Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಸೇನಾ ಫೋಟೋ ಬಳಸುವಂತಿಲ್ಲ’’ ಚುನಾವಣಾ ಆಯೋಗ ಖಡಕ್​ ವಾರ್ನಿಂಗ್​..!

ಸೇನಾ ಫೋಟೋ ಬಳಸುವಂತಿಲ್ಲ’’ ಚುನಾವಣಾ ಆಯೋಗ ಖಡಕ್​ ವಾರ್ನಿಂಗ್​..!

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಲೋಕ ಸಮರಕ್ಕೆ ದಿನ ನಿಗದಿ ಮಾಡುವ ತಯಾರಿಯಲ್ಲಿದೆ. ಆದ್ರೆ, ಇತ್ತ ರಾಜಕೀಯ ಪಕ್ಷಗಳು ಯೋಧರ ಫೋಟೋ ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ಇದಕ್ಕೆ ಬ್ರೇಕ್​​ ಹಾಕಲೆಂದೇ ಆಯೋಗ ರಾಜಕೀಯ ಪಕ್ಷಗಳಿಗೆ ಖಡಕ್​ ವಾರ್ನ್ ಮಾಡಿದೆ.‘ತಮ್ಮ ಕಾಲದಲ್ಲಿ ಏರ್​ಸ್ಟ್ರೈಕ್​ ನಡೆಸಿ ಉಗ್ರರನ್ನು ಮಟ್ಟ ಹಾಕಿದ್ದೇವೆ’ ಅಂತಾ ಬಿಜೆಪಿ ಎಲೆಕ್ಷನ್​ ಱಲಿಗಳಲ್ಲಿ ಬೊಬ್ಬೆ ಹೊಡಿತಿದ್ರೆ, ವಿಪಕ್ಷಗಳು ಇದಕ್ಕೆ ಸಾಕ್ಷಿ ನೀಡುವಂತೆ ಪ್ರಧಾನಿ ಮೋದಿ ಮೇಲೆ ಮುಗಿ ಬೀಳುತ್ತಿವೆ. ಇದೇ ವೇಳೆ, ಇದರ ಸಾಧಕ ಬಾಧಕಗಳನ್ನು, ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಬ್ರೇಕ್​ ಹಾಕಲು ಮುಂದಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಆಯೋಗ, ಯಾವುದೇ ಪಕ್ಷಗಳು ಯೋಧರ ಫೋಟೋ ಅಥವಾ ಸೇನೆಯ ಕಾರ್ಯಚಟುವಟಿಕೆಳನ್ನು ತಮ್ಮ ಬ್ಯಾನರ್​ ಅಥವಾ ಪ್ರಚಾರ ವೇದಿಕೆಗಳಲ್ಲಿ ಬಳಸಿಕೊಳ್ಳುವಂತಿಲ್ಲ ಅಂತಾ ಖಡಕ್​ ವಾರ್ನ್​ ಮಾಡಿದೆ.ಪಾಕಿಸ್ತಾನ ಸೆರೆಯಿಂದ ಬಿಡುಗಡೆ ಹೊಂದಿ ತಾಯ್ನೆಲೆಕ್ಕೆ ವಾಪಸ್ಸಾದ ವಿಂಗ್ ಕಮಾಂಡರ್​ ಅಭಿನಂದನ್​ನ ಫೋಟೋವನ್ನು ದೆಹಲಿ ಬಿಜೆಪಿ ಈಗಾಗಲೇ ತಮ್ಮ ಪ್ರಚಾರದ ಬ್ಯಾನರ್​​ಗಳಲ್ಲಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸೋಷಿಯಲ್​​ ಮೀಡಿಯಾಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್‌ ಕೂಡ ಆಯೋಗಕ್ಕೆ ದೂರು ನೀಡಿದ್ರು. ಇದನ್ನ ಗಂಭೀರವಾಗಿ ಪರಿಗಣಿಸಿದ ಆಯೋಗ, ರಾಜಕೀಯ ಪಕ್ಷಗಳನ್ನ ಹದ್ದುಬಸ್ತಿನಲ್ಲಿಡಲು ಈ ಸುತ್ತೋಲೆ ಹೊರಡಿಸಿದೆ.#Forces #PoliticalCampaigns #Election #Parties #ElectionCommission

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!