Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವಿಜೃಂಭಣೆಯಿಂದ ನಡೆದ ಬನ್ನೇರುಘಟ್ಟ ಚಂಪಾಕಧಾಮ ಸ್ವಾಮಿ ದಸರಾ ಮಹೋತ್ಸವ.

ವಿಜೃಂಭಣೆಯಿಂದ ನಡೆದ ಬನ್ನೇರುಘಟ್ಟ ಚಂಪಾಕಧಾಮ ಸ್ವಾಮಿ ದಸರಾ ಮಹೋತ್ಸವ.

ಬೆಂಗಳೂರು:- ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಶ್ವ ವಿಖ್ಯಾತ ಚಾಮುಡೇಶ್ವರಿ ಜಂಬೂ ಸವಾರಿಯನ್ನ ರಾಜ್ಯದ ಜನ ಕಣ್ಣು ತುಂಬಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಮೈಸೂರು ಮಾದರಿಯಲ್ಲಿಯೇ ಮಿನಿ ದಸರಾ ಜಂಬೂ ಸವಾರಿಯಲ್ಲಿ ನೆರವೇರಿಸಲಾಯಿತು. ಬನ್ನೇರುಘಟ್ಟದ ಐತಿಹಾಸಿಕ‌ ಚಂಪಕಧಾಮಸ್ವಾಮಿ ದೇವರ ಉತ್ಸವ ಮೂರ್ತಿಯನ್ನ ಆನೆಯ ಮೇಲೆ ಕೂರಿಸಿ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜಾತಿ ಮತಗಳ ಬೇದ ಮರೆತು ಮೇಲು ಕೀಳೆನ್ನದೆ ಎಲ್ಲ ನಾಗರೀಕರು ಸಾಮೂಹಿಕವಾಗಿ ಜಂಬೂ ಸವಾರಿಯಲ್ಲಿ ಭಾಗವಹಿಸಿದರು.ಒಂದು ಕಡೆ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಜಾನಪದ ಕಲಾ ತಂಡಗಳ ನೃತ್ಯ ವೈಭವ, ಇನ್ನೊಂದು ಕಡೆ ಚಂಪಕಧಾಮ ಸ್ವಾಮಿಯನ್ನ ಮೂರ್ತಿಯನ್ನ ಹೊತ್ತು ಸಾಗುತ್ತಿರುವ ಗಜರಾಜ, ಸಿಲಿಕಾನ್ ಸಿಟಿಯಲ್ಲಿ ಮೈಸೂರನ್ನ ನೆನಪಿಸುವ ದಸರಾ ವೈಭವ, ಈ ಎಲ್ಲಾ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ. ವಿಜಯದಶಮಿ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ದಸರಾ ಜಂಬೂ ಸವಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‌‌ ‌ಬನ್ನೇರುಘಟ್ಟ ಐತಿಹಾಸಿಕ ಶ್ರೀ ಚಂಪಕಧಾಮ ಸ್ವಾಮಿ ದೇವರ ಉತ್ಸವವನ್ನ ಆನೆಯ ಮೇಲೆ ಕೂರಿಸಿ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅದ್ದೂರಿ ದಸರಾ ಜಂಬೂ ಸವಾರಿ ಕಾರ್ಯಕ್ರಮವನ್ನ ಬೆಂ.ದಕ್ಷಿಣ ಶಾಸಕ ಕೃಷ್ಣಪ್ಪ ಚಾಲನೆ ನೀಡಿದರು. ಬನ್ನೇರುಘಟ್ಟ ಆದಿದೈವ ಚಂಪಕಧಾಮ ಸ್ವಾಮಿ ಜಂಬೂ ಸವಾರಿಯನ್ನ ವಿಕ್ಷಣೆ ಮಾಡಲು ಸಾಗರೋಪಾದಿಯನ್ನ ಜನ ರಸ್ತೆಗಳಲ್ಲಿ ಜಮಾಯಿಸಿದರು. ಕಳೆದ 20 ವರ್ಷಗಳಿಂದ ಬನ್ನೇರುಘಟ್ಟದಲ್ಲಿ ದಸರಾ ಹಬ್ಬವನ್ನ ಆಚರಣೆ ಮಾಡಲಾಗುತ್ತಿದೆಯಾದರೂ ಕಳೆದ ಐದಾರು ವರ್ಷದಿಂದ ಇದೇ ರೀತಿ ದಸರಾ ಜಂಬೂ ಸವಾರಿಯನ್ನ ಆಚರಣೆ ಮಾಡಲಾಗುತ್ತಿದೆ.‌‌‌‌ ಪ್ರತಿಯೊಬ್ಬರು ಮೈಸೂರಿಗೆ ಹೋಗಿ ದಸರಾ ಜಂಬೂ ಸವಾರಿ ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೈಸೂರು ಜಂಬೂ ಸವಾರಿ ಮಾದರಿಯಲ್ಲಿಯೇ ಗಜ ರಾಜನ ಮೇಲೆ ಅದ್ದೂರಿ ಜಂಬೂ ಸವಾರಿಯನ್ನ ಸಾವಿರಾರು ಜನ ಕಣ್ತುಂಬಿಕೊಂಡರು. ಬೆಳ್ಳಗೆ 12 ಗಂಟೆಗೆ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಬನ್ನೇರುಘಟ್ಟ ದಸರಾ ಜಂಬೂ ಸವಾರಿ ಆಚರಿಸುವ ಮೂಲಕ ರಾಜ ಮಹಾರಾಜರುಗಳ ಗತಕಾಲದ ವೈಭವವನ್ನು ಮರುಕಳಿಸುವ ಪ್ರಯತ್ನವನ್ನ ಇಲ್ಲಿನ ದಸರಾ ಸಮಿತಿ ಸದಸ್ಯರು ಅಚ್ಚುಕಟ್ಟಾಗಿ ಮಾಡಿದ್ದರು. ಈ ದಸರಾ ಉತ್ಸವದಲ್ಲಿ ಡೊಳ್ಳುಕುಣಿತ, ಜವಳಿಕುಣಿತ, ಹುಲಿವೇಷ, ಕತ್ತಿವರಸೆ, ಗಾರುಡಿಗೊಂಬೆ, ಪಟದಕುಣಿತ, ವೀರಗಾಸೆ, ಮತ್ತಿತರ ಜಾನಪದ ಕಲಾತಂಡಗಳು ಭಾಗವಹಿಸಿ ದಸರಾ ಉತ್ಸವಕ್ಕೆ ವೈಭವದ ಕಳೆ ತಂದಿತ್ತು. ಮೊದಲಿನಿಂದಲು ಸಮಾಜದಲ್ಲಿ ಬಡವ ಬಲ್ಲಿದ ಮೇಲು ಕೀಳು ಅಸ್ಪಶ್ಯರು ಎಂಬ ಭಾವನೆ ಮನೆ ಮಾಡಿ ಜಾತಿ ಜಾತಿಗಳ ನಡುವೆ ದ್ವೇಷ ಅಸೂಯೆ ಮನೋಭಾವ ಮನೆ ಮಾಡಿದೆ. ಇದರಿಂದ ಮುಕ್ತರಾಗಿ ಎಲ್ಲರು ಸರ್ವ ಸಮಾನರು ಎಂಬ ಭಾವೈಕ್ಯತೆಯ ಭಾವನೆ ಮೂಡಿಸಲು ಎಲ್ಲರೂ ಒಗ್ಗೂಡಿ ದಸರಾ ಉತ್ಸವವನ್ನ ನಡೆಸಿಕೊಂಡು ಬರಲಾಗುತ್ತಿದೆ. ಮತ್ತು ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನ ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಸರಾ ಉತ್ಸವ ನಡೆಸಲಾಗುತ್ತಿದೆ. ಬನ್ನೇರುಘಟ್ಟ ದಸರಾ ಜಂಬೂ ಸವಾರಿ ಆಯೋಜಕರಾದ ಜಯರಾಂ ತಿಳಿಸಿದರು.‌ ಒಟ್ಟಿನಲ್ಲಿ ಮೈಸೂರಿಗೆ ಹೋಗಿ ಜಂಬೂ ಸವಾರಿಯನ್ನ ನೋಡದೇ ಇರುವ ಸಿಲಿಕಾನ್ ಸಿಟಿಯ ಸಾವಿರಾರು ಜನ ಬನ್ನೇರುಘಟ್ಟ ಮಿನಿ ದಸರಾವನ್ನ ನೋಡಿ ಖುಷಿ ಪಟ್ಟರು. ಜಾತಿಭೇದ ,ಪಕ್ಷಬೇದ ಮರೆತು ಎಲ್ಲರು ಒಗ್ಗೂಡಿ ಶಿಸ್ತುಬದ್ದವಾಗಿ ನಡೆಸಿಕೊಂಡ ಬನ್ನೇರುಘಟ್ಟ ಜಂಬೂ ಸವಾರಿ ನಿಜಕ್ಕೂ ಸಿಲಿಕಾನ್ ಸಿಟಿಯ ಮಂದಿಗೆ ಮೈಸೂರು ದಸರಾವನ್ನ ನೆನಪಿಗೆ ತರುವಂತೆ ಮಾಡಿದಂತೂ ಸುಳ್ಳಲ್ಲ.

Share

About Mallesh BIG TV NEWS, BANGALORE

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!