Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಶಿವನರೈನ್​ ಚಂದ್ರಪಾಲ್​ಗೆ ಬೌಲಿಂಗ್​ ಮಾಡುವದು ಕಷ್ಟಕರ ಎಂದ ಡೇಲ್​ ಸ್ಟೈನ್​.

ಶಿವನರೈನ್​ ಚಂದ್ರಪಾಲ್​ಗೆ ಬೌಲಿಂಗ್​ ಮಾಡುವದು ಕಷ್ಟಕರ ಎಂದ ಡೇಲ್​ ಸ್ಟೈನ್​.

ಕೇಪ್​ಟೌನ್​: ವಿಶ್ವ ಕ್ರಿಕೆಟ್​ನ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಡೇಲ್​ ಸ್ಟೈನ್​ ತಮ್ಮ ವೃತ್ತಿ ಜೀವನದಲ್ಲಿ ಸ್ಟೀವ್​ ಸ್ಮಿತ್​ರಿಗೆ ಬೌಲಿಂಗ್​ ಮಾಡುವುದಿಲ್ಲ ಎಂಬುದೇ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.ಒಂದು ವರ್ಷ ನಿಷೇಧದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ಸ್ಟೀವ್​ ಸ್ಮಿತ್​ ಕಳೆದ ತಿಂಗಳು ನಡೆದ ಮುಕ್ತಾಯವಾದ ಆ್ಯಶಸ್​ ಸರಣಿಯಲ್ಲಿ 774 ರನ್​ಗಳಿಸಿ ತಾವೊಬ್ಬ ಟೆಸ್ಟ್​ ಸ್ಪೆಷಲಿಸ್ಟ್​ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಇದೀಗ ಸ್ಮಿತ್​ ಕುರಿತು ಮಾತನಾಡಿರುವ ಸ್ಟೈನ್​, ತಾನೆಂದೂ ಸ್ಟಿವ್​ ಸ್ಮಿತ್​ಗೆ ಬೌಲಿಂಗ್​ ಮಾಡುವುದಿಲ್ಲ ಎಂಬುದೇ ಖುಷಿಯ ವಿಚಾರವಾಗಿದೆ.​ ಸ್ಮಿತ್​ ಬ್ಯಾಟಿಂಗ್​ ನಡೆಸುತ್ತಿದ್ದರೆ ಅವರಿಗೆ ಲೆಗ್​ಸೈಡ್​ ಅಥವಾ ಔಟ್​ಸೈಡ್​ಗೆ​ ಬೌಲಿಂಗ್​ ಮಾಡಬೇಕೆಂಬುದೇ ತಿಳಿಯುವುದಿಲ್ಲ. ಸ್ಮಿತ್​ ಅಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸುತ್ತಾರೆ. ಸ್ಮಿತ್​ಗೆ ಬೌಲಿಂಗ್ ಮಾಡುವುದು ಬೌಲರುಗಳಿಗೆ ಸವಾಲಿನ ಕೆಲಸ ಎಂದಿದ್ದಾರೆ. ಚಂದ್ರಪಾಲ್​ ಮತ್ತು ಸ್ಟೀವ್​ ಸ್ಮಿತ್​ಸ್ಟೈನ್​ ತಮ್ಮ ವೃತ್ತಿ ಜೀವನದಲ್ಲಿ ಸ್ಮಿತ್​ ಹಾಗೂ ವಿಂಡೀಸ್​ನ ಶಿವನರೈನ್​ ಚಂದ್ರಪಾಲ್​ಗೆ ಬೌಲಿಂಗ್​ ಮಾಡಬೇಕಾದರೆ ತುಂಬಾ ಕಷ್ಠ ಅನುಭವಿಸಿದ್ದರಂತೆ. ಇವರಿಬ್ಬರೂ ಟೆಸ್ಟ್​ ಕ್ರಿಕೆಟ್​ನ ಕ್ಲಾಸ್​ ಬ್ಯಾಟ್ಸ್​ಮನ್​ಗಳಾದ ಜಾಕ್​ ಕಾಲೀಸ್​, ಮೈಕಲ್​ ವಾನ್​ಗಿಂತಲೂ ಭಿನ್ನರಾಗಿದ್ದಾರೆ. ಕಾಲೀಸ್​, ವಾನ್​ ಅಂತಹವರಿಗೆ ಬೌಲಿಂಗ್​ ಮಾಡಬೇಕಾದರೆ ಅವರು ಅನುಸರಿಸುವ ಬ್ಯಾಟಿಂಗ್​ ತಂತ್ರಗಾರಿಕೆಯನ್ನು ಗುರುತಿಸಿ ಅದಕ್ಕೆ ತಕ್ಕನಾದ ಬೌಲಿಂಗ್​ ಮಾಡುವ ದಾರಿಯನ್ನು ಕಂಡುಕೊಂಡಿದ್ದೆ. ಆದರೆ ಸ್ಮಿತ್​-ಚಂದ್ರಪಾಲ್​ರನ್ನು ಔಟ್​ ಮಾಡುವುದು ಹೇಗೆ ಎಂಬ ಚಿಂತೆ ನನಗೆ ತುಂಬಾ ಕಾಡಿತ್ತು ಎಂದು ಸ್ಟೈನ್​ ತಿಳಿಸಿದ್ದಾರೆ.ಈಗಾಗಲೆ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಡೇಲ್​ ಸ್ಟೈನ್​ ತಾವೂ ಸ್ಮಿತ್​ಗೆ ಬೌಲಿಂಗ್​ ಮಾಡಲು ಸಾಧ್ಯವಿಲ್ಲ ಎಂಬ ವಿಚಾರವೇ ನನಗೆ ಖುಷಿ ತಂದಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.ಮುಂದಿನ ಬಿಗ್​ಬ್ಯಾಶ್‌ ​ಟಿ20 ಲೀಗ್​ನಲ್ಲಿ ಮೆಲ್ಬೋರ್ನ್​ಸ್ಟಾರ್​ ತಂಡದ ಪರ ಡೇಲ್ ಸ್ಟೈನ್ ಡೆಬ್ಯೂ ಮಾಡಲಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!