Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕುಟುಂಬದ 16 ಜನರು ಪಾಸಿಟಿವ್
Featured Video Play Icon

ಕುಟುಂಬದ 16 ಜನರು ಪಾಸಿಟಿವ್

ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ನ ಆರ್ಭಟ ಹೆಚ್ಚಾಗುತ್ತಿದೆ ಇದನ್ನು ಕಟ್ಟಿ ಹಾಕಲು ರಾಜ್ಯದಲ್ಲಿ ಈಗಾಗಲೇ ಲಾಕ್ ಡೌನ್ ಜಾರಿ ಮಾಡಲಾಗಿದ್ದು ಒಂದನೆಯ ಅಲೆಗಿಂತ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದರೊಂದಿಗೆ ಸಾವು ನೋವಿನ ಪ್ರಮಾಣವು ಹೆಚ್ಚಾಗಿದ್ದು ಇವೆಲ್ಲ ದರ ನಡುವೆ ಇಲ್ಲೊಂದು ಕುಟುಂಬದ 16 ಜನರು ಪಾಸಿಟಿವ್ ಬಂದು ಚಿಕಿತ್ಸೆ ಯನ್ನು ಪಡೆದುಕೊಂಡು ಯಶಸ್ವಿಯಾಗಿ ಗೆದ್ದಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬದವರೇ ಇದಕ್ಕೆ ಉದಾಹರಣೆ ಗ್ರಾಮದ ಶಿವಳ್ಳಿಮಠ ಕುಟುಂಬದ 16 ಜನರಿಗೆ ಇದೇ ತಿಂಗಳು 3ನೇ ತಾರೀಖಿನಂದು ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು ಮನೆಯಲ್ಲಿ

ಐಸೋ ಲೇಷನ್ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. ಈ ಪೈಕಿ 45 ವರ್ಷ ಮೇಲ್ಪಟ್ಟ ನಾಲ್ವರು ಈ ಮೊದಲೇ ಎರಡನೆ ಡೊಸ್ಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಹಾಗೂ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಇತರ ಮೂರು ಮಂದಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.ಒಂದೇ ಕುಟುಂಬದ 16 ಮಂದಿ ಕೋವಿಡ್  ಕಾಣಿಸಿಕೊಂಡು ನಂತರ ಸರಿಯಾಗಿ ಚಿಕಿತ್ಸೆಯನ್ನು ಪಡೆದು ಕೊಂಡು ಈಗ ಸಂಪೂರ್ಣವಾಗಿ ಗುಣಮುಖರಾಗಿ

ಇನ್ನೂ ಕುಟುಂಬದ ಸದಸ್ಯರಲ್ಲಿ ಸೋಂಕಿನ ಲಕ್ಷಣ ಗಳು ಕಾಣಿಸಿಕೊಂಡಾಗ ಕೋವಿಡ್ ಟೆಸ್ಟ್ ಮಾಡಿಸಿ ಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯ ರಿಗೂ ಧೈರ್ಯ ತುಂಬಿ ವೈದ್ಯರ ಸಲಹೇ ಸೂಚನೆ ಗಳನ್ನು ತಪ್ಪದೆ ಪಾಲಿಸಿದ್ದಾರೆ. ಅಲ್ಲದೇ ಭಯದಲ್ಲಿರುವ ಸಾರ್ವಜನಿಕರಿಗೂ, ಗ್ರಾಮಸ್ಥರಲ್ಲೂ ಸಹ ಆತ್ಮ ಸ್ಥೈರ್ಯ ತುಂಬಿ ಕೋವಿಡ್ ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸೆ ಕುರಿತು ದೈರ್ಯ ತುಂಬುತ್ತಿದ್ದಾರೆ.

ಒಟ್ಟಾರೆ ಕರೋನಾ ಪಾಸಿಟಿವ್ ದೃಢವಾದ್ರೆ ಸಾಕು ಮಾನಸಿಕವಾಗಿ ಕುಗ್ಗುವ ಅದೆಷ್ಟೋ ಜನರ ಮುಂದೆ ಬರೋಬ್ಬರಿ 16 ಮಂದಿ ಕುಟುಂಬಸ್ಥರಲ್ಲಿ ಪಾಸಿಟಿವ್ ಕಾಣಿಸಿಕೊಂಡರೂ ಎದೆಗುಂದದೇ ದೈರ್ಯದಿಂದ ಆತ್ಮಸ್ಥೈರ್ಯದೊಂದಿಗೆ ಕರೋನಾ ಎದುರಿಸಿರೋ ಈ ಕುಟುಂಬದ ಸದಸ್ಯರ ಮನೋಬಲ ನಿಜಕ್ಕೂ ಮೆಚ್ಚಲೇಬೇಕು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!