Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸಿಸಿಬಿ ಪೊಲೀಸರ ವಿರುದ್ಧವೇ ಎಫ್​ಐಆರ್…

ಸಿಸಿಬಿ ಪೊಲೀಸರ ವಿರುದ್ಧವೇ ಎಫ್​ಐಆರ್…

ಬೆಂಗಳೂರು:‌ ಸಿಸಿಬಿ ಪೊಲೀಸರ ಮೇಲೆಯೇ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯಾಲಯದ ಅದೇಶದಂತೆ ಇಬ್ಬರು‌ ಸಿಸಿಬಿ ಇನ್ಸಪೆಕ್ಟರ್ ಒಬ್ಬ ಸಬ್ ಇನ್ಸ್​ಪೆಕ್ಟರ್ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಕಳೆದ ಮಾರ್ಚ್ 28 ರಂದು‌ ಜಿತೇಶ್ ಎಂಬವರ ರಿಕ್ರಿಯೇಶನ್ ಕ್ಲಬ್ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ ಕ್ಲಬ್​ ಮಾಲೀಕ ‌ಜಿತೇಶ್​ರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಜಿತೇಶ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್​ ಸಿಸಿಬಿ ಪೊಲೀಸರ ವಿರುದ್ಧ ದೂರು ‌ದಾಖಲಿಸಲು ‌ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್​ 341, 384, 441 ರ ಆಡಿ ಬಸವೇಶ್ವರ ನಗರ ಠಾಣೆಯಲ್ಲಿ ಇನ್ಸ್​ಪೆಕ್ಟರ್ ರಮೇಶ್ ರಾವ್, ಪ್ರಕಾಶ್ ಹಾಗೂ ಸಬ್ ಇನ್ಸ್​ಪೆಕ್ಟರ್ ಅಶ್ವಥಯ್ಯ ವಿರುದ್ಧ ದೂರು ದಾಖಲಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!