Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಶತಕ ಸಿಡಿಸಿ ಫಾರ್ಮ್ ಗೆ ಮರಳಿದ ಡೇವಿಡ್ ವಾರ್ನರ್.

ಶತಕ ಸಿಡಿಸಿ ಫಾರ್ಮ್ ಗೆ ಮರಳಿದ ಡೇವಿಡ್ ವಾರ್ನರ್.

ಬ್ರಿಸ್ಬೇನ್​​​: ಆ್ಯಶಸ್ ಸರಣಿಯಲ್ಲಿ ಕಳಪೆ ಫಾರ್ಮ್​ನಿಂದ ಸುದ್ದಿಯಾಗಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್ ಮೊದಲ ದರ್ಜೆ ಕ್ರಿಕೆಟ್​ನಲ್ಲಿ ಆಕರ್ಷಕ ಶತಕ ಸಿಡಿಸಿ ಫಾರ್ಮ್​ಗೆ ಮರಳಿದ್ದಾರೆ.ನ್ಯೂ ಸೌತ್​ ವೇಲ್ಸ್ ಹಾಗೂ ಕ್ವೀನ್ಸ್​ಲ್ಯಾಂಡ್ ಮುಖಾಮುಖಿಯಲ್ಲಿ ನ್ಯೂ ಸೌತ್​ ವೇಲ್ಸ್ ಪರ ಕಾಣಿಸಿಕೊಂಡ ವಾರ್ನರ್ 221 ಎಸೆತದಲ್ಲಿ 125 ರನ್​ ಸಿಡಿಸಿದ್ದಾರೆ. ವಾರ್ನರ್ ಶತಕದಲ್ಲಿ 19 ಬೌಂಡರಿಗಳಿದ್ದವು. ಸಿಕ್ಸರ್​ಗಳಿಲ್ಲದೆ ಶತಕ ಪೂರೈಸಿದ್ದು ವಿಶೇಷ. ಈ ಮೂಲಕ ಮೊದಲ ದರ್ಜೆ ಕ್ರಿಕೆಟ್​ನಲ್ಲಿ ವಾರ್ನರ್ ಶತಕದ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ತಂಡದ ಶೇ.62ರಷ್ಟು ರನ್​ ವಾರ್ನರ್ ಬಾರಿಸಿದ್ದು ಇನ್ನೊಂದು ವಿಶೇಷ.ಕ್ವೀನ್ಸ್​ಲ್ಯಾಂಡ್ 153 ರನ್ನಿಗೆ ಸರ್ವಪತನವಾಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ನ್ಯೂ ಸೌತ್​ ವೇಲ್ಸ್ ವಾರ್ನರ್ ಶತಕದ ನೆರವಿನಿಂದ ಎರಡನೇ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 249 ರನ್​ ಗಳಿಸಿದೆ. ಮಳೆಯಿಂದ ಪಂದ್ಯ ಅವಧಿಗೂ ಮುನ್ನವೇ ಸ್ಥಗಿತವಾಗಿದೆ.ಫ್ಲಾಪ್​ ಶೋ..! ಆ್ಯಶಸ್​ನಲ್ಲಿ ಬೌಲರ್​ಗಿಂತ ಕಳಪೆ ಆಟವಾಡಿದ ವಾರ್ನರ್..!ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದ ವಾರ್ನರ್ ಟೀಕೆಗೂ ಗುರಿಯಾಗಿದ್ದರು. ಐದು ಪಂದ್ಯಗಳಿಂದ 9.5ರ ಸರಾಸರಿಯಲ್ಲಿ ಕೇವಲ 95 ರನ್ ಮಾತ್ರ ಕಲೆ ಹಾಕಲು ಶಕ್ತರಾಗಿದ್ದರು. ಈ ಕಳಪೆ ಫಾರ್ಮ್​ ವಾರ್ನರ್ ಕ್ರಿಕೆಟ್ ಭವಿಷ್ಯದ ಮೇಲೆ ಪ್ರಶ್ನೆಯನ್ನೂ ಮೂಡಿಸಿತ್ತು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!