Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಸಾಧನೆಗೆ ಗುರುವಿನ ಆಶೀರ್ವಾದವೇ ಶ್ರೀರಕ್ಷೆ: ಚನ್ನಣ್ಣವರ

ಸಾಧನೆಗೆ ಗುರುವಿನ ಆಶೀರ್ವಾದವೇ ಶ್ರೀರಕ್ಷೆ: ಚನ್ನಣ್ಣವರ

Spread the love

ಮಣಕವಾಡ: ಸಾಧನೆಗೆ ಪೂರಕ ಶಕ್ತಿಯಾಗಿ ಗುರು ಯಾವಾಗಲೂ ಜೊತೆಯಿರುತ್ತಾನೆ ಪ್ರತಿಯೊಂದು ಸಾಧನೆಯ ಹಿಂದೆ ಗುರು ಇರುವುದು ಸತ್ಯ ಸಂಗತಿ ಜಗತ್ತಿನಲ್ಲಿ ದುಡ್ಡು ಒಂದು ದಿನ ಬರಬಹುದು ಒಂದು ದಿನ ಹೋಗಬಹುದು ಆದರೆ ಗಳಿಸಿಕೊಂಡ ಜ್ಞಾನ ಎಂದಿಗೂ ಅದು ಬಾಳಿನ ಬುತ್ತಿಯಾಗಿರುತ್ತದೆ ಎಂದು ಬೆಂಗಳೂರು ಪಶ್ಚಿಮ ಪೊಲೀಸ್ ಅಧೀಕ್ಷಕರಾದ ರವಿ ಚನ್ನಣ್ಣವರ ತಿಳಿಸಿದರು.ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಅಯೋಜಿಸಲಾಗಿರುವ ನಿರಂಜನ ಪಟ್ಟಾಧಿಕಾರ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಯುವ ಸಮುದಾಯ ಕುರಿತಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಜೊತೆಗೆ ಒಂದು ಆತ್ಮಶಕ್ತಿ ಎಂಬುವಂತದ್ದು, ಇರುತ್ತದೆ. ಸತತ ಪ್ರಯತ್ನ ಹಾಗೂ ತಾಳ್ಮೆಯೊಂದಿಗೆ ಹಿಡಿದ ಕಾರ್ಯ ಚಾಚು ತಪ್ಪದೆ ನಿಭಾಯಿಸಿದ್ದಲ್ಲಿ ಸಾಧಿಸುವುದು ದೊಡ್ಡ ವಿಷಯವಲ್ಲ. ಹುಟ್ಟು ಬಡತನವಾಗಿದ್ದರೂ ಕೂಡ ಸಾಧಿಸುವ ಛಲವೊಂದಿದ್ದರೇ ಸಾಧನೆ ದಾರಿ ಹೂವಿನ ಹಾಸಿನಂತೆ ಗೋಚರಿಸುತ್ತದೆ ಎಂದರು. ಪ್ರತಿಯೊಬ್ಬ ಯುವಕ ಹಾಗೂ ಯುವತಿಯರು ತಮ್ಮ ಅಮೂಲ್ಯ ಜೀವನವನ್ನು ಅನ್ಯ ಕಾರ್ಯಗಳಿಂದ ಕಾಲಹರಣ ಮಾಡದೇ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಆಶಯದೊಂದಿಗೆ ಶ್ರಮಿಸಿದಾಗ ಮಾತ್ರ ಸಾಧಿಸಲು ಸಾಧ್ಯ ಎಂದು ಅವರು ತಿಳಿಸಿದರು.ಬಳಿಕ ಮಾತನಾಡಿದ ಯುವ ವಿಜ್ಞಾನಿ ಪ್ರದೀಪ, ಆಧುನಿಕ ಜಗತ್ತು ವೈಜ್ಞಾನಿಕ ರಂಗದತ್ತ ಕ್ಷಿಪ್ರ ಬೆಳವಣಿಗೆಯಲ್ಲಿ ತೊಡಗಿರಲು ಯುವ ಸಮುದಾಯ ಇದರೊಂದಿಗೆ ತಮ್ಮ ಐಚ್ಚಿಕ ಕಾರ್ಯದತ್ತ ಕಣ್ಣು ಹಾಯಿಸಿ ಬೌದ್ಧಿಕ ಶ್ರಮ ವಹಿಸಿ ಸಾಧನೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಮಣಕವಾಡ ಶ್ರೀ ಗುರು ಅನ್ನದಾನೀಶ್ವರ ದೇವಮಂದಿರದ ಸಿದ್ದರಾಮದೇವರು, ಜಗದ್ಗುರು ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಎಸ್ ಎಲ್ ಶಿವಳ್ಳಿ,ರಮೇಶ್ ಕೊಪ್ಪದ, ಈಶ್ವರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Check Also

Featured Video Play Icon

ಯರಗುಪ್ಪಿ ಮುಖ್ಯ ರಸ್ಥೆಯಲ್ಲಿ ಗುಂಡಿಗಳದೇ ಕಾರುಬಾರು

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!