Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಹರಿಯಿತು ೮೦ ಸಾವಿರ ಕ್ಯೂಸೆಕ್ ನೀರ, ಹೊಲೆ, ಗದ್ದೆಗಳಲ್ಲಿನ ಬೆಳೆ ಕಾಪಾಡೋರು ಯಾರು?

ಹರಿಯಿತು ೮೦ ಸಾವಿರ ಕ್ಯೂಸೆಕ್ ನೀರ, ಹೊಲೆ, ಗದ್ದೆಗಳಲ್ಲಿನ ಬೆಳೆ ಕಾಪಾಡೋರು ಯಾರು?

ಅರಕಲಗೂಡು ತಾಲ್ಲೂಕಿನ ಕಟ್ಟೇಪುರದ ಕೃಷ್ಣರಾಜಕಟ್ಟೆ ಅರುವತ್ತು ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದೆ ಹರಿಯುತ್ತಿರುವ ರಭಸಕ್ಕೆ ಸುತ್ತಮುತ್ತಲಿನ ಹೊಲಗದ್ದೆಗಳು ಜಲಾವೃತವಾಗಿದೆ. ಬನ್ನಿ ಅದನ್ನು ಒಮ್ಮೆ ನೋಡಿ ಬರೋಣ
ಕಾವೇರಿಗೆ ಕಟ್ಟಲಾದ ಮೊದಲ ಅಣೆಕಟ್ಟು : 
ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೊದಲ ಅಣೆಕಟ್ಟು ಇದಾಗಿದ್ದು, 1810 ರಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದೆ.  ವಿಶೇಷ ಅಂದ್ರೆ ಅಣೆಕಟ್ಟಿನ ಸ್ವಲ್ಪ ದೂರದಲ್ಲಿ ದ್ವೀಪದಂಥ ಪ್ರದೇಶವಿದೆ. ಈ ದ್ವೀಪದಿಂದ ಎಡದಂಡೆ ಮತ್ತು ಬಲದಂಡೆ ನಾಲೆ ವಿಭಾಗವಾಗುತ್ತವೆ.  1961 ರಲ್ಲಿ ಮೊದಲ ಬಾರಿಗೆ ಅಣೆಕಟ್ಟು ತುಂಬಿ ಹರಿದಿತ್ತು.  ಆದರೆ ಅದರ ಬಳಿಕ ಅದರ ಎರಡರಷ್ಟು ಪ್ರಮಾಣದ ನೀರು ಈಗ ಹರಿಯುತ್ತಿದ್ದು, ಸುಮಾರು 70 ಅಡಿಗಳಷ್ಟು ನೀರು ನದಿಯಲ್ಲಿ ಹರಿಯುತ್ತಿದೆ. 
ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕಟ್ಟೇಪುರ ಅಣೆಕಟ್ಟು ಬಳಿಯಲ್ಲಿರುವ ಖಾಸಗಿ ವಿದ್ಯುತ್ ತಯಾರಿಕಾ ಘಟಕಕ್ಕೆ ನೀರು ನುಗ್ಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕಚೇರಿಯ ಕಡತಗಳನ್ನು ಸ್ಥಳಾಂತರ ಮಾಡಲಾಗಿದೆ. ಇನ್ನೂ ರಾಮನಾಥಪುರ ಮೈಸೂರು ರಸ್ತೆ ಕೆಲ ದಿನಗಳಿಂದ ಬಂದಾಗಿತ್ತು ಮಳೆಯ ಪ್ರಮಾಣ ಸ್ವಲ್ಪ ತಗ್ಗಿದ್ದರಿಂದ ಮತ್ತೆ ಈ ಸಂಪರ್ಕಕ್ಕೆ ಚಾಲನೆ ಸಿಕ್ಕಿದೆ. ಆದರೇ ಕೊಣನೂರಿನ ತೂಗು ಸೇತುವೆ ಮಾತ್ರ ನೀರಿನಲ್ಲಿ ಮುಳುಗಿದೆ. 
ಹಾರಂಗಿ ಜಲಾಶಯದಿಂದ ಬಿಡಲಾಗಿದ್ದ ನೀರಿನಿಂದ ರಾಮನಾಥಪುರ ಜಲಾವೃತವಾಗಿತ್ತು. ಜನಜೀವನ ಕೂಡಾ ಅಸ್ತವ್ಯಸ್ತವಾಗಿತ್ತು. ರಾಮನಾಥಪುರದಲ್ಲಿ ರಾಮೇಶ್ವರ ದೇಗುಲ ಸಮೀಪ ಇನ್ನಷ್ಟು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು. ಮಳೆರಾಯನ ಬಿಡುವು ಜನರಿಗೆ ಕೊಂಚ ನಿರಾಳತೆ ತಂದಿದೆ. ವಿಶ್ವಕರ್ಮ ಸಮುದಾಯ ಭವನದ ಆವರಣಕ್ಕೆ ನದಿ ನೀರುನುಗ್ಗಿದ್ದರಿಂದ, ನಿರಾಶ್ರೀತರ ಕೇಂದ್ರವನ್ನ ಬೇರೇಡೆಗೆ ಸ್ಥಳಾಂತರ ಮಾಡಲಾಗಿದೆ. ಶಾಲೆ, ಯಾತ್ರಿನಿವಾಸದಲ್ಲಿ 300ಕ್ಕೂ ಹೆಚ್ಟು ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ. 
ಗದ್ದೆಗಳಿಗೆ ನುಗ್ಗಿರೋ ನೀರು *: 
ಜಲ ಭೀತಿಯನ್ನು ಎದುರಿಸುತ್ತಿರುವ ಕಟ್ಟೆಪುರ ಸುತ್ತಮುತ್ತಲಿನ ಜನರು ಎಂದೂ ಕಂಡರಿಯದ ಪ್ರವಾಹದ ರೀತಿಯ ನೀರನ್ನ ಕಂಡಿದ್ದಾರೆ. ಸುಮಾರು 80 ಸಾವಿರ ಕ್ಯೂಸೆಕ್ ನೀರು 
ಕಟ್ಟೇಪುರ ಅಣೆಕಟ್ಟೆಯಿಂದ ಹರಿದಿದ್ದರಿಂದ ಈ ಭಾಗದ ಹೊಲಗದ್ದೆಗಳು ನೀರಿನಲ್ಲಿ ಮುಳುಗಿಹೋಗಿವೆ. ಜಲಾವೃತವಾದ ಹಿನ್ನಲೆಯಲ್ಲಿ,  ಅಡಿಕೆ, ಶುಂಠಿ, ಬಾಳೆ, ಆಲೂಗೆಡ್ಡೆ, ತಂಬಾಕು, ಭತ್ತ, ರಾಗಿ, ಜೋಳ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಕರಗುತ್ತಿವೆ. 
ಬದುಕಿಗಾಗಿ ಮೊರೆಯಿಟ್ಟ ಸಂತ್ರಸ್ಥರು:
ನಿರಾಶ್ರೀತರ ಕೇಂದ್ರಕ್ಕೆ ಈಗಾಗಲೇ ತಾಲ್ಲೂಕು ಆಡಳಿತ,  ಜಿಲ್ಲಾಡಳಿತ ಭೇಟಿ ಸಂತ್ರಸ್ಥರಿಗೆ ಧೈರ್ಯ ತುಂಬಿದ್ದಾರೆ.
ಮನೆ ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ಕಷ್ಟಕ್ಕೆ ನೆರವಾಗಬೇಕು ಪರಿಹಾರ ಕೊಡಿಸಬೇಕು ಎಂದು ನಿರಾಶ್ರಿತರು ಶಾಸಕರಿಗೆ, ಜಿಲ್ಲಾಡಳಿತಕ್ಕೆ ಮನವಿ ಯಿಟ್ಟಿದ್ದಾರೆ. ಪರಿಹಾರ ಒದಗಿಸುವ ಭರವಸೆಯನ್ನು ಶಾಸಕ ನೀಡಿದ್ದಾರೆ. 
ಒಟ್ಟಾರೆ ಜಿಲ್ಲೆಯ ರಾಮನಾಥಪುರ ಅಕ್ಷರಶಃ ಹಿಂದೆಂದು ಕಂಡರಿಯದ ನೆರೆಯನ್ನ ಕಾಣುವ ಜೊತೆಗೆ ಮನೆ, ಆಸ್ತಿ, ಪಾಸ್ತಿ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಸರ್ಕಾರ ಸದ್ಯ ನಿರಾಶ್ರೀತರ ಶಿಬಿರ ತೆರೆದಿದೆ.  ಆದ್ರೆ ಎಷ್ಟುದಿನ ತೆರೆಯಲು ಸಾಧ್ಯ ನೀವೆ ಹೇಳಿ ?  ಹಾಗಾಗಿ ಅವರಿಗೆ ಪುನರ್ವಸತಿಯೆುಂದಿಗೆ ಅಗತ್ಯ ಪರಿಕರವನ್ನ ನೀಡುವ ಮೂಲಕ ಸಹಜ ಸ್ಥಿತಿಗೆ ಮರಳುವಂತೆ ಮಾಡಬೇಕಿದೆ. ಸಂಘ ಸಂಸ್ಥೆಗಳು ಕೂಡಾ ಕೈ ಜೋಡಿಸಬೇಕಿದೆ. 

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!