Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಶಿಕ್ಷಕರ ಸಂಘಟನೆ ನೀಡಿದ್ದ ಬಂದ ಕರೆ ವಿಫಲ.

ಶಿಕ್ಷಕರ ಸಂಘಟನೆ ನೀಡಿದ್ದ ಬಂದ ಕರೆ ವಿಫಲ.

Spread the love

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ರಾಜ್ಯಾದ್ಯಂತ ರಾಜ್ಯದ 55,066 ಸರ್ಕಾರಿ ಶಾಲೆಗಳ ಬಂದ್ ಗೆ ಕರೆ ನೀಡಲಾಗಿತ್ತು. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ, ವರ್ಗಾವಣೆ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಬಂದ್ ಗೆ ಕರೆ ನೀಡಿತ್ತು.ಆದರೆ ಬಂದ್ ಗೆ ಧಾರವಾಡದಲ್ಲಿ ನೀರಸ ವ್ಯಕ್ತವಾಗಿದೆ. ಪ್ರತಿದಿನದಂತೆ ಶಾಲಾ ತರಗತಿಗಳು ಯಥಾ ಪ್ರಕಾರ ನಡೆಯುವ ಮೂಲಕ ಶಿಕ್ಷಕರು ಬಂದ್ ಗೆ ತಮ್ಮ ವಿರೋಧವನ್ನು ತೋರ್ಪಡಿಸಿದ್ದಾರೆ.ಶಿಕ್ಷಕರು ತಮ್ಮ ದೈನಂದಿನ ಕಾರ್ಯಸೂಚಿ ಪ್ರಕಾರ ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡಿದರು. ಧಾರವಾಡದ ಸರ್ಕಾರಿ ಶಾಲೆಗಳು ನಿತ್ಯದಂತೆ ಕಾರ್ಯ ನಿರ್ವಹಿಸಿವೆ.‌ಸಂಘಟನೆಗಳ ಬೆಂಬಲವಿಲ್ಲ: ರಾಜ್ಯದಲ್ಲಿ ಶಿಕ್ಷಕರ ಸಂಘ, ಎನ್.ಪಿ.ಎಸ್., ಸಾವಿತ್ರಿ ಬಾ ಪುಲೆ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಈ ಯಾವ ಸಂಘಟನೆಗಳೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾತುಕತೆ ನಡೆಸದೇ ಏಕಾಏಕಿ ಬಂದ್ ಗೆ ನೀಡಿರುವದರಿಂದ ಈ ಸಂಘಟನೆಗಳು ಬಂದ್ ಗೆ ನಿರೀಕ್ಷಿತ ಬೆಂಬಲ ದೊರಕಿಸಿಲ್ಲ.ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಸಮಸ್ಯೆ ಇಂದು ನಿನ್ನೆಯದಲ್ಲ.ಶಿಕ್ಷಕರು ಕಳೆದ ಎರಡು ಮೂರು ವರ್ಷಗಳಿಂದ ಬಡ್ತಿ, ವರ್ಗಾವಣೆ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ಈಗ ಮುನ್ನೆಲೆಗೆ ತರುತ್ತಿರುವದು ಅನುಮಾನಕ್ಕೆ ಆಸ್ಪದ ನೀಡುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತವಾದ ಬಂದ್ ಆಗಿರುವದರಿಂದ ಬಂದ್ ಗೆ ನಮ್ಮ ಸಂಘಟನೆಯಿಂದ ಬೆಂಬಲ ನೀಡಿಲ್ಲಲತಾ. ಎಸ್. ಮುಳ್ಳೂರಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಧಾರವಾಡ ಘಟಕದ ರಾಜ್ಯಧ್ಯಕ್ಷರು.

Check Also

ಭಾರಿ ಬೆಲೆ ಬಾಳುವ ಅಕ್ರಮ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

Spread the loveಕೊಳ್ಳೇಗಾಲ ಭಾ.ತ.ಮ 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19 ವರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!