Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / 100 ಮೀಟರ್ ಓಟದಲ್ಲಿ ದಾಖಲೆ ನಿರ್ಮಿಸಿದ ದ್ಯುತಿ ಚಂದ್.

100 ಮೀಟರ್ ಓಟದಲ್ಲಿ ದಾಖಲೆ ನಿರ್ಮಿಸಿದ ದ್ಯುತಿ ಚಂದ್.

ರಾಂಚಿ: ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ 100 ಮೀಟರ್​ ಓಟದಲ್ಲಿ ಈಗಾಗಲೇ ಅನೇಕ ದಾಖಲೆ ಮುರಿದಿದ್ದು ಸದ್ಯ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.100 ಮೀಟರ್​ ಓಟದ ಸೆಮಿಫೈನಲ್​ ವೇಳೆ ಕೇವಲ 11.22 ಸೆಕೆಂಡ್​​ನಲ್ಲಿ ಗುರಿ ಮುಟ್ಟುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಈ ಹಿಂದೆ ಅವರೇ 100 ಮೀಟರ್​ ಓಟವನ್ನು 11.26 ಸೆಕೆಂಡ್​​ನಲ್ಲಿ ಮುಟ್ಟಿದ್ದರು. ಈ ಮೂಲಕ 2020ರಲ್ಲಿ ಜಪಾನ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೇವಲ ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಒಲಂಪಿಕ್ಸ್​​ನಲ್ಲಿ ದ್ಯುತಿ ಚಾಂದ್​ ಅವಕಾಶ ಪಡೆದುಕೊಳ್ಳಬೇಕಾದರೆ 11.07 ಸೆಕೆಂಡ್​​ನಲ್ಲಿ ಗುರಿ ತಲುಪಬೇಕಾಗಿದೆ. ಈ ಹಿಂದೆ ಇಟಲಿಯ ನೇಪಲ್ಸ್​ನಲ್ಲಿ ನಡೆದ 30ನೇ ವಿಶ್ವ ಯೂನಿವರ್ಸಿಟಿ ಗೇಮ್ಸ್​ನ ಫೈನಲ್​ನಲ್ಲಿ ಚಾಂದ್​ 11.32 ಸೆಕೆಂಡ್​ಗಳಲ್ಲಿ 100 ಮೀಟರ್​ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಜತೆಗೆ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!