Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವು.

ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವು.

ದಾವಣಗೆರೆ: ಮನೆಯಲ್ಲಿದ್ದ 70 ವರ್ಷದ ವೃದ್ಧನನ್ನ ಹತ್ಯೆಗೈದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಳೆದ ರಾತ್ರಿ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತ ಬಾಲಚಂದ್ರಪ್ಪ ಆಗಿದ್ದು ದಲ್ಲಾಳಿಯಾಗಿದ್ದ. ಸ್ಥಳಕ್ಕೆ ಎಸ್‍ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಾಗಿ ಬಲೆ ಬೀಸಿದ್ದಾರೆ.ಹೀಗೆ ಕೊಲೆಯಾಗಿರುವ ವೃದ್ಧ, ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಹೌದು, ದಾವಣಗೆರೆಯಲ್ಲಿ ಕಳೆದ ರಾತ್ರಿ ವೃದ್ಧನನ್ನ ಕೊಲೆ ಮಾಡಲಾಗಿದೆ. ಎಂಸಿಸಿ ಬಿ ಬ್ಲಾಕ್‍ನ ಸ್ವಿಮ್ಮಿಂಗ್ ಫೂಲ್ ಬಳಿ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ 2 ಗಂಟೆಗೆ ಕೊಲೆ ಮಾಡಲಾಗಿದೆ. ಬಾಲಚಂದ್ರಪ್ಪ ಎಂಬ ವೃದ್ಧನೇ ಕೊಲೆಯಾದ ವ್ಯಕ್ತಿ. ಈತ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ. ಎಂದಿನಂತ ರಾತ್ರಿ ಮನೆಗೆ ಬಂದಿದ್ದಾನೆ. ಈತನ ಪತ್ನಿ ಇತ್ತೀಚೆಗಷ್ಟೇ ಮೃತರಾಗಿದ್ದರು. ಈ ಕಾರಣ ಮನೆಯಲ್ಲಿ ಮಗ ಹರೀಶ್ ವಾಸವಾಗಿದ್ದರು. ಈತನ ಮಗ ನಿನ್ನೆ ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದಾನೆ. ಈ ವೇಳೆ ನೋಡಿಕೊಂಡ ಕೊಲೆಗಡುಕರು ಮನೆಗೆ ನುಗ್ಗಿ ವೃದ್ಧ ಬಾಲಚಂದ್ರಪ್ಪನನ್ನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ 1 ಗಂಟೆ ವೇಳೆಗೆ ಮನೆಗೆ ಬಂದ ಹರೀಶ್ ತಂದೆಯನ್ನ ನೋಡಿದ್ದಾನೆ. ಬಳಿಕ ಕೊಲೆಯಾಗಿರುವುದು ಗೊತ್ತಾಗಿದೆ, ಕೂಡಲೇ ಹರೀಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಅಧಿಕಾರಿಗಳು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.ಅವರ ರಾತ್ರಿ ಮನೆಗೆ ಬಂದ ವೇಳೆ ಅವರ ತಂದೆ ಕೊಲೆಯಾದ ಬಗ್ಗೆ ತಿಳಿದಿದೆ. ಆತ ಕೂಗಿಕೊಂಡ ಮೇಲೆ ನಾವು ಸಹ ಅವರ ಮನೆಗೆ ಹೋದ ವೇಳೆ ಕೊಲೆ ನಡೆದಿರುವುದು ಗೊತ್ತಾಯಿತು. ನಂತರ ಮಗ ಹರೀಶ್‍ಗೆ ಸಮಾಧಾನ ಹೇಳಿ ಪೊಲೀಸರಿಗೆ ಮಾಹಿತಿ ನೀಡಿದೆವು ಎನ್ನುತ್ತಾರೆ ಸ್ಥಳಿಯರು.ಯಾರೋ ಪರಿಚಯವಿರುವಂತವರೇ ಪೂರ್ವಯೋಜಿತ ನಡೆಸಿ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಯಾವ ವಸ್ತುಗಳು ಸಹ ಕಳ್ಳತನವಾಗದೇ ಇರುವುದು ಕೆಲ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ಸಂಬಂಧ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು. ತೀವ್ರ ತನಿಖೆ ಕೈಗೊಳ್ಳಲಾಗಿದೆ. ವೃದ್ಧನ ಕೊಲೆಯಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಟಿಗೊಂಡಿದೆ.ವರದಿ: ಕರಿಬಸವರಾಜು ದಾವಣಗೆರೆ

Share

About karibasvaraja BIG TV NEWS, Davanagere

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!