Welcome to bigtvnews   Click to listen highlighted text! Welcome to bigtvnews
Breaking News

ರಾಯಚೂರು

ಅಕಾಲಿಕ ಮಳೆಯಿಂದ ಬೆಳೆ ನಾಶ: ರಾಯಚೂರಿನಲ್ಲಿ ರೈತ ಆತ್ಮಹತ್ಯೆ

ಮೃತ ವೀರನಗೌಡ ಮಾಲಿಪಾಟೀಲ್ ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ನೊಂದು ರೈತ ನೇಣು‌ ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದ ವೀರನಗೌಡ ಮಾಲಿಪಾಟೀಲ್ (55) ಮೃತ ರೈತ. ಈತ 8 ಎಕರೆ ಜಮೀನು ಹೊಂದಿದ್ದು ಭತ್ತ ಬೆಳೆದಿದ್ದ. ಫಸಲು ಇನ್ನು ಸ್ವಲ್ಪದಿನಗಳ ಕಳೆದರೆ ಕೈಗೆ ಬರುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಪೈರು ನೆಲಕಚ್ಚಿತು. ಇದರಿಂದ ಆಘಾತವಾಗಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು …

Read More »

ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ

ರಾಯಚೂರು:. ಸಾಲಬಾಧೆ ತಾಳಲಾರದೆ ರೈತ ಸಾವಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.ಬಸವರಾಜ ಜಾವೂರ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ನಾಗರಗಾಳ ಪಿಕೆಜಿಬಿ ಬ್ಯಾಂಕ್​ನಲ್ಲಿ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ರೈತ ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದು, ಸಾಲ ಮರುಪಾವತಿ ಮಾಡಲು‌ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.ಈ ಸಂಬಂಧ ಲಿಂಗಸೂಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ …

Read More »

ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಮಹಿಳೆ ಸಾವು

ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಮಹಿಳೆ ಸಾವಾನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಪೂರ್ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಹರಿದು ಬಿದ್ದ ವಾಯರ್ ತುಳಿದು ಮಹಿಳೆ ಸಾವನಾಪ್ಪಿದ್ದಾಳೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »
You cannot copy content of this page
Click to listen highlighted text!