Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ₹9.5 ಕೋಟಿ ಬೆಲೆಯ ಆಭರಣದಲ್ಲಿ ಪಿಗ್ಗಿ ಮಿಂಚಿಂಗ್..,

₹9.5 ಕೋಟಿ ಬೆಲೆಯ ಆಭರಣದಲ್ಲಿ ಪಿಗ್ಗಿ ಮಿಂಚಿಂಗ್..,

ನ್ಯೂಯಾರ್ಕ್​: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಭಾವಿ ಪತಿ ನಿಕ್​ ಜೋನಸ್​ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಇನ್ನು ಮದುವೆಗೂ ಮುನ್ನ ಬ್ಯಾಚುಲರ್‌​ ಪಾರ್ಟಿಯನ್ನ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಿಯಾಂಕಾ ಸ್ವಲ್ಪ ದುಬಾರಿಯಾಗಿ ಕಂಗೊಳಿಸಿದ್ದಾರೆ. ಭಾನುವಾರ ನ್ಯೂಯಾರ್ಕ್​ನ ಬ್ಲೂ ಬಾಕ್ಸ್​ ಕೆಫೆಯಲ್ಲಿ ನಡೆದ ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ₹9.5 ಕೋಟಿ ಮೌಲ್ಯದ ಆಭರಣ ಧರಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಪ್ರಿಯಾಂಕಾ ಧರಿಸಿದ್ದ ಆಭರಣ 7.35 ಕೋಟಿ ರೂಪಾಯಿ ಹಾಗೂ ಎಂಗೇಜ್​ಮೆಂಟ್​ ರಿಂಗ್​ನ ಬೆಲೆ 2.1 ಕೋಟಿ ಅಂತ ಹೇಳಲಾಗಿದೆ. ಈ ರಿಂಗ್​ಅನ್ನ ಭಾವಿ ಪತಿ ನಿಕ್​ ಜೋನಸ್​ ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನ ಪ್ರಿಯಾಂಕಾಳ ಸ್ನೇಹಿತರಾದ ಅನುಜಾ ಆಚಾರ್ಯ ಹಾಗೂ ಮುಬೀನಾ ರಾಟ್ಟೊನ್ಸಿ ಆಯೋಜಿಸಿದ್ದು, ಪ್ರಿಯಾಂಕಾ-ನಿಕ್​ ಜೋನಸ್​ ಕುಟುಂಬದವರು, ಸ್ನೇಹಿತರು ಸೇರಿ ಒಟ್ಟು 100 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಪಾರ್ಟಿಯಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋವನ್ನು ಪ್ರಿಯಾಂಕಾ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಈ ತಾರಾ ಜೋಡಿ ಮುಂದಿನ ಡಿಸೆಂಬರ್​ 2ಕ್ಕೆ ಜೋಧ್​ಪುರ್​ನಲ್ಲಿ ಹಸೆಮಣೆ ಏರಲಿದ್ದಾರೆ ಅಂತ ಹೇಳಲಾಗುತ್ತಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!