Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಪಿ.ಎಫ್ .ಐ. ಸಂಘಟನೆಯ 16 ಮುಸ್ಲಿಂ ಯುವಕರು ಪೋಲೀಸರ ವಶಕ್ಕೆ.

ಪಿ.ಎಫ್ .ಐ. ಸಂಘಟನೆಯ 16 ಮುಸ್ಲಿಂ ಯುವಕರು ಪೋಲೀಸರ ವಶಕ್ಕೆ.

ಮಂಡ್ಯ; ಆಲಂಬಾಡಿ ಕಾವಲು ಗ್ರಾಮದ ಬಳಿ ಗುಪ್ತ ಸ್ಥಳದಲ್ಲಿ ಪಿಎಫ್ ಐ ಸಂಘಟನೆಯ ಚಟುವಟಿಕೆಯನ್ನು ಗೌಪ್ಯವಾಗಿ ನಡೆಸುತ್ತಿದ್ದ 16ಮಂದಿ ಮುಸ್ಲಿಂ ಯುವಕರನ್ನು ಪೋಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ನಡೆದಿದೆ.
ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರೆನ್ನಲಾದ ಹುಣಸೂರಿನ ರೌಟಿಶೀಟರ್ ಮುಬಾರಕ್ ಷರೀಫ್ ಎಂಬಾತನ ನೇತೃತ್ವದಲ್ಲಿ ಯಾರಿಗೂ ತಿಳಿಯದಂತೆ ದೇವಮ್ಮ ಎಂಬುವವರ ಕಬ್ಬಿನ ಗದ್ದೆಯೊಳಗೆ ಫರೇಡ್ ನಡೆಸುತ್ತಿದ್ದ ಆರೋಪದ ಮೇರೆಗೆ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳಾದ ನಜೀಬ್(26), ಇಮ್ರಾನ್ ಖಾನ್(28), ಸಲ್ಮಾನ್ (30), ಸಫೀರ್(28), ನದೀಮ್(26), ಮಹಮ್ಮದ್ ಖಲೀಲ್(24), ಮಹಮ್ಮದ್ ಸಲ್ಮಾನ್(24),( ಸುಹೇಲ್ (24), ಸೈಯದ್ ರಿಯಾಜ್(28), ಸಲ್ಮಾನ್(28), ಸಯ್ಯದ್ ಷರೀಪ್(19), ಸಯ್ಯದ್ ಸರವರ್(22), ಸಯ್ಯದ್ ಜುಬೇರ್ (22), ಮಹಮದ್‌ ನದೀಂ(23),ಸದ್ದಾಂ(20) ಅವರು ಸೇರಿದಂತೆ 16 ಮಂದಿ 30ವರ್ಷದೊಳಗಿನ ಯುವಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಗೂ ರೌಡಿ ಶೀಟರ್ ಆಗಿರುವ ಹುಣಸೂರಿನ ವ್ಯಕ್ತಿ ನೇತೃತ್ವದಲ್ಲಿ ಗುಪ್ತ ಸಭೆ ನಡೆಸಿರುವುದು.
ಕ್ರಿಮಿನಲ್ ಅಪರಾಧವಾಗಿರುವ ಕಾರಣ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಲ್ಟರ್ ಡಿ.ಲಕ್ಷ್ಮಣ್ ಮತ್ತಿತರರು ಭಾಗವಹಿಸಿದ್ದರು.
ಘಟನೆಯಿಂದ ಆಲಂಬಾಡಿಕಾವಲು ಗ್ರಾಮವೇ ಬೆಚ್ಚಿ ಬಿದ್ದಿದೆ.
ಹಿಂದೂಪರ ಸಂಘಟನೆಯ ಮುಖಂಡರು ಘಟನೆಯನ್ನು ತೀವ್ರ ಖಂಡಿಸಿ, ಒಳ್ಳೆಯ ಉದ್ದೇಶದಿಂದ ಪಿ.ಎಫ್.ಐ ಸಂಘಟನೆ ನಡೆಸುತ್ತಿದ್ದಲ್ಲಿ ಗುಪ್ತ ಸ್ಥಳದಲ್ಲಿ ಫರೇಡ್ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದು, ಇಂತಹ ಚಟುವಟಿಕೆಯನ್ನು ತಕ್ಷಣ ಮುಸ್ಲಿಂ ಮುಖಂಡರು ಬಂದ್ ಮಾಡಿಸಬೇಕು ಇಲ್ಲದಿದ್ದರೆ ಅಶಾಂತಿ ಸೃಷ್ಠಿಸುವವರ ವಿರುದ್ಧ ಗ್ರಾಮಸ್ಥರೇ ತಿರುಗಿ ಬೀಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Share

About Bora nayak BIG TV NEWS, Mandya

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!