Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಶೇಂಗಾ ಬೀಜಕ್ಕಾಗಿ ರಾತ್ರಿಯಿಡೀ ಕಾದು ಕುಳಿತ ಅನ್ನದಾತ.

ಶೇಂಗಾ ಬೀಜಕ್ಕಾಗಿ ರಾತ್ರಿಯಿಡೀ ಕಾದು ಕುಳಿತ ಅನ್ನದಾತ.

ಯಾದಗಿರಿ: ದೇಶದ ಜನರ ಹೊಟ್ಟೆ ತುಂಬಿಸುವ ರೈತನೇ ರಾತ್ರಿ ಇಡೀ ಊಟ ನಿದ್ದೆ ಇಲ್ಲದೆ ಶೇಂಗಾ ಬೀಜಕ್ಕಾಗಿ ಕಾದು ಕುಳಿತ ದೃಶ್ಯಕ್ಕೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರ ಸಾಕ್ಷಿಯಾಯಿತು.ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೀಜ ಪೂರೈಕೆ ಮಾಡದೆ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿದ ಕಾರಣ ಹೆಚ್ಚಿನ ಸಂಖ್ಯೆಯ ರೈತರಿಗೆ ಶೇಂಗಾ ಬೀಜ ಸಮರ್ಪಕವಾಗಿ ಸಿಗದ ಕಾರಣ ರೈತರು ಹಾಗೂ ಮಹಿಳೆಯರು ನಿನ್ನೆ ರಾತ್ರಿಯಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಕುಟುಂಬ ಸಮೇತರಾಗಿ ಠಿಕಾಣಿ ಹೂಡಿದ್ದಾರೆ‌.ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಹಿಂಗಾರು ಹಂಗಾಮಿನಲ್ಲಿ ಶೇಂಗಾ ಬೀಜ ವಿತರಣೆ ಮಾಡಬೇಕಾಗಿದ್ದು, ಕೂಡಲೇ ಶೇಂಗಾ ವಿತರಣೆ ಮಾಡುವಂತೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದರು.ಪರಿಸ್ಥಿತಿ ಹದಗೆಡದಂತೆ ಕಾಯಲು ರೈತ ಸಂಪರ್ಕ ಕೇಂದ್ರದ ಮುಂದೆ ಖಾಕಿ ಪಡೆ ಕಾವಲು ಕಾಯುತ್ತಿದ್ದರು.

Share

About NAGARAJ Patange BIG TV NEWS, Yadgiri

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!