Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು / ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಮಂಜುರಾಣಿ ಹೊಸ ದಾಖಲೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಮಂಜುರಾಣಿ ಹೊಸ ದಾಖಲೆ.

ಉಲಾನ್​ ಉದೆ(ರಷ್ಯಾ):ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಂಜುರಾಣಿ ಫೈನಲ್​ ಪ್ರವೇಶಿಸುವ ಮೂಲಕ ಬೆಳ್ಳಿಪದಕ ಖಚಿತಪಡಿಸಿದ್ದಾರೆ. 48ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಬಾಕ್ಸರ್​ ಮಂಜು ರಾಣಿ ಸೆಮಿಫೈನಲ್​ ಪಂದ್ಯದಲ್ಲಿ ಥಾಯ್ಲೆಂಡಿನ ಚುತಮಾತ್ ರಾಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದ್ದಾರ. ಈ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಇದಕ್ಕೂ ಮುನ್ನ ನಡೆದ 51 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಟರ್ಕಿ ಬಾಕ್ಸರ್​ ಎದುರು ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ, ಹರಿಯಾಣ ಮೂಲದ ಮಂಜುರಾಣಿ ಥಾಯ್​ ಬಾಕ್ಸರ್‌ಗೆ ಪಂಚ್​ ನೀಡಿ ಫೈನಲ್​ ಪ್ರವೇಶಿಸಿದ್ದಾರೆ.ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್​ಶಿಪ್ ಸ್ಪರ್ಧಿಸಿರುವ ಮಂಜು ರಾಣಿ ಭಾನುವಾರ ನಡೆಯುವ ಫೈನಲ್ಸ್ ಪಂದ್ಯದಲ್ಲಿ ರಷ್ಯಾದ ಎರಡನೇ ಶ್ರೇಯಾಂಕದ ಎಕಟೆರಿನಾ ಪಾಲ್ಟ್ಸೆವಾ ಅವರನ್ನು ಎದುರಿಸಲಿದ್ದಾರೆ. ಮಂಜುರಾಣಿ ಪದಾರ್ಪಣೆ ಟೂರ್ನಿಯಲ್ಲಿ 18 ವರ್ಷದ ಬಳಿಕ ಫೈನಲ್​ ಪ್ರವೇಶಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 2001ರಲ್ಲಿ 6 ಬಾರಿಯ ವಿಶ್ವಚಾಂಪಿಯನ್​ ಆಗಿರುವ ಮೇರಿ ಕೋಮ್​ ಕೂಡ ಪದಾರ್ಪಣೆ ಟೂರ್ನಿಯಲ್ಲಿ ಫೈನಲ್​ ತಲುಪಿದ್ದರು.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!