Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಸಂವಹನ ಕೌಶಲ್ಯ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ: ನಾಡಗೌಡ

ಸಂವಹನ ಕೌಶಲ್ಯ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ: ನಾಡಗೌಡ

Spread the love

ಹಾವೇರಿ:ವಿದ್ಯಾರ್ಥಿಯೂ ಪ್ರತಿಯೊಂದು ಸಾಧನೆಗೆ ಪೂರಕವಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ.ಅದೇರೀತಿ ಸಂವಹನ ಕೌಶಲ್ಯದಿಂದ ವ್ಯಕ್ತಿಯು ತನ್ನ ವಿಚಾರ ಹಾಗೂ ಬೌದ್ದಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಂವಹನ ಕೌಶಲ್ಯ ಪೂರಕ ಆಯುಧವಾಗಿದೆ. ಅಲ್ಲದೇ ವಿದ್ಯಾರ್ಥ ತನ್ನ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಜಿ.ಎಚ್.ಕಾಲೇಜ ನಿವೃತ್ತ ಪ್ರಾಚಾರ್ಯರಾದ ಪ್ರೋ.ಎಸ್.ಬಿ.ನಾಡಗೌಡ ತಿಳಿಸಿದರು.ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಹನ ಕೌಶಲ್ಯಗಳು ಹಾಗೂ ನೆಟ್ ಸೆಟ್ ಪರೀಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಗೆ ಪೂರಕವಾದ ಪ್ರಯತ್ನ ಎಂಬುವಂತ ಮೈಲಿಗಲ್ಲು ಇದ್ದಾಗ ಮಾತ್ರ ಸಾಧಿಸಲು ಸಾಧ್ಯ ಅದೇ ರೀತಿ ವಿದ್ಯಾರ್ಥಿಗಳು ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಕನಸನ್ನು ಹೊಂದಿರುತ್ತಾರೆ ಅಂತಹವರಿಗೆ ಸಂವಹನ ಕೌಶಲ್ಯದ ಅಗತ್ಯವಿದೆ ಅಲ್ಲದೇ ಒಬ್ಬ ಉತ್ತಮ ಸಂವಹನಕಾರನಾಗಲು ಸತತ ಓದುವುದು, ವಿಮರ್ಶೆ,ವಿಶ್ಲೇಷಣೆ ಸೇರಿದಂತೆ ಸಾಹಿತ್ಯ ಅವಿಭಾಜ್ಯ ಅಂಗಗಳನ್ನು ಅವಲೋಕಿಸುವುದು ಸೂಕ್ತವಾದ ದಾರಿಯಾಗಿದೆ ಎಂದರು.ವಿದ್ಯಾರ್ಥಿಯಾಗಿದ್ದಾಗೆ ಸಂವಹನ ಕೌಶಲ್ಯ ರೂಡಿಸಿಕೊಂಡು ಭಯ ರಹಿತವಾಗಿ ಹಾಗೂ ನಿರರ್ಗಳವಾಗಿ ಮಾತನಾಡುವಂತ ಕೌಶಲ್ಯ ಬೆಳಸಿಕೊಳ್ಳಬೇಕು. ವಿಷಯದ ಆಳರಿವು ಬೆಳೆಸಿಕೊಳ್ಳಬೇಕು ಅದಕ್ಕೆ ಸೂಕ್ತವಾದ ಭಾಷಾ ಹಿಡಿತ, ಭಾಷೆಯಲ್ಲಿನ ಪ್ರೌಢಿಮೆಗಳು ಸಂವಹನ ಕೌಶಲ್ಯದ ಆಯಾಮಗಳಾಗಿವೆ ಎಂದು ಅವರು ಹೇಳಿದರು.ಬಳಿಕ 24 ಬಾರಿ ವಿವಿಧ ರಾಜ್ಯಗಳಲ್ಲಿ ಸೆಟ್ ಹಾಗೂ 2‌ ಬಾರಿ ನೆಟ್ ತೇರ್ಗಡೆ ಹೊಂದಿದ ಡಾ.ದಾನಯ್ಯ ಕೌಂಟಗಿಮಠ ಮಾತನಾಡಿ, ಉಪನ್ಯಾಸಕರಾಗಿ ಅರ್ಹತೆ ಹೊಂದಲು ಸೆಟ್, ನೆಟ್ ಹಾಗೂ ಪಿಎಚ್ ಡಿ ಅತಿ ಅವಶ್ಯಕವಾಗಿರುತ್ತವೆ. ಸೆಟ್ ಹಾಗೂ ನೆಟ್ ಪರೀಕ್ಷೆಗಳು ಕಠಿಣವಾದ ಪರೀಕ್ಷೆಗಳಲ್ಲ ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿದ ವಿಭಾಗದಲ್ಲಿ ಕಲಿಕಾ ಅವಧಿಯಲ್ಲಿಯೇ ಆಳವಾಗಿ ಅಧ್ಯಯನ ಮಾಡಿದರೇ ಪರೀಕ್ಷೆ ಎದುರಿಸುವುದು ಸುಲಭ ಸಾಧ್ಯವಾಗಿದೆ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ಟಿವಿ, ದಿನಪತ್ರಿಕೆ ಹಾಗೂ ಪ್ರಚಲಿತ ವಿದ್ಯಮಾನಗಳತ್ತ ಕಣ್ಣುಹಾಯಿಸಬೇಕು ಅಲ್ಲದೇ ತಾನು ಪದವಿ ಪಡೆದ ಸ್ನಾತಕೋತ್ತರ ವಿಭಾಗದಲ್ಲಿ ತಾನು ಪ್ರಾರಂಭದಿಂದಲೇ ಸ್ವಲ್ಪ ಕಾಲಾವಕಾಶ ಸೆಟ್ ಹಾಗೂ ನೆಟ್ ಪರೀಕ್ಷೆ ತಯಾರಿ ನಡೆಸುವುದು ಸೂಕ್ತ ಎಂದು ಅವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಪ್ರೋ.ಅಂಗಡಿ, ಪ್ರೋ.ಕೊಲ್ಲಾಪುರಿ, ಗಿರೀಶ ಹೊಸಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!