Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಸಿನಿಮಾ ನಟಿ ಮಾಯಾ ವಿರುದ್ಧ #MeToo ಆರೋಪ

ಸಿನಿಮಾ ನಟಿ ಮಾಯಾ ವಿರುದ್ಧ #MeToo ಆರೋಪ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮೀಟೂ ಚಳುವಳಿ ದಿನದಿಂದ ದಿನಕ್ಕೆ ಎಲ್ಲಾ ರಂಗಕ್ಕೂ ಹಬ್ಬಿಕೊಳ್ತಿದೆ. ಈಗಾಗಲೇ ಸಿನಿಮಾ, ಕ್ರೀಡೆ, ಉದ್ಯಮಕ್ಕೆ ಅಂಟಿರುವ ಮೀಟೂ ಘಾಟು ರಂಗಭೂಮಿಗೂ ಅಂಟಿಕೊಂಡಿದೆ. ರಜನಿಕಾಂತ್​ ಅಭಿನಯದ 2.0 ಚಿತ್ರದಲ್ಲಿ ನಟಿಸಿರುವ ಮಾಯಾ ಎಸ್​.ಕೃಷ್ಣನ್​ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದ್ದು, ರಂಗಭೂಮಿ ಕಲಾವಿದೆ ಅನನ್ಯ ರಾಮ್​ ಪ್ರಸಾದ್​​, ಮಾಯಾ ಅವರು ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ‘ನನಗಾಗ 18ವರ್ಷ ವಯಸ್ಸು. 25ವರ್ಷದ ಮಾಯಾಳನ್ನ 2016ರಲ್ಲಿ ಒಂದು ನಾಟಕದ ಪ್ರೊಡಕ್ಷನ್​ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದೆ. ಆ ಭೇಟಿಯೇ ನನ್ನ ಬದುಕಿಗೆ ಮುಳುವಾಯಿತು. ಆಕೆ ನಿಧಾನವಾಗಿ ನನ್ನ ಬದುಕನ್ನ ತನ್ನ ತೆಕ್ಕೆಗೆ ತೆಗೆದುಕೊಂಡಳು. ನನ್ನ ಬಾಲ್ಯದ ಗೆಳೆಯ/ಗೆಳತಿಯರೊಂದಿಗೆ ಮಾತನಾಡದಂತೆ ಮಾಡಿದಳು. ನನ್ನ ಸ್ನೇಹಿತರ ಬಳಿ ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿ ನನ್ನನ್ನು ದ್ವೇಷಿಸುವಂತೆ ಮಾಡಿದಳು’ ಅಂತಾ ಅನನ್ಯ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!