Welcome to bigtvnews   Click to listen highlighted text! Welcome to bigtvnews
Breaking News

BigTv News

ಭೀಕರ ಅಪಘಾತ: ಇಬ್ಬರ ದುರ್ಮರಣ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡದ ಮೈಕ್ರೊ ಫಿನಿಶ್ ಕಂಪೆನಿ ಎದುರುಗಡೆಯೇ ಈ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಬೈಕ್‌ ಮೇಲೆ ಬರುತ್ತಿದ್ದ ಇಬ್ಬರಿಗೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಇಬ್ಬರೂ ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತಪಟ್ಟ ಇಬ್ಬರೂ ಯುವಕರು ಧಾರವಾಡದ ಹೊಸಯಲ್ಲಾಪುರದವರೆಂದು ತಿಳಿದು ಬಂದಿದ್ದು, ಇನ್ನೂ ಅವರ ಹೆಸರು …

Read More »

ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ

ಹುಬ್ಬಳ್ಳಿ: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ತಾರಿಹಾಳ ಬಳಿ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಕಾರು, ಹಾಗೂ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ಸ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪಿದ್ದರೇ, ಮೂವರಿಗೆ ಗಂಭೀರಗಾಯಗಳಾಗಿವೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ಮತ್ತು ಗಾಯಗೊಂಡರ …

Read More »

ನೇಹರು ಓಲೆಕಾರ ಮೊಮ್ಮಕ್ಕಳು ನೆಣಿಗೆ ಶರಣು- ಬುದ್ದಿವಾದ ಹೇಳಿದ್ದಕ್ಕೆ ಈ ರೀತಿ ಮಾಡೋದಾ?..

ಹಾವೇರಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬ್ಯಾಡಗಿಯ ವಿನಾಯಕ ನಗರ ನಿವಾಸಿಗಳಾದ ಚಂದ್ರು ಛಲವಾದಿ ಅವರ ಮಕ್ಕಳಾದ ನಾಗರಾಜ (16) ಹಾಗೂ ಭಾಗ್ಯಲಕ್ಷ್ಮೀ (18) ಆತ್ಯಹತ್ಯೆಗೆ ಶರಣಾದ ದುರ್ದೈವಿಗಳು. ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ನಾಗರಾಜ ನೇಣಿಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕ ಭಾಗ್ಯಲಕ್ಷ್ಮೀ ಸಹ ಅದೇ …

Read More »

ವಸೀಮ್ ರಿಜ್ಜಿ ಅವಹೇಳನಕಾರಿ ಹೇಳಿಕೆ‌ ಖಂಡಿಸಿ ಎಐಎಂಐಎಮ್ ಪ್ರೋಟೆಸ್ಟ್.

ಹುಬ್ಬಳ್ಳಿ: ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಿರುದ್ಧವಾಗಿ ಉತ್ತರ ಪ್ರದೇಶದ ಸಿಯಾ ಬೋರ್ಡ್ ಚೇರ್ಮನ್ ವಸೀಮ್ ರಿಜ್ಜಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಎಐಎಂಐಎಂ ಪಕ್ಷ ನಗರದಲ್ಲಿ ಪ್ರತಿಭಟನೆ ನಡೆಸಿತು. ಎಐಎಮ್ಐಎಂ ಪ್ರೋಟೆಸ್ಟ್ ಇಲ್ಲಿನ ತಹಶಿಲ್ದಾರರ ಕಚೇರಿ ಎದುರಿಗೆ ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲೆಯ ಅಧ್ಯಕ್ಷ ನಜೀರ ಅಹ್ಮದ್ ಹೊನ್ಯಾಳ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅವರು, ವಸೀಮ್ ರಿಜ್ಜಿ ಮೊಹಮ್ಮದ್ ಪೈಗಂಬರ್ ಅವರ ಕುರಿತಾದ ಪುಸ್ತಕವನ್ನು …

Read More »

ಕಿಮ್ಸ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಹೃದಯ ರೋಗಕ್ಕೆ ಸರಿಯಾದ ಚಿಕಿತ್ಸೆ: ತಜ್ಞ ವೈದ್ಯರಿಲ್ಲ, ಅಗತ್ಯ ಸಲಕರಣೆ ಇಲ್ಲವೇ ಇಲ್ಲ…!

ಹುಬ್ಬಳ್ಳಿ : ಅದು ಇಡೀ ಉತ್ತರ ಕರ್ನಾಟಕ ಭಾಗದ ಬಡರೋಗಿಗಳಿಗೆ ಸಂಜೀವಿನಿ ಎಂದೇ ಹೆಸರು ವಾಸಿಯಾಗಿರುವ ಆಸ್ಪತ್ರೆ.‌ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರ ಚಿಕಿತ್ಸೆಗೆ ಬೇಕಾದ ನುರಿತ ತಜ್ಞರೂ ಇಲ್ಲ, ಅಗತ್ಯ ಸಲಕರಣೆಗಳೂ ಇಲ್ಲ. ಹೌದು.. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆಯಿಲ್ಲದೇ ಹೃದಯ ರೋಗಿಗಳು ಪರದಾಡುವಂತಾಗಿದೆ. ಉತ್ತರ ಕರ್ನಾಟಕದ ಐದಾರೂ ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ …

Read More »

ಬೈಕ್ ಗಳ ನಡುವೆ ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಎರಡು ಬೈಕ್ ಗಳಿಗೆ ಮತ್ತೊಂದು ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನವನಗರದ ಹು-ಧಾ ರಸ್ತೆಯ ಸಿಗ್ನಲ್ ಬಳಿ ನಡೆದಿದೆ. ಧಾರವಾಡದಿಂದ ಬರುತ್ತಿದ್ದ ಬೈಕ್ ಸವಾರರು ನವನಗರದ ಬಳಿ ಬಂದಾಗ ಸಿಗ್ನಲ್ ಬಿದ್ದಿದೆ. ಆಗ ಹಿಂದಿನಿಂದ ವೇಗವಾಗಿ ಬಂದ ಕೆಟಿಎಮ್ ಬೈಕ್ ಸವಾರ ನಿಂತಿದ್ದ ಎರಡು ಬೈಕ್ ಗಳಿಗೆ ಗುದ್ದಿದ್ದಾನೆ.‌ ಪರಿಣಾಮ ಬೈಕ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಬೈಕ್ ಸವಾರರಿಗೆ ಗಂಭೀರವಾಗಿ ಗಾಯಗಳಾಗಿವೆ. ಇನ್ನು ಗಾಯಗೊಂಡವರ ಮಾಹಿತಿ …

Read More »

ಬಿಜೆಪಿಗೆ ಮತ ಕೇಳೋ ನೈತಿಕತೆಯಿಲ್ಲ- ಸಲೀಂ ಅಹ್ಮದ

ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣಾ ಪ್ರಚಾರ ಬಿರುಸು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವಿಗೆ ಕಾರ್ಯತಂತ್ರ ಸಭೆ ನಂತರ ಕೈ ಅಭ್ಯರ್ಥಿ ಸಲೀಮ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡ್ತಿಲ್ಲ ಈ ಹಿಂದೆಯೂ ಕಾಂಗ್ರೆಸ್ ನಿಂದ ಒಂದೇ ಅಭ್ಯರ್ಥಿಯನ್ನು ಹಾಕಲಾಗಿತ್ತು ಈ ಬಾರಿಯೂ ಪಕ್ಷ ಒಬ್ಬ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ ಬಿಜೆಪಿಗೆ ಮತ …

Read More »

ಬ್ರೇಕಿಂಗ್ : ಧಾರವಾಡ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢ

ಧಾರವಾಡ : ಕೊರೋನಾ ಮುಕ್ತ ಜಿಲ್ಲೆಯಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಮತ್ತೇ ಅಬ್ಬರಿಸಿದೆ. ಧಾರವಾಡದ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೌದು, ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ 300 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ತಪಾಸಣೆ ವೇಳೆ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟು ವರದಿಯಾಗಿದೆ. ಎಸ್ ಡಿಎಮ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ನಿತೀಶ್ …

Read More »

ನ.26 ಕ್ಕೆ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ: ಜಿ-9 ಕಮ್ಯುನಿಕೇಶನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ ನಿರ್ಮಾಣದ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ನ.26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಸಾಹಿತಿಗಳಾದ ಶ್ಯಾಮಸುಂದರ್ ಬಿದರಕುಂದಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಮೃತ್ ಅಪಾರ್ಟ್ಮೆಂಟ್ ಇದು ನಗರ ಜೀವನ ಕುರಿತು ಇರುವ ಕತೆ. ಸಂಬಂಧಗಳು, ಭಾವನೆಗಳು, ಅಧುನಿಕ ಜೀವನ ಹೀಗೆ ಸಾಕಷ್ಟುಅಂಶಗಳು ಚಿತ್ರದಲ್ಲಿ ಬರುತ್ತವೆ. ಗುರುರಾಜ್‌ ಕುಲಕರ್ಣಿ ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರವಿದು. ತಾರಕ್‌ ಪೊನ್ನಪ್ಪ, ಬಾಲಾಜಿ ಮನೋಹರ್‌, …

Read More »

ಕಳೆದ ವಾರ ಪುನರ್ ಆರಂಭವಾಗಿದ್ದ. ಶ್ರೀ ಶಿವಸಾಗರ ಶುಗರ್ ಆ್ಯಂಡ್ ಅಗ್ರೋ ಪ್ರಾಡಕ್ಟ್ ಮುಚ್ಚಲು ಕೆಲ ನಿರ್ದೇಶಕರು ಹುನ್ನಾರ.

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಉದಪುಡಿ ಗ್ರಾಮದಲ್ಲಿ ಆರು ವರ್ಷ ಬಂದಾಗಿದ್ದ ಶ್ರೀ ಶಿವಸಾಗರ ಶುಗರ್ ಆ್ಯಂಡ್ ಅಗ್ರೋ ಪ್ರಾಡಕ್ಟ್ ಲಿ. ಕಳೆದ ವಾರ ಪುನರ್ ಆರಂಭವಾಗಿದ್ದು, ಅದನ್ನು ಮುಚ್ಚಲು ಕೆಲ ನಿರ್ದೇಶಕರು ಹುನ್ನಾರ ಮಾಡಿ ಪ್ರತಿಭಟನೆ ಮಾಡುತ್ತಿರುವುದು ಖಂಡನೀಯ ಎಂದು ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘದ‌ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜೇಂದ್ರ ಪಾಟೀಲ್ ಎಂಬುವವರು ಸಕ್ಕರೆ …

Read More »
You cannot copy content of this page
Click to listen highlighted text!