Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / 326 ರನ್​ಗಳ ಭರ್ಜರಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ.

326 ರನ್​ಗಳ ಭರ್ಜರಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ.

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ ತಂಡ ಹರಿಣಗಳನ್ನು ಆಲೌಟ್​ ಮಾಡುವ ಮೂಲಕ 326 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿದೆ.36ಕ್ಕೆ 3 ವಿಕೆಟ್​ ಕಳೆದುಕೊಂಡು ಮೂರನೇ ದಿನ ಆಟವಾರಂಭಿಸಿದ ಆಫ್ರಿಕಾ ಪರ ನೈಟ್​ ವಾಚ್​ಮನ್​ಗಳಾಗಿದ್ದ ಆ್ಯನ್ರಿಚ್​​ ನಾರ್ಟ್ಜೆ(3) ಹಾಗೂ ಡಿ ಬ್ರಯಾನ್​(30)ರನ್ನು ಬೇಗ ಔಟ್​ ಮಾಡುವ ಮೂಲಕ ಯಾದವ್​ ಹಾಗೂ ಶಮಿ ಭಾರತಕ್ಕೆ ಆರಂಭಿಕ ಮುನ್ನಡೆ ತಂಡದುಕೊಟ್ಟರು.ಆದರೆ, ನಾಯಕ ಡುಪ್ಲೆಸಿಸ್​(64) ಹಾಗೂ ಡಿಕಾಕ್(31) 17 ಓವರ್​ಗಳ ಕಾಲ ಕ್ರೀಸ್​ನಲ್ಲಿ ನಿಂತು 75ರನ್​ಗಳ ಜೊತೆಯಾಟ ನಡೆಸಿ ಹರಿಣ ಪಡೆಯ ಪೆವಿಲಿಯನ್​ ಪರೇಡ್​ಗೆ ತಡೆಯೊಡ್ಡಿದರು. 31 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಡಿಕಾಕ್​ರನ್ನು ಅಶ್ವಿನ್​ ಬೌಲ್ಡ್​ ಮಾಡಿದರು. ನಂತರ ಬಂದ ಮುತ್ತುಸ್ವಾಮಿ ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು. 117ಎಸೆತಗಳಲ್ಲಿ 64 ರನ್​ ಸಿಡಿಸಿದ್ದ ಪ್ಲೆಸಿಸ್​ರನ್ನು ಅಶ್ವಿನ್​ ಔಟ್​ ಮಾಡುವ ಮೂಲಕ ಹರಿಣಗಳಿಗೆ ಆಘಾತ ನೀಡಿದರು.ಭಾರತೀಯರನ್ನು ಕಾಡಿದ ಮಹಾರಾಜ-ಫಿಲಾಂಡರ್ :162ಕ್ಕೆ 8ವಿಕೆಟ್​ ಕಳೆದುಕೊಂಡು ಇಂದೇ ಫಾಲೋಆನ್​ಗೊಳಗಾಗುವ ಭೀತಿಯಲ್ಲಿದ್ದ ಹರಿಣಗಳಿಗೆ ಬಾಲಂಗೋಚಿಗಳಾದ ಫಿಲಾಂಡರ್​(44) ಹಾಗೂ ಕೇಶವ್​ ಮಹಾರಾಜ್​(72​) 42 ಓವರ್​ಗಳ ಜೊತೆಯಾಟ ನಡೆಸಿ ಭಾರತೀಯ ಬೌಲರ್​ಗಳನ್ನು ಕಾಡಿದರು.ದಿನದಂತ್ಯಕ್ಕೆ 4 ಓವರ್​ಗಳಿರುವಾಗ 72 ರನ್​ಗಳಿಸಿದ್ದ ಕೇಶವ್​ ಮಹಾರಾಜ್​ ಅಶ್ವಿನ್​ ಬೌಲಿಂಗ್​ನಲ್ಲಿ ರೋಹಿತ್​ಗೆ ಕ್ಯಾಚ್​ ನೀಡಿ ಔಟಾದರು. ನಂತರ ಬಂದ ಕಗಿಸೋ ರಬಡಾರನ್ನು ಅಶ್ವಿನ್​ ಎಲ್​ಬಿಡಬ್ಲೂ ಬಲೆಗೆ ಬೀಳಿಸುವ ಮೂಲಕ ಹರಿಣಗಳ ಇನ್ನಿಂಗ್ಸ್​ಗೆ ತೆರೆ ಎಳೆದರು. ಭಾರತದ ಪರ ಉಮೇಶ್​ ಯಾದವ್​ 3ವಿಕೆಟ್​, ರವಿಚಂದ್ರನ್​ ಅಶ್ವಿನ್​ 4ವಿಕೆಟ್​, ಜಡೇಜಾ 1 ವಿಕೆಟ್​ ಹಾಗೂ ಶಮಿ 3 ವಿಕೆಟ್​ ಪಡೆದರು.ಇನ್ನು, ಎರಡು ದಿನಗಳ ಆಟ ಬಾಕಿಯಿದ್ದು, ಭಾರತ ತಂಡ 326 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿದೆ. ಆದರೆ, ಎದುರಾಳಿಗೆ ಫಾಲೋಆನ್​ ಏರಲಿದಿಯೇ ಅಥವಾ ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆಯಾ ಎಂಬುದೇ ಕೌತುಕದ ವಿಚಾರವಾಗಲಿದೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!