Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಹಾವಿಗೆ‌ ಹಾಲೆರದರೇನು ಫಲ.. ಸ್ವಾಮೀಜಿಯಿಂದ ಹಸಿದ ಹೊಟ್ಟೆಗೆ ಹಾಲುಣಿಸುವ ಪುಣ್ಯದ ಕೆಲಸ

ಹಾವಿಗೆ‌ ಹಾಲೆರದರೇನು ಫಲ.. ಸ್ವಾಮೀಜಿಯಿಂದ ಹಸಿದ ಹೊಟ್ಟೆಗೆ ಹಾಲುಣಿಸುವ ಪುಣ್ಯದ ಕೆಲಸ

ಹಾವಿಗೆ ಹಾಲೆರೆದ್ರೇ ಕಚ್ಚೋದನ್ನ ಬಿಟ್ಟೀತೇ.. ಖಂಡಿತಾ ಇಲ್ಲ. ಆದ್ರೇ, ನಾಗರಪಂಚಮಿ ಬಂದ್ರೇ ಸಾಕು ಹುತ್ತಕ್ಕೆ, ಕಲ್ಲು ನಾಗರಕ್ಕೆ ಲೀಟರ್ ಗಟ್ಟಲೇ ಹಾಲೆರೆಯೋದನ್ನ ಇನ್ನೂ ಬಿಟ್ಟಿಲ್ಲ. ಆಚರಣೆ ತಪ್ಪಲ್ಲ. ಆದ್ರೇ, ಅದರ ಹೆರಸಿನಲ್ಲಿ ಮೌಢ್ಯ, ದುಂದು ವೆಚ್ಚ ಬೇಡ ಅಂತಿದಾರೆ ಇಲ್ಲೊಬ್ಬ ಸ್ವಾಮೀಜಿ. ನಾಗರಪಂಚಮಿಯನ್ನೇ ಮಕ್ಕಳ ಹಬ್ಬ, ಬಸವಣ್ಣನ ಹಬ್ಬ ಅಂತ ಆಚರಿಸಲು ಶ್ರೀಗಳು ಜಾಗೃತಿ ಮೂಡಿಸ್ತಿದಾರೆ.
ಹಾಲುಣಿಸುತ್ತಿರುವ ಮನಸ್ಸು ಪರಿಶುದ್ಧ. ಹಸಿದ ಹೊಟ್ಟೆಗಳೂ ಮುಗ್ಧ.. ಇದರಲ್ಲೇ ಕಾಣ್ತಿದೆ ದೈವತ್ವ. ಇದೇ ಆಗಲಿ ಆಚರಣೆ.. ಇದರಿಂದಲೇ ಸಿಗಲಿ ನಾಡಿಗೆಲ್ಲ ಪ್ರೇರಣೆ. ಇವ್ರು ಎಲ್ಲರಂತ ಸ್ವಾಮೀಜಿಯಲ್ಲ. ಇವರ ನಡೆ-ನುಡಿಯೂ ಭಿನ್ನ. ಮೌಢ್ಯಕ್ಕೆ ತಿಲಾಂಜಲಿಯನ್ನಿಡ್ತಿದಾರೆ. ಇಂಥ ಒಂದು ಅಮೋಘ ಕ್ಷಣಗಳಿಗೆ ವೇದಿಕೆಯಾಗಿದ್ದು ಹುಬ್ಬಳ್ಳಿಯ ಆರೂಢ ಅಂಧ ಮಕ್ಕಳ ವಸತಿ ಶಾಲೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ತಮ್ಮ ಭಕ್ತರ ಜತೆ ಸೇರಿ ಮಕ್ಕಳೊಂದಿಗೆ ನಾಗರಪಂಚಮಿ ಹಬ್ಬವನ್ನ ವಿಶಿಷ್ಟವಾಗಿ ಆಚರಿಸಿದ್ರು. ಹಬ್ಬಗಳ ಪರಂಪರೆಯಲ್ಲಿ ನಾಗರಪಂಚಮಿ ರೈತಾಪಿ ಸಂಸ್ಕೃತಿ ಹಿನ್ನೆಲೆಯಲ್ಲಿ ಬೆಳೆದು ಬಂದಿದೆ. ಆದ್ರೇ, ಹಬ್ಬದ ದಿನ ಹುತ್ತಕ್ಕೋ ಕಲ್ಲು ನಾಗಕ್ಕೋ ಲೀಟರ್ ಗಟ್ಟಲೇ ಹಾಲನ್ನ ಸುರಿಯಲಾಗುತ್ತೆ. ಅಚ್ಚರಿ ಅಂದ್ರೇ ಒಂದೇ ದಿನಕ್ಕೆ 10 ದಶಲಕ್ಷ ಲೀಟರ್ ಹಾಲು ಹೀಗೇ ವೇಸ್ಟಾಗ್ತಿದೆ ಅನ್ನೋದು ಒಂದ್ ಅಂದಾಜು. ನಾಗರಪಂಚಮಿ ಆಚರಣೆಯೇನೋ ಸರಿ. ಆದ್ರೇ, ಕಲ್ಲಿಗೋ ಇಲ್ಲ ಹುತ್ತಕ್ಕೋ ಹಾಲೆರೆದು ಹಾಳು ಮಾಡೋ ಬದಲು ಅದೇ ಹಾಲನ್ನ ಹಸಿದ ಜೀವಗಳ ಹೊಟ್ಟೆ ತುಂಬಿತ್ತಲ್ವೇ.. ಅದಕ್ಕಾಗಿಯೇ ಸ್ವಾಮೀಜಿ ಮೌಢ್ಯಕ್ಕೆ ತಿಲಾಂಜಲಿ ಇಟ್ಟು, ಇದೇ ಹಬ್ಬವನ್ನ ಮಕ್ಕಳ ಹಬ್ಬ, ಹಾಲುಣಿಸುವ ಹಬ್ಬ, ವೈಚಾರಿಕ ಕ್ರಾಂತಿಯ ಹರಿಕಾರ ಅಣ್ಣ ಬಸವ ಹಬ್ಬವಾಗಿ ಆಚರಿಸ್ತಿದಾರೆ ಸ್ವಾಮೀಜಿ ಹಾಗೂ ಭಕ್ತರು. 
ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ
12 ನೇ ಶತಮಾನದಲ್ಲಿ ಬಸವಣ್ಣ ಕಲ್ಲ ನಾಗರಕಂಡರೆ ಹಾಲೆರೆಯುವರಯ್ಯ ಅಂತ ವಚನದಿಂದಲೇ ವೈಚಾರಿಕೆ ಬೆಳೆಸಿದ್ದ. ಹಾಗೇ  ಪುರಂದರದಾಸರು ಹುತ್ತಕ್ಕೆ ಹಾಲನೆರೆದರೇ ಏನು ಫಲವಯ್ಯ ಅಂತ ಹಾಡಿದ್ರು. ಆದರೂ ಈಗಲೂ ಈ ಮೌಢ್ಯ ನಿಂತಿಲ್ಲ. ಅಣ್ಣ ಬಸವಣ್ಣ ಆಶಯವನ್ನ ಶ್ರೀಗಳು ತಪ್ಪದೇ ಪಾಲಿಸ್ತಿದಾರೆ. ಇದು ಇವತ್ತು ನಿನ್ನೆಯದಲ್ಲ. 21  ವರ್ಷದಿಂದ ಹಬ್ಬದ ಪ್ರಯುಕ್ತ ಕಲ್ಲಿನ ಮೇಲೆ ಸುರಿಯೋ ಬದಲು ಹಾಲು ಮಕ್ಕಳ ಪಾಲಾಗಲಿ ಅನ್ನೋ ವಿಶಿಷ್ಟ ಅಭಿಯಾನ ನಡೆೆಸ್ತಿದಾರೆ. ರಾಜ್ಯದೆಲ್ಲೆಡೆ ಅಂಧರು, ಅಶಕ್ತ, ಬುದ್ಧಿಮಾಂದ್ಯ, ವಿಕಲಚೇತನ ಮಕ್ಕಳಿಗೆ ಹಾಲುಣಿಸುವ ಸಪ್ತಾಹವಾಗಿ ಪಂಚಮಸಾಲಿ ಪೀಠದ ವತಿಯಿಂದ ಆಚರಿಸ್ತಿದಾರೆ.ಹಬ್ಬಗಳು ನಮ್ಮ ಸಂಸ್ಕೃತಿ ಬಿಂಬಿಸಿದ್ರೇ ಒಕೆ. ಆದ್ರೇ, ದುಂದು ವೆಚ್ಚಕ್ಕೆ ಆಸ್ಪದ ಯಾಕೆ ಅಂತಿದಾರೆ ಸ್ವಾಮೀಜಿ. ಅದಕ್ಕಾಗಿಯೇ ಜಾಗೃತಿ ಮೂಡಿಸ್ತಿದಾರೆ. ಕಳೆದ ಸರ್ಕಾರ ಕ್ಷೀರಭಾಗ್ಯ ಯೋಜನೆ ತಂದಿದೆ. ರೋಟರಿ, ಲಯನ್ಸ್ ಮಾನವ ಬಂಧುತ್ವ ವೇದಿಕೆಯಂತ ಸಂಘಟನೆಗಳೂ ಕೂಡ ಸ್ವಾಮೀಜಿಯಂತೆ ಅಭಿಯಾನ ನಡೆಸ್ತಿವೆ. ಇದು ಬರೀ ಒಂದೇ ಧರ್ಮಕ್ಕೆ ಸೇರದೇ ಶಾಲೆಯಲ್ಲೇ ಮಕ್ಕಳ ಹಬ್ಬ, ಹಾಲುಣಿಸುವ ಹಬ್ಬವಾಗಿ ಸರ್ಕಾರವೇ ಆಚರಿಸಿದ್ರೇ ರಾಷ್ಟ್ರೀಯ ಭಾವೈಕ್ಯತೆಗೆ ನಾಂದಿಯಾಗುತ್ತೆ ಈ ಬಗ್ಗೆ ಗಮನ ಹರಿಸಲಿ ಅಂತಾರೆ ಸ್ವಾಮೀಜಿ.
ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ ತಿನ್ನೋ ಅನ್ನ, ಕುಡಿಯೋ ಹಾಲು, ನೀರು ದೇವರ ಹೆಸರಿನಲ್ಲಿ ಹಾಳು ಮಾಡೋ ಆಚರಣೆ ಹೆಸರಿನಲ್ಲಿ ಅಮಾನವೀಯ, ಮೌಢ್ಯ, ದುಂದು ವೆಚ್ಚಕ್ಕೆ ಕಡಿವಾಣ ಹಾಕ್ತಿರುವ ಸ್ವಾಮೀಜಿ ಗ್ರೇಟ್. ಮಕ್ಕಳನ್ನ ದೇವರು ಅಂತೀವಿ. ಮಕ್ಕಳ ಜತೆಗೆ ಮಕ್ಕಳ ಹಸಿವು ನೀಗಿಸೋಕೆ ಮುಂದಾಗಿರುವ ಸ್ವಾಮೀಜಿ ನಿಜಕ್ಕೂ ಖಾವಿಯ ಘನತೆಯನ್ನ, ವೈಚಾರಿಕತೆಯನ್ನ ಎತ್ತಿ ಹಿಡಿಯುತ್ತಿದಾರೆ. 

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!