Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ವಿಕೆಟ್​ ಸಿಗದ ಬೇಸರದಲ್ಲಿ ಮೈದಾನದಲ್ಲೆ ಬೈದಾಡಿಕೊಂಡ ರಬಾಡ ಹಾಗೂ ಕ್ವಿಂಟನ್​ ಡಿಕಾಕ್​.

ವಿಕೆಟ್​ ಸಿಗದ ಬೇಸರದಲ್ಲಿ ಮೈದಾನದಲ್ಲೆ ಬೈದಾಡಿಕೊಂಡ ರಬಾಡ ಹಾಗೂ ಕ್ವಿಂಟನ್​ ಡಿಕಾಕ್​.

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು ಎದುರಾಳಿ ಬೌಲರ್​ಗಳ ಮೇಲೆ ಗದಾ ಪ್ರಹಾರ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಬೌಲರ್​ಗಳನ್ನು ಹಿಗ್ಗಾಮಗ್ಗ ದಂಡಿಸಿರುವ ಕೊಹ್ಲಿ ಪಡೆ ಹರಿಣಗಳ ಮುಂದೆ ರನ್ನುಗಳನ್ನು ಶಿಖರವನ್ನೇ ಕಟ್ಟಿ ನಿಲ್ಲಿಸಿದೆ. ಇದೇ ಹತಾಶೆಯಲ್ಲಿ ಎದುರಾಳಿ ತಂಡದ ಆಟಗಾರರು ಮೈದಾನದಲ್ಲೇ ಕಿತ್ತಾಡಿಕೊಂಡಿದ್ದಾರೆ.ಟೀಂ ಇಂಡಿಯಾ ಬ್ಯಾಟಿಂಗ್​ ಮಾಡುತ್ತಿದ್ದಾಗ ಮೊದಲನೇ ಇನ್ನಿಂಗ್ಸ್​​ನ 123ನೇ ಓವರ್​​ನಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ ಬೌಲರ್​ ಕಗಿಸೋ ರಬಾಡ ಚೆಂಡನ್ನು ವಿಕೆಟ್​ ಕೀಪರ್​ ಡಿಕಾಕ್​​ ಹತ್ತಿರ ಎಸೆದಿದ್ದಾರೆ. ಈ ವೇಳೆ ಚೆಂಡು ಡಿಕಾಕ್​ ತಲೆ ಮೇಲೆ ಹೋಗಿದ್ದರಿಂದ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣವೇ ಮೈದಾನದಲ್ಲಿದ್ದ ಕೊಹ್ಲಿ, ಜಡೇಜಾ ಸಿಕ್ಕ ಅವಕಾಶವನ್ನು ಸರಿಯಾಗೇ ಬಳಸಿಕೊಂಡು ಸಿಂಗಲ್​ ರನ್ ಬಾಚಿದ್ದಾರೆ.ಇದರಿಂದ ಕೊಪಗೊಂಡ ರಬಾಡ, ಡಿಕಾಕ್​ಗೆ ಅವಾಚ್ಯವಾಗಿ ವಾಚ್ ‘ದಿ… ಬಾಲ್’ ಎಂದು ಬೈಯ್ದಿದ್ದಾರೆ. ಇದರಿಂದ ಪಿತ್ತ ನೆತ್ತಿಗೇರಿಸಿಕೊಂಡ ಡಿಕಾಕ್​ ಕೈಸನ್ನೆ ಮೂಲಕ ಅವರಿಗೆ ತಿರುಗೇಟು ನೀಡಿದ್ರು. ಈ ವೇಳೆ ಮೈದಾನದಲ್ಲಿದ್ದ ಕ್ಯಾಪ್ಟನ್​ ಡುಪ್ಲೆಸಿಸ್‌,​​ ರಬಾಡ ಬಳಿ ಹೋಗಿ ಸಮಾಧಾನಪಡಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!