Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಸಿದ್ಧರಾಮಯ್ಯನವರಿಗೆ ಮಾನ‌ಮರ್ಯಾದೇ ಇಲ್ಲ: ಶೆಟ್ಟರ್ ಆರೋಪ

ಸಿದ್ಧರಾಮಯ್ಯನವರಿಗೆ ಮಾನ‌ಮರ್ಯಾದೇ ಇಲ್ಲ: ಶೆಟ್ಟರ್ ಆರೋಪ

Spread the love

ಹುಬ್ಬಳ್ಳಿ: ನಾಚಿಕೆ ಮಾನ ಮರ್ಯಾದೇ ಇಲ್ಲದ ವ್ಯಕ್ತಿ ಎಂದರೆ ಅದು ಸಿದ್ಧರಾಮಯ್ಯನವರು, ಧಾರವಾಡ ಜಿಲ್ಲೆಯ ಜನರು ಕುಡಿಯುವ ನೀರಿಗೆ ಕಲ್ಲು ಹಾಕಿರುವ ಕೆಟ್ಟ ರಾಜಕಾರಣಿ ಎಂದರೆ ಅದು ಸಿದ್ಧರಾಮಯ್ಯನವರು.ಹಾವಿಗೆ ಹನ್ನೆರಡು ವರ್ಷ ದ್ವೇಷವಾದರೇ ಸಿದ್ದರಾಮಯ್ಯ ಅವರಿಗೆ ಸಾಯುವ ವರೆಗೂ ದ್ವೇಷ. ಸಿದ್ದರಾಮಯ್ಯ ಲೈಫನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ದ್ವೇಷಮಾಡಲು ಒಂದು ಕೊನೆ ಎಂಬುದು ಇರಬೇಕು. ವೀರಶೈವರಿಗೆ ದೊಡ್ಡಮಟ್ಟದ ಅನ್ಯಾಯ‌ ಮಾಡಿರುವುದು ಕಾಂಗ್ರೆಸನವರು ಎಂದು ಗಂಭೀರವಾಗಿ ಆರೋಪಿಸಿದರು. ನೂರಾರು ಡಿಕೆಸಿ, ನೂರಾರು ಸಿದ್ದರಾಮಯ್ಯ ಬಂದರೂ ಕೂಡ ಕುಂದಗೋಳ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯನವರ ಹಾಗೇ ಅವಾಚ್ಯ ಶಬ್ದಗಳನ್ನು ಮಾತನಾಡಲು ಬರುವುದಿಲ್ಲ. ಅವರ ಅಸ್ಲೀಲ ಸಂಸ್ಕೃತಿ ಅವರನ್ನು ಸೂಚಿಸುತ್ತದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಚೇಲಾಗಳಿಂದ ಮುಂದಿನ ಸಿಎಂ ಸಿದ್ಧರಾಮಯ್ಯನವರು ಎಂದು ಹೇಳಿಸುವಂತ ಕೆಲಸ ಮಾಡಿಸುತ್ತಿದ್ದಾರೆ. ಎಚ್.ಎಂ.ಟಿಯಲ್ಲಿ ಸೋಲಲು ಸಿದ್ಧರಾಮಯ್ಯನವರೇ ಕಾರಣ ಸಿದ್ಧರಾಮಯ್ಯನವರು ಲೈಫನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಅವರು ಹೇಳಿದರು.ಧಾರವಾಡ ಫೇಡೆ ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಖಾರವಾಗಿ ಪರಿಣಮಿಸಲಿದೆ.ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಗೆಲವು ನಿಶ್ಚಿತವಾಗಿದೆ‌. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಧಾರವಾಡ ಫೇಡೆಯನ್ನು ನೀಡಿ ಬಿಳ್ಕೊಡುತ್ತೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.ಸಿದ್ಧರಾಮಯ್ಯನವರ ನೈತಿಕತೆಯ ಬಗ್ಗೆ ನಾನು ಪ್ರಶ್ನಿಸಿದ್ದೀನಿ. ಸಿದ್ದರಾಮಯ್ಯನವರು ಬಿಜೆಪಿ ಮುಖಂಡರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಖಂಡನೀಯವಾಗಿದೆ. ಸಂಶಿಯಲ್ಲಿ ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಿದರು ಆದರೇ ಇದುವರೆಗೂ ಯಾವ ನಿರಂತರವೂ ಇಲ್ಲ ಯಾವ ಜ್ಯೋತಿಯು ಇಲ್ಲ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು. ಬಹಿರಂಗ ಪ್ರಚಾರ ಮುಕ್ತಾಯಗೊಳ್ಳುತ್ತಿದೆ ಇಂತಹ ಸಂದರ್ಭದಲ್ಲಿ ಡಿಬೆಟಗೆ ಬನ್ನಿ ಎಂದು ಕರೆಯುತ್ತಿರುವುದು ಡಿಕೆಸಿಯವರದು ಮುರ್ಖತನದ ಪರಮಾವಧಿ.ಬಳ್ಳಾರಿಯಲ್ಲಿ ಉಗ್ರಪ್ಪ ಗೆದ್ದಿದ್ದರು ಕೂಡ ಯಾವುದೇ ಜನಪರ ಯೋಜನೆ ಜಾರಿಯಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.ಸಾವಿರಾರು ಕೋಟಿ ಅನುದಾನವನ್ನು ಬಿಜೆಪಿಯಿಂದ ಕುಂದಗೋಳ ಕ್ಷೇತ್ರಕ್ಕೆ ನೀಡಲಾಗಿದೆ.ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ವ್ಯವಸ್ಥಿತವಾಗಿ‌ ಪೂರ್ಣಗೊಂಡಿರುವುದು ಅದು ಬಿಜೆಪಿಯ ಕೊಡುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು ಇಪ್ಪತ್ತು-ಮುವತ್ತೂ ಗ್ರಾಮಪಂಚಾಯತ ಕಟ್ಟಡ ನಿರ್ಮಾಣ ಮಾಡಲಾಗಿದೆ.ಮಲಪ್ರಭಾ ಕೆನಲ್ ಮೂಲಕ ಕುಂದಗೋಳ ಭಾಗದ 19ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುವರ್ಣ ಗ್ರಾಮ ಯೋಜನೆಯಲ್ಲಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹಲವಾರು ಜನಪ್ರೀಯ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರದ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು ಭಾಗದಲ್ಲಿ ಕೂಡ ಉತ್ತಮವಾದ ಜನರ ಬೆಂಬಲ ಸಿಗುತ್ತಿರುವುದನ್ನು ನೋಡಿದರೇ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿಯವರು ಗೋಡ್ಸೆ ಸಿದ್ಧಾಂತ ಒಪ್ಪಿಕೊಂಡಿದ್ದಾರೆ ಎಂಬುವಂತ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಯಾವುದೇ ಗೋಡ್ಸೆ ಸಿದ್ದಾಂತವನ್ನು ಒಪ್ಪಿಕೊಳ್ಳುವುದಿಲ್ಲ ನಾವೇಲ್ಲ ಬಿಜೆಪಿಗರು ಗೋಡ್ಸೆ ವಿರೋಧಿಗಳು ಎಂದು ಅವರು ಹೇಳಿದರು.ಮಹದಾಯಿ ವಿಚಾರಣೆ* : ಇಷ್ಟು ದಿನ ಸುಮ್ಮನೆ ಕುಳಿತು ಚುನಾವಣೆ ಎರಡು ದಿನ ಬಾಕಿ ಇರುವಾಗ ಮಹದಾಯಿ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಜಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಡಿ.ಕೆ.ಸಿ ವಿರುದ್ಧ ವಾಗ್ದಾಳಿ ನಡೆಸಿದರು. ನೋಟಿಪಿಕೇಶನ್ ಇಸ್ಯೂ ಬಗ್ಗೆ ಯಾಕೆ ಎಚ್.ಡಿ.ಕೆ., ಸಿದ್ಧರಾಮಯ್ಯ, ಡಿ.ಕೆ.ಸಿಯವರು ಉತ್ತರ ನೀಡಲಿ ಎಂದು ಅವರು ಹೇಳಿದರು.ಬಾಕ್ಸ್: ಕಾಂಗ್ರೆಸ್ ಮುಖಂಡರು ಹಣವನ್ನು ಹಂಚಲು ಗೂಡಾಚಾರಿಗಳನ್ನು ನೇಮಕ ಮಾಡುವ ಮೂಲಕ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ.ರವಿ, ಮಹೇಶ ತೆಂಗಿನಕಾಯಿ ಸೇರಿದಂತೆ ಇತರರು ಇದ್ದರು.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!