Breaking News

ಅಪರಾಧ

ಮಹಿಳೆಯ ಬೆರಳು ಕತ್ತರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರ ಬಂಧನ

ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ, ಲಾಂಗ್‌ನಿಂದ ಹಲ್ಲೆ ಮಾಡಿ, ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಯೋಗಾನಂದ (35) ಹಾಗೂ ಈತನ ಸಹಚರ ಪ್ರವೀಣ್ ಬಂಧಿತರು.ದೂರುದಾರ ಮಹಿಳೆ ಉಷಾ ಹಾಗೂ ಸ್ನೇಹಿತೆ ವರಲಕ್ಷ್ಮೀ ಎಂಬವರು ಗಣೇಶ ಹಬ್ಬದ ಆರ್ಕೆಸ್ಟ್ರಾ ಮುಗಿಸಿ ಮನೆಗೆ ವಾಪಸ್ ಆಗುವಾಗ ಪಲ್ಸರ್ ಬೈಕ್​ನಲ್ಲಿ ಬಂದ ದುರುಳರು ಮಚ್ಚು ತೋರಿಸಿದ್ಧಾರೆ. ಗಾಬರಿಗೊಂಡ ಉಷಾ ಸರ ನೀಡಿದರೆ, ವರಲಕ್ಷ್ಮಿ ಅವರು …

Read More »

ಬೆಂಗಳೂರಲ್ಲಿ ಮತ್ತೊಂದು ಭೀಕರ ಮರ್ಡರ್ : ಹೆತ್ತ ತಾಯಿಯ ಕತ್ತು ಸೀಳಿ ಕೊಂದ ಪಾಪಿ ಮಗ.!

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯ ನಡೆದಿದ್ದು, ಮಗನೊಬ್ಬ ತನ್ನ ಹೆತ್ತ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ಸ್ವಂತ ಮಗನೇ ತಾಯಿಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಯನ್ನು ಸರೋಜಮ್ಮ (60) ಎಂದು ಗುರುತಿಸಲಾಗಿದೆ.ಅನಿಲ್ (36) ತಾಯಿಯನ್ನೇ ಕೊಂದ ಮಗ.ಜಮೀನು ಮಾರಾಟ ಮಾಡಿದ ಹಣ ಕೊಡಲಿಲ್ಲ ಎಂದು ತಾಯಿಯಾದ ಸರೋಜಮ್ಮಳ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸರೋಜಮ್ಮ ಸ್ಥಳದಲ್ಲೇ …

Read More »

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ, ಕತ್ತು ಕುಯ್ದ ಪುತ್ರ

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಹಾಕಿ, ಕತ್ತು ಕುಯ್ದು ಕೊಲೆ ಮಾಡಿದ ದಾರುಣ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ವೆಂಕಟೇಶ್ ಗಿರಿಸಾಗರ್ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ್ ಕೈ ಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ.ಮನೆಯಲ್ಲಿ ಮಗ ವೆಂಕಟೇಶ್ ಹಾಗೂ ಶಾವಕ್ಕ ವಾಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ತುಳಸಿಗೇರಿ …

Read More »

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿಯೂ ಇಂತದ್ದೇ ಘಟನೆ ನಡೆದಿದೆ. ಪತಿ ಮಹಾಶಯನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನು (25) ಕೊಲೆಯಾದ ಮಹಿಳೆ. ರಮೇಶ್ ಪತ್ನಿಯನ್ನೇ ಕೊಂದ ಗಂಡ. ರಮೇಶ್ ಹಾಗೂ ತನು 7 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ …

Read More »

ದೇವಾಲಯ ಹುಂಡಿ ಹಣ ಎಣಿಸುವಾಗ ಕಳ್ಳತನಕ್ಕೆ ಯತ್ನಿಸಿದ ಮೂವರು ಅರೆಸ್ಟ್

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆಯ ವೇಳೆ ಕಳ್ಳತನ ಮಾಡಲು ಯತ್ನಿಸಿದ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಮಂಡ್ಯ ನಗರದ ಶರವಣ, ಗಿರೀಶ ಮತ್ತು ಶ್ರೀನಿವಾಸ ಬಂಧಿತ ಆರೋಪಿಗಳು.ಗುರುವಾರ ನಡೆದ ಹುಂಡಿ ಹಣ ಎಣಿಕೆಯ ವೇಳೆ ಈ ಮೂವರು ಸೇರಿಕೊಂಡಿದ್ದು, ಜೇಬಿನಲ್ಲಿ ಹಣ ಹಾಕಿಕೊಂಡು ಮೂತ್ರ ವಿಸರ್ಜನೆ ನೆಪದಲ್ಲಿ ಹೊರಬಂದು ತಮ್ಮ ವಾಹನದಲ್ಲಿ ಹಣ ಇಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ಹಣ ಎಣಿಕೆ ವೇಳೆ ಈ …

Read More »

ಇಂಜೆಕ್ಷನ್​ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್​: 6 ತಿಂಗಳ ಬಳಿಕ ಸತ್ಯ ಬೆಳಕಿಗೆ; ಆರೋಪಿ ಅರೆಸ್ಟ್​

ಅಕ್ಟೋಬರ್​ 15: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಆದರೆ ಬೆಂಗಳೂರಲ್ಲೊಬ್ಬ ವೈದ್ಯ ತನ್ನ ಪತ್ನಿ ಪಾಲಿಗೆ ಯಮನಾಗಿದ್ದಾನೆ. ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್​ ನೀಡಿ ಕೊಂದು, ಇದೊಂದು ಸ್ವಾಭಾವಿಕ ಸಾವು ಎಂಬಂತೆ ಕುಟುಂಬಸ್ಥರನ್ನು ನಂಬಿಸಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹ ನಡೆದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ, ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು …

Read More »

ಚಿನ್ನ ಕದ್ದ ಚೋರಿ! ರನ್ಯ ಬೇಕಿತ್ತ ಚಿನ್ನ.

ಬೆಂಗಳೂರು, ಮಾರ್ಚ್ 04,ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ‌ ಪಡೆಯಲಾಗಿದೆ. ವಿದೇಶದಿಂದ ಬಂದ ನಟಿಯನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರೆ. ನಟಿ ರನ್ಯಾ ರಾವ್ ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಮಾಣಿಕ್ಯ ಹಾಗೂ ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ ಅಭಿನಯದ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಆಪರೇಷನ್!. ಅನೇಕ ಬಾರಿ ದುಬೈಗೆ …

Read More »

ಮೊನ್ನೆ ಹುಬ್ಬಳ್ಳಿಯಲ್ಲಿ ಇಂದು ಧಾರವಾಡದಲ್ಲಿ ಕೊಲೆ…

ಇಲ್ಲಿಯ ಚಿತೆ ಆರುವ ಮುನ್ನ ಮತ್ತೊಂದು ಕೊಲೆ!!!! ಧಾರವಾಡದ ಗೋವನಕೊಪ್ಪ ಕ್ರಾಸ್ ಬಳಿ ಮತ್ತೊಂದು ಕೊಲೆ!!! ಸ್ಲಗ್ ಧಾರವಾಡದಲ್ಲಿ ಯುವಕನ ಬರ್ಬರ ಹತ್ಯೆ… ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ.. ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರೊಯಾಗಿರುವ ಘಟನೆ ಧಾರವಾಡದ ಹೊರವಲಯದ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ನಡೆದಿದೆ.‌ವೈ- ಮೂವತ್ತು ವರ್ಷದ ಹರೀಶ ಶಿಂಧೆ ಎಂಬ ಯುವಕನೇ ಹತ್ಯೆಯಾದ ಯುವಕನೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ …

Read More »
Featured Video Play Icon

ಕೇಂದ್ರ ಬಜೆಟ್ ಸ್ವಾಗತಾರ್ಹ: ಕರ್ನಾಟಕ ವಾಣಿಜ್ಯೋದ್ಯಮ ಅಧ್ಯಕ್ಷರ ಅಭಿಮತ..!

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮೋದಿ 3.0 ಬಜೆಟ್ ನಿಜಕ್ಕೂ ಸ್ವಾಗತಾರ್ಹವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಪ್ರತಿಯೊಂದು ರಂಗದಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಸಂಶಿಮಠ ಹೇಳಿದರು. ಕೇಂದ್ರ ಬಜೆಟ್ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೈಗಾರಿಕೋದ್ಯಮದ ಅಭಿವೃದ್ಧಿ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದೆ. ಅಲ್ಲದೇ ದೂರದೃಷ್ಟಿಯನ್ನಿಟ್ಟುಕೊಂಡು …

Read More »
Featured Video Play Icon

ದೇವಪ್ಪಜ್ಜ ಕೊಂದ ಪಾಪಿ ಅಂದರ್…

ಮಾಟ ಮಂತ್ರ ಮಾಡಿದ್ದು ಉಸಿರು ನಿಲ್ಲಲು ಕಾರಣವಾಯ್ತಾ..?? ಕಮಿಷನರ್ ಏನಂದ್ರು ಕೇಳಿ ವಿಡಿಯೋ ಇದೆ

Read More »