Hiring Reporter’s For more Information Contact Above Number 876 225 4007 . Program producer
Home / ಸುದ್ದಿ / 31ರಂದು ಪ್ರಜಾಪ್ರಭುತ್ವದ ಬಿಕ್ಕಟ್ಟು ಸಂಕಲ್ಪ ಸಭೆ..

31ರಂದು ಪ್ರಜಾಪ್ರಭುತ್ವದ ಬಿಕ್ಕಟ್ಟು ಸಂಕಲ್ಪ ಸಭೆ..

Spread the love

ಹುಬ್ಬಳ್ಳಿ: ಭಾರತ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅತಿ ಗಂಡಾಂತರ ಪರಿಸ್ಥಿತಿಯನ್ನು ಏದುರಿಸುತ್ತಿದೆ ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಅದಕ್ಕೆ ಬೆಂಬಲವಾಗಿರುವ ಎನ್ ಡಿ ಎ ಹಾಗೂ ಬಿಜೆಪಿ ತತ್ವ ಆದರ್ಶಗಳು ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿವೆ ಈ ಹಿನ್ನೆಲೆಯಲ್ಲಿ ಇದೇ 31ರಂದು ಪ್ರಜಾಪ್ರಭುತ್ವದ ಬಿಕ್ಕಟ್ಟು ಸಂಕಲ್ಪ ಸಭೆಯನ್ನು ಧಾರವಾಡ ಆಯೋಜಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಗಂಡಾಂತರದಲ್ಲಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ಬಿಜೆಪಿ ಹಾಗೂ ಎನ್.ಡಿ.ಎ ಪಕ್ಷಗಳು ಮೂಲ ಕಾರಣವಾಗಿದೆ ಅಲ್ಲದೇ ಪಕ್ಷ ಸಿದ್ಧಾಂತಗಳ ಪರಿಪಾಲನೆಯಿಂದ ದೇಶದ ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ಹಿಂದೆ 1977ರಲ್ಲಿ ನಮ್ಮ ದೇಶದ ನಾಗರಿಕ ಸಮಾಜ ನಿರ್ವಹಿಸಿದಂತೆ ಮತ್ತೊಮ್ಮೆ ಅಂತಹ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಗಂಭೀರ ಕರೆಯಾಗಿದೆ ಎಂದರು. ಕೇಂದ್ರ ಸರ್ಕಾರದ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನರೇಂದ್ರ ಮೋದಿ ಅದಾನಿ ಅಂಬಾನಿ ಜೊತೆ ಸೇರಿ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ಕೈ ಜೋಡಿಸುವ ಮೂಲಕ ಹಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರಜಾಪ್ರಭುತ್ವ ಬಿಕ್ಕಟ್ಟು ನಿಯಂತ್ರಿಸುವ ಸದುದ್ದೇಶದಿಂದ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯ ವತಿಯಿಂದ ಗಂಭೀರ ಮಂಥನವೊಳಗೊಂಡ ಸಂಕಲ್ಪ ಸಭೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉಚ್ಛ ನ್ಯಾಯಾಲಯದ ನಿವೃತ್ತ ಜಸ್ಟಿಸ್ ಎ.ಪಿ.ಶಾಹ, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ ಭೂಷಣ, ಚಿಂತಕರಾದ ಯೋಗೇಂದ್ರ ಯಾದವ, ಎಡಿಆರ್ ಮುಖ್ಯಸ್ಥ ಜಗದೀಶ ಛೋಕರ್, ಸಾಹಿತಿಗಳಾದ ದೇವನೂರು ಮಹಾದೇವ ಸೇರಿದಂತೆ ಸಾಹಿತಿಗಳು ಸಮಾಜಿಕ ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ ಎಂದು ಅವರು ಈ ಕುರಿತು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್.ಅಶೋಕ, ಬಸವರಾಜ ಹೂಗಾರ, ಭವಾನಿಶಂಕರ ಸೇರಿದಂತೆ ಇತರರು ಇದ್ದರು.

Check Also

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Spread the loveಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!