Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ

ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ

ಮಂಡ್ಯ:- ಕೃಷ್ಣರಾಜಪೇಟೆ ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ 53 ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ವಿತರಿಸಿದರು. ಧರ್ಮಾಧಿಕಾರಿಗಳಾದ ರಾಜರ್ಷಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಫಲವಾಗಿ ಒಂದು ಸರ್ಕಾರವು ಮಾಡಲಾಗದ ಸೇವಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ ವಿಕಲಚೇತನರ ಆರೋಗ್ಯವಂತ ಸ್ವಾಭಿಮಾನಿ ಜೀವನಕ್ಕೆ ಅವಶ್ಯಕವಾಗಿ ಬೇಕಾದ ವೀಲ್ ಛೇರ್, ವಾಟರ್ ಬೆಡ್, ಅಂಧರ ವಾಕಿಂಗ್ ಸ್ಟಿಕ್, ಕಿವಿಯ ಸಾಧನೋಪಕರಣ ಸೇರಿದಂತೆ, ಟ್ರೈಸಿಕಲ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಜನೆಯ ಜಿಲ್ಲಾ ನಿರ್ದೇಶಕ ವಿನಯಕುಮಾರ್ ಸುವರ್ಣ ಮಾತನಾಡಿ ವಿಕಲಚೇತನರಿಗೆ ಸಮಾಜದ ಅನುಕಂಪ ಬೇಕಾಗಿಲ್ಲ, ಅವರಲ್ಲಿ ಹುದುಗಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶವನ್ನು ಒದಗಿಸಿಕೊಟ್ಟು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಆಗ ಮಾತ್ರ ವಿಕಲಚೇತನರಿಗೆ ಸ್ವಾಭಿಮಾನಿ ಸ್ವಾವಲಂಬನೆಯ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ನಿರ್ದೇಶಕ ಡಾ.ಕೆ.ಆರ್.ನೀಲಕಂಠ ಸಾಧನಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಕೃಷಿ ಅಧಿಕಾರಿ ನಿಂಗಪ್ಪ, ರಮಣಮಹರ್ಷಿ ಅಂಧರ ಪರಿಷತ್ತಿನ . ತಾಲೂಕು ಸಂಯೋಜಕರಾದ ಜಯಶಂಕರ್, ಕಲಾವತಿ ಮತ್ತು ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!