Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸಿಂಧನೂರಿನ 4 & 5 ನೇ ವಾರ್ಡ್ ಜನರ ಗೋಳು ಕೇಳವರ್ಯಾರು

ಸಿಂಧನೂರಿನ 4 & 5 ನೇ ವಾರ್ಡ್ ಜನರ ಗೋಳು ಕೇಳವರ್ಯಾರು

ರಾಯಚೂರು:- ಜಿಲ್ಲೆಯ ಸಿಂಧನೂರು ನಗರದ 4 ಮತ್ತು 5ನೇ ವಾರ್ಡ್ ಗಳಿಗೆ ಒಳಪಡುವ ಬಪ್ಪೂರು ರಸ್ತೆಯಲ್ಲಿರುವ ಜನರ ಗೋಳು‌ ಕೇಳುವವರು ಯಾರೂ ಇಲ್ಲದಂತಾಗಿದೆ. ಹೌದು, ಕಳೆದ ಐದಾರು ವರ್ಷಗಳ ಹಿಂದೆ ನಿರ್ಮಿಸಿದ ಸುಮಾರು ಹತ್ತು ಅಡಿ ಅಗಲದ ಚರಂಡಿಗೆ ಮೇಲ್ಚಾವಣಿ ಹಾಕದೆ ನಗರಸಭೆ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿ ಒದ್ದಾಡುವಂತ ಪರಿಸ್ಥಿತಿಗೆ ಕಾರಣವಾಗಿದೆ. ಮನೆಯ ಬಾಗಿಲ ಮುಂದೆಯೇ ನಿರ್ಮಾಣಗೊಂಡಿರುವ ಸಮಾರು 10 ಅಡಿ ಅಗಲದ ಚರಂಡಿಯನ್ನು ದಾಟಲು ಕಟ್ಟಿಗೆಯ ಹಲಗೆಗಳನ್ನು ಹಾಕಿ ದಾಟಿಕೊಂಡು ಹೋಗುವಂತ ಕಷ್ಟ ಅವರಿಗೆ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ರಾತ್ರಿ ವೇಳೆ ಮಕ್ಕಳು ಮತ್ತು ವಯಸ್ಸಾದ ವೃದ್ಧರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಚರಂಡಿಯನ್ನು ದಾಟುತ್ತಿದ್ದಾರೆ. ಇನ್ನೂ ಮಳೆ ಬಂದರಂತೂ ಇವರ ಪರಿಸ್ಥಿತಿ ಅಧೋಗತಿಗೆ ತಲುಪುತ್ತದೆ. ಸುಮಾರು ಹತ್ತು ಅಡಿ ಆಳವಿರುವ ಈ ಚರಂಡಿಯು ಹೂಳು ತುಂಬಿಕೊಂಡಿದೆ. ನಗರದ 10, 11, 12,13 ಮತ್ತು 15ರ ವಾರ್ಡ್ ಗಳಿಂದ ಇದೇ ಚರಂಡಿಗೆ ನೀರು ಹರಿದು ಬರುವುದರಿಂದ ಚರಂಡಿ ಪಕ್ಕದಲ್ಲಿರುವ ಮನೆಗಳಿಗೆ ನೇರವಾಗಿ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ. ಐದಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಚರಂಡಿಗೆ ಮೇಲ್ಚಾವಣಿ ಹಾಕದೆ ನಮ್ಮಿಂದ ಹಾರಿಸಿ ಹೋದ ಕೌನ್ಸಿಲರ್ಗಳು ಪೌರಾಯುಕ್ತರು ಇತ್ತಕಡೆ ಸುಳಿಯುವುದೇ ಇಲ್ಲ ಎಂದು ನೋವು ತೊಡಿಕೊಳ್ಳುತ್ತಾರೆ ಅಲ್ಲಿನ ಜನರು. ಈ ಚರಂಡಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕಳೆದ 2 ವರ್ಷಗಳ ಹಿಂದೆಯೇ ನಗರೋತ್ತಾನ್ ಶೇಸ್ತ್ರಿಗೆ ಟೆಂಡರ್ ಆದರೂ ಸಹ ಇದುವರೆಗೂ ಯಾವುದೇ ಚರಂಡಿ ಮೇಲ್ಚಾವಣಿಯ ಕಾಮಗಾರಿ ಹಾಗಿಲ್ಲ ಇದಕ್ಕೆಲ್ಲಾ ನಗರಸಭೆ ದುರಾಡಳಿತದ ವ್ಯವಸ್ಥೆಯೇ ಕಾರಣ ಎನ್ನಬಹುದು. ಸರ್ಕಾರ ನಗರಗಳನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಹಣ ಬಿಡುಗಡೆ ಮಾಡಿದರೂ ಸಹ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದೆ ನಗರಸಭೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದು ಅತ್ಯಂತ ಶೋಚನೀಯ ಸಂಗತಿ ಎನ್ನಬಹುದು. ಈಗಲಾದರೂ ಸಂಬಂಧಪಟ್ಟ ವಾರ್ಡ್ ಗಳ ಜನಪ್ರತಿನಿಧಿಗಳು, ನಗರಸಭೆಯ ಪೌರಾಯುಕ್ತರು ಇತ್ತಕಡೆ ಗಮನ ಹರಿಸಿ ಹೂಳು ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸಿ ಮೇಲ್ಛಾವಣಿ ನಿರ್ಮಿಸಿ ಬಡಜನರ ನೋವಿಗೆ ಸ್ಪಂದಿಸಬೇಕಾಗಿದೆ.

Share

About Ramesh BIG TV NEWS, Raichur

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!