Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Spread the love

ಧಾರವಾಡ: ರಾಜ್ಯದಲ್ಲಿ ಅಲ್ಪ ಮತಕ್ಕೆ ಕುಸಿದ ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯ ಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಲು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು.
ರಾಜ್ಯದಲ್ಲಿ ಜನವಿರೋಧಿ ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈ ಸರಕಾರದ ಕಾರ್ಯವೈಖರಿಯಿಂದಾಗಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಶಾಸಕರು, ಸಚಿವರು ರಾಜಿನಾಮೆ ನೀಡುವ ಮೂಲಕ ಸರಕಾರವು ಅಲ್ಪ ಮತಕ್ಕೆ ಕುಸಿದಿದ್ದು, ಇದರ ನೈತಿಕ ಹೊಣೆ ಹೊತ್ತು ಕೂಡಲೇ ಕುಮಾರ ಸ್ವಾಮಿಯವರು ರಾಜಿನಾಮೆ ನೀಡಬೇಕು ಮತ್ತು ರಾಜ್ಯದ ಜನರಿಂದ ತಿರಸ್ಕಾರಗೊಂಡ ಈ ಮೈತ್ರಿ ಸರ್ಕಾರ ರಾಜ್ಯವನ್ನು ಅಧೋಗತಿಗೆ ತಂದು ನಿಲ್ಲಿಸಿದ್ದು ಇಂತಹ ಸರಕಾರ ರಾಜ್ಯಕ್ಕೆ ಬೇಡ. ಘನವೆತ್ತ ರಾಜ್ಯಪಾಲರಾದ ತಾವು ಮಾನ್ಯ ಮುಖ್ಯಮಂತ್ರಿಗಳ ರಾಜಿನಾಮೆಗೆ ಪಡೆದು ಈ ಸರ್ಕಾರವನ್ನು ವಜಾಗೊಳಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂಧರ್ಬದಲ್ಲಿ ಜಿಲ್ಲಾಧ್ಯಕ್ಷರಾದ ನಾಗೇಶ ಕಲಬುರ್ಗಿ, ಸಂಜಯ ಕಪಟಜರಮ ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಈರೇಶ ಅಂಚಟಗೇರಿ, ಪ್ರಕಾಶ ಗೋಡಬೋಲೆ, ದತ್ತ ಮೂರ್ತಿ ಕುಲ್ಕರ್ಣಿ, ಯಲ್ಲಪ್ಪ ಅರವಾಳದ, ಶಂಕರ ಮುಗುದ, ಶಶಿಧರ ಕುಲ್ಕರ್ಣಿ, ಬಲರಾಮ ಕುಸುಗಲ್ ,ಸತೀಷ ಸೇಜವಾಡಕರ, ಮೋಹನ ರಾಮದುರ್ಗ, ಈರಣ್ಣ ಹಪಳಿ, , ವಾಣಿಶ್ರೀ ಮೋಟೆಕರ ಸುನಿತಾ ಹಿರೇಮಠ ಹಾಗು ಅನೇಕರು ಉಪಸ್ಥಿತರಿದ್ದರು.

Check Also

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

Spread the loveಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!