Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸರಸ್ವತಿ ಪೂಜಾ ಹಾಗೂ ಅಕ್ಷರಾಭ್ಯಾಸ ಸಮಾರಂಭ.

ಸರಸ್ವತಿ ಪೂಜಾ ಹಾಗೂ ಅಕ್ಷರಾಭ್ಯಾಸ ಸಮಾರಂಭ.

ಮಂಡ್ಯ : ನಾಗಮಂಗಲ ಆದಿಚುಂಚನಗಿರಿ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅಕ್ಷರಾಭ್ಯಾಸ ಮತ್ತು ಸರಸ್ವತಿ ಪೂಜಾ ಸಮಾರಂಭವನ್ನು ಆಯೋಜಿಸಲಾಗಿತ್ತು.ಮಂಡ್ಯ ನಾಗಮಂಗಲ ಆದಿಚುಂಚನಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಸರಸ್ವತಿ ಪೂಜೆಯನ್ನು‌ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಸರಸ್ವತಿ ದೇವಿಯ ಮೂರ್ತಿಗೆ ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆ ಸಲ್ಲಿಸಿದರು.ಅಲ್ಲದೇ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳಿ‌ ಅಕ್ಷರಾಭ್ಯಾಸ ಮಾಡಿಸಿದರು.ನಂತರ ಆಶೀರ್ವಚನ ನೀಡಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ವಿದ್ಯೆ ಕಲಿಸುವುದೇ ಅವರ ಮುಖ್ಯ ಕರ್ತವ್ಯವಾಗಿದೆ.ಇಂದಿನ ಜಗತ್ತಿನಲ್ಲಿ ವಿದ್ಯಾವಂತರಿಗೆ ಹೆಚ್ಚಿನ ಮನ್ನಣೆ ಇದೆ.ಪ್ರತಿ ಮಕ್ಕಳು ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕು.ಅಲ್ಲದೇ ಶಿಕ್ಷಣ ಪಡೆಯುವ ಜೊತೆಗೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು.ಸಮಾಜ ಒಪ್ಪುವಂತಹ ಉತ್ತಮ ಪ್ರಜೆಗಳಾಗಿ ಮಕ್ಕಳು ತಂದೆ ತಾಯಿಗಳಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.ಪ್ರಸನ್ನನಾಥ ಸ್ವಾಮೀಜಿ, ಮಕ್ಕಳು,ಪೋಷಕರು ಮತ್ತು ಮಠದ ಭಕ್ತರು ಇದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!