Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವಿಶೇಷ ಚೇತನರೇ ಮತ ಹಾಕಲು ಚಿಂತೆಯೇ..? ಇದನ್ನು ಓದಿ.

ವಿಶೇಷ ಚೇತನರೇ ಮತ ಹಾಕಲು ಚಿಂತೆಯೇ..? ಇದನ್ನು ಓದಿ.

ಬೆಂಗಳೂರು: ವಿಶೇಷ ಚೇತನ ಮತದಾರರು ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಇವರಿಗೆಂದೇ ವಿಶಿಷ್ಟ ಯೋಜನೆಯನ್ನು ಚುನಾವಣಾ ಆಯೋಗ ಪರಿಚಯಿಸಿದೆ. ಇದರ ಅಡಿಯಲ್ಲಿ ವಿಶೇಷ ಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆ ತರುವುದು ಹಾಗೂ ಮತದಾನದ ಬಳಿಕ ಅವರನ್ನು ವಾಪಸ್​​ ಬಿಡಲಾಗುವುದು. ದೇಶದಲ್ಲಿಯೇ ಇದೊಂದು ಪ್ರಥಮ ಹಾಗೂ ನೂತನ ಪರಿಕಲ್ಪನೆಯಾಗಿದ್ದು, ನವಂಬರ್​ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಜಾರಿಯಲ್ಲಿರಲ್ಲಿದೆ. ಬಳಿಕ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ದೇಶಾದ್ಯಂತ ವಿಸ್ತರಿಸಲಾಗುವುದು ಅಂತಾ ಚುನಾವಣಾ ಆಯೋಗ ಹೇಳಿದೆ.ಇದಕ್ಕಾಗಿ ‘ಚುನಾವಣಾ’ ಹೆಸರಿನ ಮೊಬೈಲ್​ ಆ್ಯಪ್​ ಕೂಡ ಸಿದ್ಧವಾಗಿದೆ. ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಹಾಗೂ ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಮತ್ತು ಜಮಖಂಡಿಯ ವಿಶೇಷ ಚೇತನ ಮತದಾರರು, ಈ ಮೊಬೈಲ್​ ಆ್ಯಪ್​ನಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ವೋಟರ್​ ಐಡಿ ನಂಬರ್​​ನ್ನ ನಮೂದಿಸಬೇಕು. ನಿನ್ನೆ ಬೆಳಗ್ಗೆ 6 ಗಂಟೆಯಿಂದ ಈ ಯೋಜನೆಗೆ ಚಾಲನೆ ದೊರೆತಿದ್ದು, ಮತದಾರರು ನವಂಬರ್​​ 1ರ ತಡರಾತ್ರಿ 1 ಗಂಟೆಯೊಳಗೆ ತಮ್ಮ ವಿಳಾಸವನ್ನು ಆ್ಯಪ್​​ನಲ್ಲಿ ನಮೂದಿಸಬೇಕು. ಬಳಿಕ, ಚುನಾವಣಾ ಸಿಬ್ಬಂದಿ ನ.3ರಂದು ಮೊಬೈಲ್​ ಆ್ಯಪ್​​ನಲ್ಲಿ ನೀವು ಕೊಟ್ಟ ವಿಳಾಸಕ್ಕೆ ಬಂದು ನಿಮ್ಮನ್ನು ಮತದಾನಕ್ಕೆ ಕರೆದೊಯ್ಯುತ್ತಾರೆ.ಇನ್ನು, ಈ ವಿಶಿಷ್ಟ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಸಂಜೀವ್​ ಕುಮಾರ್​​ಗೆ ಸಲ್ಲುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೇ ಈ ಯೋಜನೆ ಜಾರಿಗೊಳಿಸಲು ಮುಂದಾಗಿದ್ದರು. ಆದ್ರೆ, ಕೆಲ ರಾಜಕಾರಣಿಗಳು ಯೋಜನೆ ಮಿಸ್​ ಯೂಸ್​ ಆಗುವ ಆತಂಕ ವ್ಯಕ್ತಪಡಿಸಿದ್ದರಿಂದ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ​​

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!