Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೆಳಗಾವಿ / ಖಾಕಿ ಖದರ್: ಮೂವರು ಕಳ್ಳರು ಅಂದರ್.

ಖಾಕಿ ಖದರ್: ಮೂವರು ಕಳ್ಳರು ಅಂದರ್.

 

ಬೆಳಗಾವಿ : ಗ್ರಾಮೀಣ ಪೋಲೀಸ್ ಠಾಣೆಯ ಹದ್ದಿಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಜನ ಆರೋಪಿತರನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಸಫಲರಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಪ್ರದೇಶದ ಹಂಗರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳನ್ನು ದೋಚಿದ್ದ ಮೂವರು ಖದೀಮರು ಪೋಲೀಸರ ಬಲೆಗೆ ಬಿದ್ದಿದ್ದು ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗು ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಾದ ಸುಳಗಾ ಗ್ರಾಮದ 26 ವರ್ಷದ ಯಲ್ಲಪ್ಪಾ ಭಾವುಕು ಕುಡಚಿಕರ , 26 ವರ್ಷದ ಯೋಗೇಶ್ ಮಲ್ಲಪಾ ಪಾಟೀಲ,ಮೋಹನ್ ಪರುಶರಾಮ ಪಾಟೀಲ33 ವರ್ಷ ಇವರನ್ನು ಬಂಧಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರ ಕಾರ್ಯಕ್ಕೆ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದರು.

Share

About Prakash s kamble BIG TV NEWS, Athani

Check Also

ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಅಗತ್ಯ.

ಬೆಳಗಾವಿ : ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಗೃಹ …

Leave a Reply

Your email address will not be published. Required fields are marked *

error: Content is protected !!