ್​ಗಳಿಸಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್​ ಹಾಗೂ 10 ಬೌಂಡರಿ ಬಾರಿಸಿ ಸಿಕ್ಸರ್​ ದಾಖಲೆಯಲ್ಲದೆ, ಆರಂಭಿಕನಾಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 2 ಶತಕ ಬಾರಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!