Welcome to bigtvnews   Click to listen highlighted text! Welcome to bigtvnews
Breaking News

ಮೈಸೂರು

ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ-ನಟ ಚೇತನ್‌

ಮೈಸೂರು: ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪ ಸಂಬಂಧ ಬಸವನಗುಡಿ ಠಾಣೆಯಲ್ಲಿ ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ ಎಂದು ನಟ ಚೇತನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಬಲವಿದೆ. ಪೊಲೀಸರು ನ್ಯಾಯದ ಪರವಾಗಿದ್ದಾರೆ. ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ ಎಂದರು. ಪಿರಿಯಾಪಟ್ಟಣ …

Read More »

ನಾವು ಅಧಿಕಾರಕ್ಕೆ ಬಂದ್ರೆ ಪೌರಕಾರ್ಮಿಕರನ್ನ ಖಾಯಂಗೊಳಿಸುತ್ತೇವೆ: ಸಿದ್ದರಾಮಯ್ಯ

ಮೈಸೂರು: ನಾವು ಅಧಿಕಾರಕ್ಕೆ ಬಂದ ತಕ್ಷಣ ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ. ಏನೇ ಕಾನೂನು ತೊಡಕುಗಳಿದ್ದರು ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಗರದ ಮಾನಸ ಗಂಗೋತ್ರಿಯಲ್ಲಿ ಪೌರಬಂಧು ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಪೌರಕಾರ್ಮಿಕರ ಪರವಾಗಿ ಹಲವು ಕೆಲಸಗಳನ್ನು ಮಾಡಿದೆ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವೋಟ್ ಮಾಡುವ ಅಧಿಕಾರ ಇದ್ದರೆ ಸಾಲದು, ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ …

Read More »

ಎರಡು ತಲೆ, ಮೂರು ಕಣ್ಣುಳ್ಳ ವಿಚಿತ್ರ ಕರು ಜನನ- ಕರು ನೋಡಲು ಮುಗಿಬಿದ್ದ ಜನರು

ಮೈಸೂರು: ಎರಡು ತಲೆ, ಮೂರು ಕಣ್ಣುಗಳಿರುವ ವಿಚಿತ್ರ ಕರುವೊಂದು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಜನಿಸಿದ್ದು, ಕರು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಹೊಮ್ಮರಗಳ್ಳಿ ನಿವಾಸಿ ಮಹದೇವಪ್ಪ ಅವರ ಮನೆಯ ಸೀಮೆ ಹಸು‌ ಈ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಎರಡು ತಲೆ, ಮೂರು ಕಣ್ಣನ್ನು ಈ ಕರು ಹೊಂದಿದ್ದು, ಈ ಅದ್ಭುತವನ್ನು ನೋಡಿದ ಮನೆ ಮಂದಿ‌ ಸಂತಸಗೊಂಡಿದ್ದಾರೆ. ಈ ಕುರಿತು ‘ಈಟಿವಿ ಭಾರತ’ದ ಜೊತೆ ದೂರವಾಣಿಯಲ್ಲಿ ಮಾತನಾಡಿದ …

Read More »

ಮೈಸೂರಿನ 48 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ತಗುಲಿದ ಕೊರೊನಾ ಸೋಂಕು!

ಮೈಸೂರು: ಬೆಂಗಳೂರು ಹಾಗೂ ಧಾರವಾಡದ ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್​​ ದೃಢಪಟ್ಟ ಬೆನ್ನಲ್ಲೇ ಇದೀಗ ಮೈಸೂರಿನ ಕಾಲೇಜು ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದು ವಾರದ ಅವಧಿಯಲ್ಲಿ ಮೈಸೂರಿನ ಎರಡು ಖಾಸಗಿ ಕಾಲೇಜುಗಳ 48 ನರ್ಸಿಂಗ್‌ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲಾಡಳಿತದ ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಎರಡು ಖಾಸಗಿ ನರ್ಸಿಂಗ್ ಕಾಲೇಜುಗಳ 48 ವಿದ್ಯಾರ್ಥಿಗಳಲ್ಲಿ ಕೋವಿಡ್ ತಗುಲಿರುವುದು​​ ದೃಢಪಟ್ಟಿದೆ. ಈ ಎಲ್ಲ ವಿದ್ಯಾರ್ಥಿಗಳು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ನರ್ಸಿಂಗ್‌ …

Read More »

ಶಕ್ತಿಧಾಮಕ್ಕೆ ಭೇಟಿಕೊಟ್ಟ ಶಿವರಾಜ್‍ಕುಮಾರ್ ದಂಪತಿ

ಮೈಸೂರು: ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ ಭೆಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ವಿಚಾರಿಸಿದ್ದಾರೆ. ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ಮಾಡಿದ್ದಾರೆ. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಾಗಿದೆ. ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. 150 ಮಕ್ಕಳ ಹಾರೈಕೆ, ಶಿಕ್ಷಣ …

Read More »

ಮೈಸೂರು-ಚಾಮರಾಜನಗರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಡಾ.ಡಿ.ತಿಮ್ಮಯ್ಯ ಕಣಕ್ಕೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಕಣದಿಂದ ಕಾಂಗ್ರೆಸ್​ನ ಮತ್ತೋರ್ವ ಸದಸ್ಯ ಹಿಂದೆ ಸರಿದಿದ್ದಾರೆ. ಪ್ರಸ್ತುತ ಮೈಸೂರು-ಚಾಮರಾಜನಗರದಿಂದ ಕಾಂಗ್ರೆಸ್ ಎಂಎಲ್​ಸಿಯಾಗಿದ್ದ ಆರ್.ಧರ್ಮಸೇನ ಈ ಬಾರಿ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದಾರೆ. ಇವರ ಬದಲಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ಡಿ.ತಿಮ್ಮಯ್ಯ ತಾವೇ ಈ ಬಾರಿ ಪರಿಷತ್ ಚುನಾವಣೆಯ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಇದುವರೆಗೂ 25 ಕ್ಷೇತ್ರಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ. ತಿಮ್ಮಯ್ಯ ಅವರು ಇಂದು ಬೆಂಗಳೂರಿಗೆ …

Read More »

ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್​ ಪಡೆಯುವ ಸರ್ಕಾರವಿದೆ-ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರು: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್​ ಪಡೆಯುವ ಸರ್ಕಾರವಿದೆ. ರಾಜ್ಯಪಾಲರು ಇಂತಹ ಸರ್ಕಾರವನ್ನು ವಜಾ ಮಾಡುವಂತೆ ಪತ್ರ ಬರೆಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಕಾಮಗಾರಿ ತೆಗೆದುಕೊಳ್ಳಬೇಕಾದರೆ ಮಂತ್ರಿಗಳಿಗೆ, ಎಂಎಲ್​ಎಗಳಿಗೆ 40 ಪರ್ಸೆಂಟ್ ಕಮಿಷನ್​ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದಿದೆ ಎಂದರು. ಇಷ್ಟೊಂದು ಕಮಿಷನ್​ ತೆಗೆದುಕೊಳ್ಳುವ ಸರ್ಕಾರವನ್ನು …

Read More »

ಮೈಸೂರಲ್ಲಿ ಬ್ರೇಕ್​ ಬದಲು ಎಕ್ಸಲೇಟರ್​ ಒತ್ತಿದ್ದಕ್ಕೆ ಮಹಿಳೆ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೈಸೂರು: ಚಾಲಕನ‌ ಅಚಾತುರ್ಯದಿಂದ ಕಾರೊಂದು ಫುಟ್​ಪಾತ್​ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದಿದೆ (Car hits on a woman). ಈ ವೇಳೆ ಮಹಿಳೆ ಗಾಯಗೊಂಡ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್​ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್​ಪಾತ್​ ಮೇಲೆ ನುಗ್ಗಿದೆ. ಈ ವೇಳೆ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬುವರಿಗೆ …

Read More »

ಮಳೆ ಅವಾಂತರ: ಮನೆಯ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರು ಬಾಲಕನಿಗೆ ಗಾಯ

ಮಳೆಯ ಅವಾಂತರದಿಂದ ಮನೆಯ ಗೋಡೆ ಕುಸಿದಿರುವುದು, ಮೈಸೂರು: ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಮಣ್ಣಿನ ಗೋಡೆ ಕುಸಿದು (wall collapse Due To Heavy Rain) ಬಿದ್ದು, ಬಾಲಕನ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲೂಕಿನ ಗಣಿಗರ ಹುಂಡಿಯಲ್ಲಿ ನಡೆದಿದೆ. ಮೊಳೆ ಗ್ರಾಮದಲ್ಲಿಯೂ ಮನೆ ಬಿದ್ದ ಘಟನೆ ಜರುಗಿದೆ. ಗ್ರಾಮದ ಸಿದ್ದರಾಜು, ಜ್ಯೋತಿ ಎಂಬುವರ ಪುತ್ರ ವಿಕಾಸ್ (16)ಗಾಯಗೊಂಡ ಬಾಲಕ. ವಿಕಾಸ್​ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು …

Read More »

ಕೌಟುಂಬಿಕ ಕಲಹ: ಮೈಸೂರಲ್ಲಿ ನೇಣಿಗೆ ಶರಣಾದ ASI.

ಆತ್ಮಹತ್ಯೆಗೆ ಶರಣಾದ ಎಎಸ್‌ ಐ ಶಿವಕುಮಾರಸ್ವಾಮಿ ಮೈಸೂರು: ನಗರದ ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್​ಐವೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ(ASI Suicide) ಶರಣಾಗಿರುವ ಘಟನೆ ನಡೆದಿದೆ.ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್ಐ. ಇವರು ಗೌರಿಶಂಕರ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಶಿವಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »
You cannot copy content of this page
Click to listen highlighted text!