Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸರ್ಕಾರ ಅಧಿವೇಶನಕ್ಕೆ ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿ: ವಾಟಾಳ್ ನಾಗರಾಜ.

ಸರ್ಕಾರ ಅಧಿವೇಶನಕ್ಕೆ ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿ: ವಾಟಾಳ್ ನಾಗರಾಜ.

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವುದು ಕ್ರಮಬದ್ದವಾಗಿದೆ ಸರಕಾರ ಯಾಕೆ ಅಧಿವೇಶನ ನಡೆಸಲು ಹಿಂದೆಟ್ಟು ಹಾಕುತ್ತಿರುವುದು ದುರ್ದೈವದ ಸಂಗತಿ ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.ಇಂದು ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದರೆ ಶಾಸಕ, ಸಚಿವರುಗಳು ಸಹ ಕುರಿಗಳು ಇದ್ದ ಹಾಗೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕುರಿಗಳೊಂದಿಗೆ ಸಭೆ ನಡೆಸಲು ಪೊಲೀಸ್ ರು ಅನುಮತಿ ನೀಡಲಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಸಭೆ ನಡೆಸಲು ಆಗುವುದಿಲ್ಲ ಎಂದರೆ ಎಮ್ಮೆ, ಕೋಣ, ಕುರಿಗಳಿಗೆ ಸಭೆ ನಡೆಸಲು ಸರಕಾರ ಅನುಮತಿ ನೀಡಬೇಕು. ಶಾಸಕ ಸಚಿವರು ಹಾಯಾಗಿ ಬೆಂಗಳೂರನಲ್ಲೇ. ಕರ್ನಾಟಕದಲ್ಲಿ ನೆರೆಯಿಂದ ಜನರ ಜೀವನವೇ ಬೀದಿ ಪಾಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಮುಖ್ಯಮಂತ್ರಿ, ಸಚಿವರಗಿಂತ ಉತ್ತಮ ಪ್ರಾಣಿ ಕುರಿ. ಸುವರ್ಣ ವಿಧಾನಸೌಧದಲ್ಲಿ ಕುರಿಗಳೊಂದಿಗೆ ಸಮ್ಮೇಳನ ನಡೆಸಲು ಪೊಲೀಸ್ ರ ಮೂಲಕ ಸರಕಾರ ಸೌಧದ 20 ಕಿಲೋಮೀಟರ್ ಹಿಂದೆಯೇ ಪೊಲೀಸರು ತಡೆದಿದ್ದಾರೆ. ಯಡಿಯೂರಪ್ಪ ಸರ್ವಾಧಿಕಾರಿ, ಮಿಲಿಟರಿ ಅಧಿಕಾರಿ, ಪೊಲೀಸ್ ದಂಡಾಧಿಕಾರಿಯಾಗಿದ್ದಾರೆ. ನಿಮ್ಮ ಕೈಯಲ್ಲಿ ರಾಜ್ಯ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ. ಬೆಳಗಾವಿಯಲ್ಲಿ ಕುರಿಗಳ ಸಮ್ಮೇಳನ ನಡೆಸಲು ಬಿಡದ ಪೊಲೀಸರು ಅವುಗಳನ್ನು ಬಂಧಿಸಿದ್ದಾರೆ. ಕೂಡಲೇ ಅವುಗಳನ್ನು ಬಿಡಬೇಕೆಂದು ಒತ್ತಾಯಿಸಿದರು.

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!