Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸಿಮೆಂಟ್ ತುಂಬಿದ ಲಾರಿ ಹರಿದು 3 ಸಾವು, ಇಬ್ಬರು ಗಂಭೀರ ಗಾಯ

ಸಿಮೆಂಟ್ ತುಂಬಿದ ಲಾರಿ ಹರಿದು 3 ಸಾವು, ಇಬ್ಬರು ಗಂಭೀರ ಗಾಯ

ಚಿಕ್ಕೋಡಿ:ಸಿಮೆಂಟ್ ತುಂಬಿದ ಲಾರಿ ಹರಿದು ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಕಾಗವಾಡದಲ್ಲಿ ನಡೆದಿದೆ.ದಸರಾ ಹಬ್ಬದ ಪ್ರಯುಕ್ತ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಸಿಮೆಂಟ್ ತೆಗೆದುಕೊಂಡ ಬಂದ ಲಾರಿ ಹಾಯ್ದ ಪರಿಣಾಮ ಸ್ಥಳದಲ್ಲೇ ಬಾಲಕ ಸೇರಿದಂತೆ ಇಬ್ಬರು ಭಿಕರ ಸಾವು ಹೊಂದಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟಣೆ ಕಾಗವಾಡದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.ಕಾಗವಾಡ ಪಟ್ಟಣದ ಪಾಟೀಲ ಗಲ್ಲಿಯ ಸಚೀನ ಕಲ್ಲಪ್ಪಾ ಪಾಟೀಲ(40), ಸಂಜೀವ ರಾವಸಾಹೇಬ ಪಾಟೀಲ(35), ಬಾಲಕ ಅಭಿಲಾಶ ಅಶೋಕ ಗುಳಾಪನ್ನವರ(03) ಸ್ಥಳದಲ್ಲೇ ಮೃತ ಪಟ್ಟ ದುರ್ದೈವಿಗಳುಅಭಿಷೇಕ ಶಾಂತಿನಾಥ ಮಾಲಗಾಂವೆ(20), ರಾಜಶ್ರೀ ಪ್ರಕಾಶ ಪಾಟೀಲ(40) ಗಂಭೀರ ಗಾಯಗೊಂಡವರು ಹೆಚ್ಚಿನ ಚಿಕಿತ್ಸೆಗೆ ಮಿರಜದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದುಕಾಗವಾಡ ಪಟ್ಟಣದಲ್ಲಿ ಸ್ಥಾಪಿಸಿದ ದುರ್ಗಾದೇವಿ ದೌಡ ಮಂಡಳದ ಕಾರ್ಯಕರ್ತರು ಮೂರ್ತಿ ವಿಸರ್ಜನೆಗಾಗಿ ಕೃಷ್ಣಾ ನದಿಗೆ ತರಳಿದ್ದರು. ಸಂದರ್ಭದಲ್ಲಿ ಕಾಗವಾಡ-ಗಣೇಶವಾಡಿ ಮಾರ್ಗದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಸೋಲಾಪುರದಿಂದ ಬಂದ ಲಾರಿ ಗುಲಬರ್ಗಾದಿಂದ ಸಿಮೆಂಟ್ ತೆಗೆದುಕೊಂಡು ಕೊಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಭಾರಿ ತೂಕಿನ ಲಾರಿ ಚಾಲಕ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರ ಮೇಲೆ ಹರಿಸಿದ ದುರ್ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದು. ಮೆರಣಿಗೆಯಲ್ಲಿ ಕುನಿದು ಸುಸ್ತಾದ ಕೆಲವರು ನೀರು ಕುಡಿಯಲು ರಸ್ತೆ ಬಳಿಯಿರುವ ಮನೆಗೆ ಹೋಗಿದ್ದರು. ಇದರಿಂದ ಬಹಳಷ್ಟು ಅನಾಹುತ ತಪ್ಪಿದೆ. ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನದೂರು ದಾಖಲಾಗಿದೆ.

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!