Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ವಿಶ್ವಕಪ್ ನಿಯಮ ಬದಲಾಯಿಸಿದ ಐಸಿಸಿ.

ವಿಶ್ವಕಪ್ ನಿಯಮ ಬದಲಾಯಿಸಿದ ಐಸಿಸಿ.

ಮುಂಬೈ: ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಕ್ರಿಕೆಟ್​​​​​ ಸಿಕ್ಕಾಪಟ್ಟೆ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ನಿಗದಿತ 50 ಓವರ್​ಗಳಲ್ಲಿ ಇಂಗ್ಲೆಂಡ್​ ಹಾಗೂ ನ್ಯೂಜಿಲ್ಯಾಂಡ್​ ಸಮಬಲದ ಪ್ರದರ್ಶನ ನೀಡಿದ್ದರಿಂದ ಪಂದ್ಯ ಡ್ರಾ ಆಗಿತ್ತು. ನಂತರದ ಸೂಪರ್​ ಓವರ್​​ನಲ್ಲೂ ಇದೇ ಘಟನೆ ನಡೆದಿತ್ತು. ಆದರೆ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್​ ತಂಡವನ್ನ ಚಾಂಪಿಯನ್​ ಎಂದು ಘೋಷಣೆ ಮಾಡಲಾಗಿತ್ತು.ಐಸಿಸಿ ಈ ನಿಯಮ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗೂ ಬೌಂಡರಿ ನಿಯಮದ ವಿರುದ್ಧ ಅನೇಕ ಕ್ರೀಡಾಪಟುಗಳು ಸಿಡಿಮಿಡಿಗೊಂಡು ಜಂಟಿಯಾಗಿ ವಿಶ್ವಕಪ್​​ ವಿಜೇತ ತಂಡ ಎಂದು ಘೋಷಣೆ ಮಾಡಬೇಕಿತ್ತು ಎಂದಿತ್ತು. ಸದ್ಯ ಈ ನಿಯಮವನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಬದಲಾವಣೆ ಮಾಡಿದೆ.ಐಸಿಸಿ ಪ್ರಯೋಜಕತ್ವದಲ್ಲಿ ನಡೆಯುವ ಟೂರ್ನಿಯಲ್ಲಿ ಗ್ರೂಪ್​ ಹಂತದ ಪಂದ್ಯಗಳಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ನಿಯಮ ಜಾರಿಯಾಗಲಿದ್ದು, ಪಂದ್ಯ ಟೈ ಆದರೆ ಅಂಕ ಹಂಚಿಕೆ ಹಾಗೂ ಸೆಮಿಫೈನಲ್​ ಹಾಗೂ ಫೈನಲ್​​ನಲ್ಲಿ ಒಂದು ತಂಡ ಗೆಲುವವರೆಗೂ ಸೂಪರ್​ ಓವರ್​ ನಡೆಯಲಿದೆ. ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಈ ನಿಯಮ ಜಾರಿಗೊಳ್ಳಲಿದೆ. ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟ್​ ಈ ನಿಯಮ ಜಾರಿಗೊಳಿಸಿದ್ದು, ಪುರುಷರು ಹಾಗೂ ಮಹಿಳೆಯರ ಬಿಗ್​ಬ್ಯಾಶ್​ ಟಿ-20 ಟೂರ್ನಿಗಳಲ್ಲಿ ಚಲಾವಣೆಯಲ್ಲಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!