Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಂಚಾಯತ ಕೆಲಸಗಾರರ ಪ್ರತಿಭಟನೆ

ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಂಚಾಯತ ಕೆಲಸಗಾರರ ಪ್ರತಿಭಟನೆ

ಮಂಡ್ಯ:- ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತ ಕೆಲಸಗಾರರು ಬೀದಿಗೆ ಇರಿದು ಪ್ರತಿಭಟನೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಹೋಬಳಿಯ ಗ್ರಾಮ ಪಂಚಾಯಿತಿ ಒಂದರಲ್ಲಿ ನಡೆದಿದೆ. ಹೌದು ತಾಲೂಕಿನ ದಬ್ಬೆಘಟ ಗ್ರಾಮ ಪಂಚಾಯಿತಿ ಯಲ್ಲಿ ಸುಮಾರು 10 ತಿಂಗಳಿಂದ ವಾಟರ್ ಮ್ಯಾನ್ ಗಳಿಗೆ ವೇತನ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಾವು ನೀರು ಬಿಡುವುದು ಒಂದು ನಿಮಿಷ ತಡವಾದ್ರೆ ನಮ್ಮನ್ನು ಬಾಯಿಗೆ ಬಂದಂತೆ ಜನ ಬೈಯುತಾರೆ. ಆದರೆ ಸರ್ಕಾರ ನಮಗೆ ಕೊಡಬೇಕಾದ ವೇತನವನ್ನು ಸರಿಯಾಗಿ ಕೊಡುತಿಲ್ಲ. ಕೂಡಲೇ ಬರಬೇಕಾದ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಯ ಆಫೀಸ್ ಗೆ ಬೀಗ ಜಡಿದ್ದು, ಹಾರಿ ಗುದ್ದಲಿ ಪಿ ಕಾ ಸಿ ಪೈಪ್ ಗಳನ್ನು ಒಡೆದು ಪ್ರತಿಭಟನೆ ನೆಡೆಸಿದರು. ಈ ವೇಳೆ ಮಾತನಾಡಿದ ವಾಟರ್ ಮ್ಯಾನ್ ರುದ್ರೇಶ, 10 ತಿಂಗಳುಗಳಿಂದ ಸಂಬಳ ಕೊಡದೇ ಇರುವ ಕಾರಣದಿಂದ ಜೀವನ ನಡೆಸುವುದು ದುಸ್ತರವಾಗಿದೆ. ಅಲ್ಲದೇ ತಿನ್ನೋ ಆಹಾರಕ್ಕೂ ತೊಂದರೆ ಅನುಭವಿಸುವಂತಾಗಿದೆ. ಈ ವಿಚಾರವನ್ನು ಪಂಚಾಯಿತಿಯ ಅಧಿಕಾರಿಯಾದ ಪಿ ಡಿ ಓ ಉಮಾಶಂಕರ್ ಮತ್ತು ಅಧ್ಯಕ್ಷ ಸುರೇಶ್ ರವರ ಗಮನಕ್ಕೆ ತಂದು ಅರ್ಜಿ ಕೊಟ್ಟಿದ್ದೇವೆ. ಆದರೂ ಕೂಡ ನಮಗೆ ಸ್ಪಂದನೆ ಸಿಕ್ಕಿಲ್ಲಾ. ಕೂಡಲೇ ಪಂಚಾಯತ ಅಧಿಕಾರಿಗಳು ಹಾಗೂ ಸರ್ಕಾರ ಇದನ್ನು ಎಚ್ಚರಿಕೆ ಯಾಗಿ ತೆಗೆದುಕೊಂಡು ಕೆಲಸಗಾರರ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಕುಟುಂಬ ಸಮೇತರಾಗಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವಾಟರ್ ಮ್ಯಾನ್ ಅದ ಕಾಳೆಗೌಡ ಜಯರಾಮ್ ಸ್ವಾಮಿ ಚಂದ್ರಶೇಖರ ಕಾರ್ತಿಕ್ ಅಟೆಂಡರ್, ವೆಂಕಟರಾಮ ಬಿಲ್ ಕಲೆಕ್ಟ್ ರ್ ಯತೀಶ್ ಕ್ಲ ಕಮ್ ಬಿಇಓ ಚರಣ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!