Breaking News

ಶಿವಮೊಗ್ಗ

ಬಸ್ ನಿಲ್ದಾಣದ ಒಂದು ಸುತ್ತು ಬಂದ ಸಂಚಾರಿ ಪೊಲೀಸರು ಎಲ್ಲಾ ವಾಹನಗಳನ್ನು ತೆರವುಗೊಳಿಸಿ ಬಸ್‌ಗಳು ಸರಾಗವಾಗಿ ಚಲಿಸಲು ಅನುಕೂಲವಾಗುವಂತೆ ವ್ಯವಸ್ಥೆ..

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಒಳ ಭಾಗದಲ್ಲಿ ವಾಹನಗಳ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಬೈಕ್‌ಗಳನ್ನು ಹಿಡಿದು ದಂಡ ವಿಧಿಸಿದರು, ಬಸ್ ನಿಲ್ದಾಣ ಪ್ರವೇಶ ಮಾಡದಂತೆ ಎಚ್ಚರಿಕೆಯನ್ನು ಸಹ ನೀಡಿದರು. ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಒಳಭಾಗದಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಬಸ್ ನಿಲ್ದಾಣದ ಒಳಗೆ ಇದ್ದ ಬೈಕ್ ಸೇರಿದಂತೆ ವಿವಿಧ ವಾಹನಗಳನ್ನು ತೆರವುಗೊಳಿಸಿದರು. ಬಸ್ ನಿಲ್ದಾಣದ ಒಂದು ಸುತ್ತು ಬಂದ ಸಂಚಾರಿ ಪೊಲೀಸರು …

Read More »

ಐದು ತಿಂಗಳಿನಲ್ಲಿ ಎಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ….

ಶಿವಮೊಗ್ಗ: ಆ ರಮೇಶ್ ಜಾರಕಿಹೊಳಿ, ಸಿನಿಮಾ ನಟ ಸಿಪಿ ಯೋಗೀಶ್ವರ್ ಅಂಥವರು ಒಂದೆರಡು ಜನ ಸೇರಿಕೊಂಡು ಆಪರೇಷನ್ ಕಮಲ ಅಂತ ಹೊರಟಿದ್ದಾರೆ. ಅಂದು ಯಡಿಯೂರಪ್ಪ ಹಾಗೂ ಅವರ ಮಗ ಬಿ ವೈ ವಿಜಯೇಂದ್ರ ಹಡಬೆ ದುಡ್ಡಿತ್ತು ಆಪರೇಷನ್ ಕಮಲ ಮಾಡಿದರು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಬುಧವಾರ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯವರಿಗೆ, ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು …

Read More »

ಮತ್ತೆ ಡಿ ಕೆ ಶಿವಕುಮಾರ್‌ ಜೈಲಿಗೆ ಹೋಗುತ್ತಾರೆ ಎಂದ ಈಶ್ವರಪ್ಪ….

ಶಿವಮೊಗ್ಗ: ಅಕ್ರಮ ಅಸ್ತಿ ಗಳಿಕೆ ಹಿನ್ನಲೆ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದೆ. ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ಡಿ ಕೆ ಶಿವಕುಮಾರ್‌ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಹೌದು, ಈ ಕುರಿತು ಗುರುವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬರೆದಿಟ್ಟುಕೊಳ್ಳಿ ಇವತ್ತಲ್ಲ, ನಾಳೆ ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ. …

Read More »

ಮೊದಲ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವೆ ಕಾಮಗಾರಿ ಆರಂಭವಾಗಿದೆ….

ಶಿವಮೊಗ್ಗ; ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಮಹತ್ವದ ರೈಲು ಯೋಜನೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ ಈ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿದೆ. ನೈಋತ್ಯ ರೈಲ್ವೆ ಈ ಕುರಿತು ಅಪ್‌ಡೇಟ್‌ ಹಂಚಿಕೊಂಡಿದೆ. ಶಿಕಾರಿಪುರ-ರಾಣೆಬೆನ್ನೂರು (ಹಾವೇರಿ) ನೂತನ ರೈಲು ಮಾರ್ಗದ ಕಾಮಗಾರಿಯನ್ನು ಒಟ್ಟು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವೆ ಕಾಮಗಾರಿ ಆರಂಭವಾಗಿದೆ. ನೈಋತ್ಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಕಾಮಗಾರಿಯ …

Read More »

ಪರೀಕ್ಷೆ ಮುಗಿದ 48 ಗಂಟೆಗಳ ಒಳಗೆ ಫಲಿತಾಂಶ ಪ್ರಕಟಿಸಿ ಶೈಕ್ಷಣಿಕ ದಾಖಲೆ ಸೃಷ್ಟಿ….

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಬಿಸಿಎ (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಪದವಿಯ 5 ಮತ್ತು 6ನೇ ಸೆಮಿಸ್ಟರ್​ಗಳ ಪರೀಕ್ಷೆ ಮುಗಿದ 48 ಗಂಟೆಗಳ ಒಳಗೆ ಫಲಿತಾಂಶ ಪ್ರಕಟಿಸಿ ಶೈಕ್ಷಣಿಕ ದಾಖಲೆ ಸೃಷ್ಟಿಸಿದೆ. ಶೀಘ್ರ ಮೌಲ್ಯಮಾಪನಕ್ಕೆ ಹೆಸರಾಗಿರುವ ಕುವೆಂಪು ವಿವಿಯು ಈ ಹಿಂದೆಯೂ ಶೀಘ್ರವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ನೆರವಾಗಿತ್ತು. ಪ್ರಸ್ತುತ ನಾನ್ – ಎನ್​ಇಪಿ ಬ್ಯಾಚ್​ನ ಬಿಸಿಎ ಪದವಿಯ 5 ಮತ್ತು 6ನೇ ಸೆಮಿಸ್ಟರ್​ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ಮುಕ್ತಾಯಗೊಂಡ …

Read More »

ವಮೊಗ್ಗ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ….

ಶಿವಮೊಗ್ಗ: ತನ್ನ ಅಪ್ರಾಪ್ತ ವಯಸ್ಸಿನ ಮಗನ ಕೈಗೆ ಓಮ್ನಿ ಕಾರನ್ನು ಚಲಾಯಿಸಲು ನೀಡಿದ ತಂದೆಗೆ ಶಿವಮೊಗ್ಗ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಸೆಪ್ಟಂಬರ್ 9 ರಂದು ಶಿವಮೊಗ್ಗ ಕರ್ನಾಟಕ ಸಂಘದ ಬಳಿ ಸಂಚಾರಿ ಪೊಲೀಸ್ ಠಾಣೆಯ ಪಿಸಿಐ ಹೆಚ್ ಎಸ್ ಶಿವಣ್ಣನವರ್ ವಾಹನ ತಪಾಸಣೆ ನಡೆಸುವಾಗ ಓಮ್ನಿ ಕಾರನ್ನು ತಪಾಸಣೆ ನಡೆಸಿದಾಗ ವಾಹನವನ್ನು 17 ವರ್ಷದ ಬಾಲಕ ಚಲಾಯಿಸುತ್ತಿರುವುದು ಕಂಡು ಬರುತ್ತದೆ. ನಂತರ ವಾಹನದ ದಾಖಲಾತಿ ಪರಿಶೀಲಿಸಿದಾಗ …

Read More »

ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಕಾರ್ಖಾನೆ….

ಶಿವಮೊಗ್ಗ: ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು, ಈಗ ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಅವರು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗುರುವಾರ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ವಿಸ್ತೃತ ವಿಚಾರ ವಿನಿಮಯ ನಡೆಸಿದ …

Read More »

ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದ್ದರೂ ಕ್ರೈಂ ತಡೆಯುವಲ್ಲಿ ವಿಫಲ….

ಶಿವಮೊಗ್ಗ: ಸಮಾಜದಲ್ಲಿ ದಿನೇ ದಿನೆ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದ್ದರೂ ಕ್ರೈಂ ತಡೆಯುವಲ್ಲಿ ವಿಫಲವಾಗುತ್ತಿದ್ದಾರೆ ಎನ್ನಬಹುದು. ಕ್ರೈಂ ನಡೆದ ನಂತರ ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಶ್ರಮ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಘಾತುಕ ಶಕ್ತಿಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಯು ತಾಂತ್ರಿಕವಾಗಿ ಮುನ್ನುಡಿ ಇಡುತ್ತಿದೆ. ಇದರ ಭಾಗವಾಗಿ ಇಲಾಖೆಯು ಡ್ರೋನ್​ ಬಳಸಲು ಮುಂದಾಗಿದ್ದು, ಪಡ್ಡೆಗಳು, ಕಿಡಿಗೇಡಿಗಳ ಮೇಲೆ ಕಣ್ಣಿಡಲು ಇದು ಸಹಾಯಕವಾಗಿದೆ. …

Read More »

ಮಲೆನಾಡಿಗರ ಬಹುದಿನದ ಕನಸು ಇಂದು ನನಸು…

ಶಿವಮೊಗ್ಗ: ಮಲೆನಾಡಿಗರ ಬಹುದಿನದ ಕನಸು ಇಂದು ನನಸಾಗುತ್ತಿದೆ. ಇಂದಿನಿಂದ ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಹಾರಾಟ ಪ್ರಾರಂಭವಾಗಲಿದೆ. ಇಂದು (ಗುರುವಾರ) ಬೆಳಗ್ಗೆ ಬೆಂಗಳೂರಿನಿಂದ ಇಂಡಿಗೋ ವಿಮಾನ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 9:50ಕ್ಕೆ ಇಂಡಿಗೋ 6E 7731 ವಿಮಾನವು ಕುವೆಂಪು ವಿಮಾನ ನಿಲ್ದಾಣಕ್ಕೆ ಸುಮಾರು 11:05ಕ್ಕೆ ಆಗಮಿಸಲಿದೆ. ಈ ಮೂಲಕ ನಾಗರಿಕ ವಿಮಾನ ಹಾರಾಟ ಪ್ರಥಮವಾಗಿ ಪ್ರಾರಂಭವಾಗಲಿದೆ. ಇಂಡಿಗೋ ವಿಮಾನ …

Read More »

ಕುಮಾರ ಬಂಗಾರಪ್ಪ ಕಾಂಗ್ರೆಸ್​ಗೆ ಸೇರಲ್ಲ: ಬಿ.ವೈ ರಾಘವೇಂದ್ರ.

ಶಿವಮೊಗ್ಗ: ಕುಮಾರ ಬಂಗಾರಪ್ಪ ನಮ್ಮ ನಾಯಕರು. ಅವರು ಕಾಂಗ್ರೆಸ್​ಗೆ ಸೇರಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ನವರು ವಿರೋಧ ಪಕ್ಷವನ್ನು ದುರ್ಬಲ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಆದರೆ, ಇದು ಫಲ ನೀಡಲ್ಲ ಎಂದರು. ಕುಮಾರ ಬಂಗಾರಪ್ಪ ನಮ್ಮ ನಾಯಕರು. ನಮ್ಮ ಪಕ್ಷದ ಶಾಸಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರು ಎಲ್ಲೂ ಹೋಗಲ್ಲ. ಯಾವುದೇ …

Read More »

You cannot copy content of this page