Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಮಣಿದ ಆಂಧ್ರ.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಮಣಿದ ಆಂಧ್ರ.

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಷ್​ ಪಾಂಡೆ ನೇತೃತ್ವದ ಕರ್ನಾಟಕ ತಂಡ ಆಂಧ್ರಪ್ರದೇಶ ತಂಡವನ್ನು ಮಣಿಸಿ ಪಂಜಾಬ್​ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ. ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ರಾಜ್ಯ ತಂಡಕ್ಕೆ ರಾಹುಲ್​(33) ಹಾಗೂ ದೇವದತ್​ ಪಡಿಕ್ಕಲ್(44) ಮೊದಲ ವಿಕೆಟ್​ಗೆ 68 ರನ್​ ಸೇರಿಸಿ ಉತ್ತಮ ಆರಂಭ ನೀಡಿದ್ರು. ನಂತರ ಬಂದ ಕರುಣ್​ ನಾಯರ್ ​24 ರನ್​ಗಳಿಸಿ ಔಟಾದರು. ತಮ್ಮ ಎಂದಿನ ಫಾರ್ಮ್​ ಮುಂದುವರಿಸಿದ ಪಾಂಡೆ(50) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ಕೊನೆಯಲ್ಲಿ ಅಬ್ಬರಿಸಿದ ಕೀಪರ್​ ಶರತ್​ 38 ಎಸೆತಗಳಲ್ಲಿ 45, ಕೆ.ಗೌತಮ್ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್​ ಸಹಿತ 34 ರನ್​ಗಳಿಸಿ 278 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 279 ರನ್​ಗಳ ಗುರಿ ಪಡೆದ ಆಂಧ್ರಪ್ರದೇಶ ತಂಡ 46.5 ಓವರ್​ಗಳಲ್ಲಿ ಆಲೌಟ್​ ಆಗುವ ಮೂಲಕ 53 ರನ್​ಗಳ ಸೋಲುಕಂಡಿತು. ಶ್ರೇಯಸ್​ ಗೋಪಾಲ್​ 4, ಪ್ರಸಿದ್​ ಕೃಷ್ಣ 3 ವಿಕೆಟ್​ ಪಡೆದು ಮಿಂಚಿದರೆ, ಇವರಿಗೆ ಸಾಥ್​ ನೀಡಿದ ಮಿಥುನ್​, ಗೌತಮ್​ ಹಾಗೂ ಮೋರೆ ತಲಾ ಒಂದು ವಿಕೆಟ್​ ಪಡೆದು ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 78 ರನ್​ಗಳಿಸಿದ ಪ್ರಶಾಂತ್​ ಕುಮಾರ್​ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಪಂಜಾಬ್​ ತಂಡದೊಂದಿಗೆ ಅಗ್ರಸ್ಥಾನಕ್ಕೇರಿತು. ಆದರೆ, ರನ್​ರೇಟ್​ ಆಧಾರದ ಮೇಲೆ ಪಂಜಾಬ್​ ಮುಂದಿದೆ.ಪಾಂಡೆ ಗರಿಷ್ಠ ರನ್​:ವಿಜಯ ಹಜಾರೆ ಆರಂಭದ ಪಂದ್ಯದಿಂದಲೂ ಉತ್ತಮ ಬ್ಯಾಟಿಂಗ್​ ಕಾಯ್ದುಕೊಂಡಿರುವ ಮನೀಷ್​ ಪಾಂಡೆ 342 ರನ್​ಗಳಿಸುವ ಟೂರ್ನಿಯಲ್ಲೇ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸೇರಿದೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!