Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಹಜಾರೆ ಟ್ರೋಫಿ: ಕರ್ನಾಟಕ, ತಮಿಳುನಾಡು ಸೆಣಸಾಟ.

ಹಜಾರೆ ಟ್ರೋಫಿ: ಕರ್ನಾಟಕ, ತಮಿಳುನಾಡು ಸೆಣಸಾಟ.

 

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕೊನೆಯ ಘಟ್ಟ ತಲುಪಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಲ್ಲಿ ಪ್ರಶಸ್ತಿ ಸುತ್ತಿನ ಸೆಣಸಾಟ ನಡೆಯಲಿದೆ.ಲೀಗ್​ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ಫೈನಲ್ ಫೈಟ್ ನಡೆಸಲಿವೆ. ಈಗಾಗಲೇ ಟಾಸ್​ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ.
ಪುದುಚೇರಿ ತಂಡವನ್ನು ಸೆಮೀಸ್​ನಲ್ಲಿ ಸೋಲಿಸಿ ಅರ್ಹವಾಗಿಯೇ ಕರ್ನಾಟಕ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಅತ್ತ ತಮಿಳುನಾಡು ಮಳೆ ಬಾಧಿತ ಪಂದ್ಯದಲ್ಲಿ ಅದೃಷ್ಟದ ಮೂಲಕ ಗುಜರಾತ್ ಸೋಲಿಸಿ ಉಪಾಂತ್ಯ ಪ್ರವೇಶಿಸಿದೆ. ಎರಡೂ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದೆ. ಹೀಗಾಗಿ ಅಂತಿಮ ಸುತ್ತಿನ ಸೆಣಸಾಟ ರೋಚಕತೆಯಿಂದ ಕೂಡಿರಲಿದೆ. ಬೆಂಗಳೂರು ಪಿಚ್ ಎಂದಿನಂತೆ ಬ್ಯಾಟ್ಸ್​ಮನ್​ಗಳಿಗೆ ಪೂರಕವಾಗಿಯೇ ಇರಲಿದ್ದು, ರನ್​ ಪ್ರಮಾಣ ಹೆಚ್ಚಿರಲಿದೆ. ಎರಡನೇ ಬ್ಯಾಟಿಂಗ್ ನಡೆಸುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು.
ಹೇಗಿದೆ ನಮ್ಮ ಹುಡುಗ್ರ ತಂಡ?ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿರುವ ಕೆ.ಎಲ್​.ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್​​ ಜೊತೆಗೆ ಶ್ರೇಯಸ್ ಗೋಪಾಲ್, ದೇವದತ್​ ಪಡಿಕ್ಕಲ್ ತಂಡಲ್ಲಿದ್ದಾರೆ. ತಮಿಳುನಾಡಿನ ಬಲ ಏನು?ತಮಿಳುನಾಡು ತಂಡದಲ್ಲೂ ಅಂತಾರಾಷ್ಟ್ರೀ ಕ್ರಿಕೆಟ್ ಅನುಭವಿರುವ ಆಟಗಾರರಿದ್ದಾರೆ. ನಾಯಕ ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಮುರಳಿ ವಿಜಯ್, ಆರ್​.ಅಶ್ವಿನ್, ವಾಷಿಂಗ್ಟನ್ ಸುಂದರ್ ಮಾತ್ರವಲ್ಲದೆ ಬಾಬಾ ಅಪರಾಜಿತ್, ಅಭಿನವ್ ಮುಕುಂದ್, ಮುರುಗನ್ ಅಶ್ವಿನ್ ತಂಡದ ಶಕ್ತಿ.ಕರ್ನಾಟಕ ತಂಡ ಈವರೆಗೆ ಮೂರು ಬಾರಿ ವಿಜಯ್ ಹಜಾರೆ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, ತಮಿಳುನಾಡು ಐದು ಬಾರಿ ಫೈನಲ್ ಗೆದ್ದು ಬೀಗಿದೆ. ಈ ಅಂಕಿಅಂಶ ನೆರೆ ರಾಜ್ಯದ ಪರವಾಗಿದ್ದರೂ ಅತ್ಯುತ್ತಮ ಆಟವೇ ಇಂದಿನ ಹಣಾಹಣಿಯ ವಿಜೇತರು ಯಾರೆಂದು ನಿರ್ಧರಿಸಲಿದೆ. ತ.ನಾಡು ಕೊನೆಯದಾಗಿ 2009-10 ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಕರ್ನಾಟಕ 2017-18ರಲ್ಲಿ ಅಂತಿಮ ಸೆಣಸಾಟದಲ್ಲಿ ಗೆದ್ದಿತ್ತು.ಕರ್ನಾಟಕ ತಂಡದ ಬಲ ಇವರು!ಕರ್ನಾಟಕ ತಂಡದಲ್ಲಿ ದೇವದತ್ತ ಪಡಿಕ್ಕಲ್(598 ರನ್) ಹಾಗೂ ಕೆ.ಎಲ್​.ರಾಹುಲ್(546 ರನ್​) ಗಳಿಕೆ ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ಹೈಲೈಟ್. ಇವರ ಜೊತೆಯಲ್ಲಿ ನಾಯಕ ಮನೀಷ್ ಪಾಂಡೆ ಸಹ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಬಾಬಾ ಅಪರಾಜಿತ್(480 ರನ್) ಹಾಗೂ ಅಭಿನವ್ ಮುಕುಂದ್(440 ರನ್) ಗಳಿಕೆ ಮಾಡಿದ್ದಾರೆ. ಮುರಳಿ ವಿಜಯ್ ಸಹ ಉತ್ತಮ ಫಾರ್ಮ್​ನಲ್ಲಿದ್ದಾರೆ. ನಾಯಕ ದಿನೇಶ್ ಕಾರ್ತಿಕ್ ಟೂರ್ನಿಯುದ್ದಕ್ಕೂ ತಮ್ಮ ಅನುಭವದ ಮೂಲಕ ತಂಡ ಮುನ್ನಡೆಸಿದ್ದು, ಫಿನಿಶರ್ ರೋಲ್ ಉತ್ತಮವಾಗಿ ನಿಭಾಯಿಸಿದ್ದಾರೆ. ಆಲ್​ರೌಂಡರ್ ವಿಜಯ್ ಶಂಕರ್ ಹಾಗೂ ಶಾರುಖ್​ ಖಾನ್ ಮಿಂಚಿನ ಪ್ರದರ್ಶನ ನೀಡಿದ್ದಾರೆ.ತಂಡಗಳ ಹಿನ್ನೆಲೆ ಹೇಗಿದೆ?
ಕರ್ನಾಟಕ ತಂಡ ಒಟ್ಟಾರೆ 8 ಪಂದ್ಯಗಳಲ್ಲಿ 7 ಗೆದ್ದು 1ರಲ್ಲಿ ಸೋಲನುಭವಿಸಿದೆ. ತ.ನಾಡು 9 ಪಂದ್ಯದಲ್ಲಿ ಎಲ್ಲ 9 ಪಂದ್ಯವನ್ನೂ ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿದೆ.ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ:
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯ ಫೈನಲ್​ ಪಂದ್ಯಕ್ಕೆ ಗೇಟ್​ ನಂ.15ರಲ್ಲಿ ಉಚಿತ ಪ್ರವೇಶವಿರಲಿದೆ. ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಿದೆ.
ಕರ್ನಾಟಕ ತಂಡ:ಮನೀಶ್ ಪಾಂಡೆ (ನಾyಕ), ಕೆ.ಎಲ್​. ರಾಹುಲ್ ಕರುಣ್ ನಾಯರ್, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ರೋಹನ್ ಕದಮ್, ಪ್ರವೀಣ್ ದುಬೆ, ಕೃಷ್ಣಪ್ಪ ಗೌತಮ್, ವಾಸುಕಿ ಕೃಷ್ಣಸ್ವಾಮಿ ಕೌಶಿಕ್, ಪ್ರತೀಕ್ ಜೈನ್, ಮಿಥುನ್ ಅಭಿಮನ್ಯುತಮಿಳುನಾಡು ತಂಡ:ದಿನೇಶ್ ಕಾರ್ತಿಕ್(ನಾಯಕ), ಅಭಿನವ್ ಮುಕುಂದ್, ಮುರಳಿ ವಿಜಯ್,ಬಾಬಾ ಅಪರಾಜಿತ್,ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ಆರ್​ ಅಶ್ವಿನ್,ಎಂ.ಮೊಹಮ್ಮದ್, ಟಿ.ನಟರಾಜನ್, ಮುರುಗನ್ ಅಶ್ವಿನ್

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!