Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ಸೇನಾ ನೇಮಕಾತಿಗೆ ಯುವಕರ ನಿರುತ್ಸಾಹ.

ಉಡುಪಿ: ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯ ಜಿಲ್ಲೆಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಯುವಕರು ಭಾರತೀಯ ಸೇನೆ ಆಯ್ಕೆಯಾಗಿ ಸೇವೆ ಸಲ್ಲಿಸಲು ತೀವ್ರ ನಿರುತ್ಸಾಹ ತೋರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎ. 4ರಿಂದ 14ವರೆಗೆ ಭಾರತೀಯ ಸೇನೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅದರ ಅಂಗವಾಗಿ ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿಗಳ ಸಲ್ಲಿಕೆಯಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದ 11 ಜಿಲ್ಲೆಗಳಿಂದ 15,000 ಅರ್ಜಿ ಸಲ್ಲಿಕೆಯಾಗಿದೆ. ಬಾಗಲಕೋಟೆ, ಧಾರವಾಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರು ಶೇ. 80ರಷ್ಟು ಅರ್ಜಿಗಳು …

Read More »

ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರಿಗೆ ಸಿಹಿ ಸುದ್ದಿ

ಮಂಗಳೂರು : ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಾಮೂಹಿಕ ಸರಳ ವಿವಾಹ ಸಮಾರಂಭ ಏಪ್ರಿಲ್ 26 ರಂದು ನಡೆಯಲಿದ್ದು , ಬಡವರಿಗಾಗಿ ರೂಪಿಸಿದ್ದರೂ ಶ್ರೀಮಂತರೂ ಕೂಡ `ಸಪ್ತಪದಿ’ ಸಾಮೂಹಿಕ ಸರಳ ವಿವಾಹ ಯೋಜನೆಯಲ್ಲಿ ಮದುವೆಯಾಗಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಸಪ್ತಪದಿ ರಥದ ಮೂಲಕ ಎಲ್ಲೆಡೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯದ …

Read More »

ಖಾಸಗಿ ಬಸ್ – ಸ್ಕೂಟಿ ಢಿಕ್ಕಿ; ಮಹಿಳೆ ದುರ್ಮರಣ.

ಉಡುಪಿ: ಖಾಸಗಿ ಬಸ್ ಮತ್ತು ಸ್ಕೂಟಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಇಂದು ರಾತ್ರಿ ಕಿನ್ನಿಮುಲ್ಕಿ ಸಮೀಪ ನಡೆದಿದೆ. ಮೃತರನ್ನು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ ಎಂಬವರ ಪತ್ನಿ, ಬ್ಯೂಟಿ ಪಾರ್ಲರ್ ಮಾಲಕಿ ಅಂಬಾಲಪಾಡಿ ಕಪ್ಪೆಟ್ಟು ನಿವಾಸಿ ಮಮತ ಪೂಜಾರಿ(35) ಎಂದು ಗುರುತಿಸಲಾಗಿದೆ. ಕಿನ್ನಿಮುಲ್ಕಿ ಪೆಟ್ರೊಲ್ ಪಂಪ್‌ನಿಂದ ಪೆಟ್ರೊಲ್ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿದ್ದ ಸ್ಕೂಟಿಗೆ ಮಂಗಳೂರಿನಿಂದ ಉಡುಪಿ ಕಡೆ …

Read More »

ನದಿಗೆ ಹಾರಿ ತಂದೆ – ಮಗ ಆತ್ಮಹತ್ಯೆ.

ಮಂಗಳೂರು : ಮಗುವಿನ ಜೊತೆಗೆ ತಂದೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ನೇತ್ರಾವತಿ ನದಿ ಸೇತುವೆ ಬಳಿ ನಡೆದಿದೆ. ಗೋಪಾಲಕೃಷ್ಣ ರೈ (45) ಮತ್ತು ಮಗ ನಮೀಶ್ ರೈ (6) ಆತ್ಮಹತ್ಯೆಗೆ ಶರಣಾಗಿದ್ದಾರೆ . ಇವರು ಮೂಲತಃ ಬಂಟ್ವಾಳ ಬಾಳ್ತಿಲ ನಿವಾಸಿಗಳೆಂದು ಹೇಳಲಾಗಿದೆ. ಇಂದು ಬೆಳಗಿನ ಜಾವ ಗೋಪಾಲಕೃಷ್ಣ ರೈ ಅವರ ಕಾರು ಉಳ್ಳಾಲ ನೇತ್ರಾವತಿ ನದಿ ಸೇತುವೆ ಬಳಿ ಪತ್ತೆಯಾಗಿದ್ದು, ಮಹಾರಾಷ್ಟ್ರ …

Read More »

ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ‌ ಕಿರುಕುಳ: 15 ವರ್ಷ ಸಜೆ.

ಕಾಸರಗೋಡು: ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಸ್ಕೂಲ್ ಶಿಕ್ಷಕನಿಗೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹದಿನೈದು ವರ್ಷ ಸಜೆ ಮತ್ತು 35 ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದೆ. ನೀರ್ಚಾಲು ಮಲ್ಲಡ್ಕದ ಬಾಲಮುರಳಿ (32) ಶಿಕ್ಷೆಗೊಳಗಾದವನು. ದಂಡ ಪಾವತಿಸದಿದ್ದಲ್ಲಿ ಎರಡು ವರ್ಷ ಅಧಿಕ ಶಿಕ್ಷೆ ಅನುಭವಿಸಬೇಕು. ಸಂತ್ರಸ್ತ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರ ಮೂಲಕ ಸರಕಾರ ಸಹಾಯ ಧನ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. …

Read More »

ಬಂಡೆಗೆ ಡಿಕ್ಕಿ ಹೊಡೆದ ಬಸ್: 7 ಜನರ ದುರ್ಮರಣ.

ಉಡುಪಿ: ಟೂರಿಸ್ಟ್ ಬಸ್ ರಸ್ತೆ ಪಕ್ಕದ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಪ್ರಯಾಣಿಕರು ‌ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಬಳಿ ಸಂಭವಿಸಿದೆ.‌ ಒಟ್ಟು 35 ಪ್ರಯಾಣಿಕರು ಸಂಚರಿಸುತ್ತಿದ್ದ ಮೈಸೂರು ಜಿಲ್ಲೆಯ ಟೂರಿಸ್ಟ್ ಬಸ್ ಇದಾಗಿದ್ದು, ಮೈಸೂರು- ಮಂಗಳೂರು ತೆರಳುವಾಗ ದುರ್ಘಟನೆ ನಡೆದಿದೆ. Share

Read More »

ಮಂಗಳೂರು-ಗೋವಾ ಪ್ರಯಾಣಿಕರಿಗೆ ಗುಡ್ ನ್ಯೂಸ್.

ಬೆಂಗಳೂರು : ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು, ಹಾಸನ, ಮಂಗಳೂರು ಮಾರ್ಗವಾಗಿ ಗೋವಾ ತಲುಪಲಿರುವ ನೂತನ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು, ಬುಧವಾರ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ ಮಾಡಿದ್ದು, ಯಶವಂತಪುರ-ಮಂಗಳೂರು-ಗೋವಾಕ್ಕೆ ಹೊಸ ರೈಲು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 10.30ಕ್ಕೆ ಗೋವಾದ ವಾಸ್ಕೋಡಗಾಮ ತಲುಪಲಿದೆ. ಇನ್ನೂ ಸಂಜೆ 4.30ಕ್ಕ ಗೋವಾದಿಂದ ಹೊರಡುವ ರೈಲು, ಬೆಳಿಗ್ಗೆ 9 …

Read More »

ನಾನೂ ಕೂಡ ಸರ್ಕಾರಿ ಕಾಲೇಜು ವಿದ್ಯಾರ್ಥಿ.

ಮಂಗಳೂರು: ‘ನಾನೂ ಸರ್ಕಾರಿ ಕಾಲೇಜು ವಿದ್ಯಾರ್ಥಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೆಮ್ಮೆಯಿಂದ ಶಾಲು ಹೆಗಲೇರಿಸಿಕೊಂಡು ಹೇಳಿದರು. ನಗರದ ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ನಾನು ಬೆಂಗಳೂರಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ. ಶ್ರೇಷ್ಠ ಗೋವುಗಳು ಬರುವುದೇ ದೊಡ್ಡಿಯಿಂದ, ಖಾಸಗಿ ಮಾತ್ರವೇ ಶ್ರೇಷ್ಠ ಎಂಬ ಭ್ರಮೆ ಬಿಡಿ’ ಎಂದು ಸರ್ಕಾರಿ ಶಾಲಾ-ಕಾಲೇಜುಗಳನ್ನು ಹೀಯಾಳಿಸುವವರಿಗೆ ತಣ್ಣನೆ ತಿರುಗೇಟು ನೀಡಿದರು. ‘ಅಧ್ಯಯನಗಳು ಪದೋನ್ನತಿ, ಫಲಿತಾಂಶಕ್ಕೆ ಸೀಮಿತವಾಗಬಾರದು. ಬೌದ್ಧಿಕ …

Read More »

ಕಮಲ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ಹಲ್ಲೆ.

ಮಂಗಳೂರು: ರಾಜಕೀಯ ವೈಷಮ್ಯದ ಪ್ರಕರಣವೊಂದರಲ್ಲಿ, 28 ವರ್ಷದ ಬಿಜೆಪಿ ಕಾರ್ಯಕರ್ತನ ಮೇಲೆ ಮುಂಚೂರಿನಲ್ಲಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಬಿಜೆಪಿ ಕಾರ್ಯಕರ್ತನನ್ನು ಯಶೋಧರ್ ಎಂದು ಗುರುತಿಸಲಾಗಿದ್ದು, ಇಲ್ಲಿನ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಿವಾಕರ್, ದಿನೇಶ್ ಶೆಟ್ಟಿ, ಅಶ್ವಿತ್ ಕುಲಾಲ್ ಮತ್ತು ಯಶೋಧರ ಅಗರಮೇಲು ಎಂಬ ನಾಲ್ಕು ಜನರು ಯಶೋಧರ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ …

Read More »

ಸಹಜ ಸ್ಥಿತಿಗೆ ಮರಳಿದ ಈರುಳ್ಳಿ ದರ.

ಕಾರವಾರ: ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 60ರಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಹಿಂದಿನ ವಾರ ₹ 50ಕ್ಕೆ ಇಳಿಕೆಯಾಗಿತ್ತು. ಈ ವಾರವೂ ₹ 10ರಷ್ಟು ಇಳಿಕೆ ಕಂಡು ₹ 40ರ ದರ ಹೊಂದಿದೆ. ಮೂರು ತಿಂಗಳ ಹಿಂದೆ ಕೆ.ಜಿ.ಗೆ ₹ 200ರವರೆಗೂ ಏರಿಕೆಯಾಗಿತ್ತು. ಟೊಮೆಟೊ ದರ ₹ 10ರಷ್ಟು ಕಡಿಮೆಗೊಂಡು ₹ 20ರಲ್ಲಿ ಬಿಕರಿಯಾಗುತ್ತಿದೆ. ₹ 60ರ ದರದಲ್ಲಿ ಸ್ಥಿರವಾಗಿದ್ದ ಬೀಟ್‌ರೂಟ್ ದರವು ಈಗ ₹ 40 ಇದೆ. ಕ್ಯಾರೆಟ್ …

Read More »

ಶ್ರೀಕೃಷ್ಣನ ದರ್ಶನದ ಮಾರ್ಗ ಬದಲಾವಣೆ.

ಉಡುಪಿ, ಫೆ.6: ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಹೋಗಲು ಭಕ್ತರು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಇದ್ದ ಅತಿ ಸುಲಭ ಭಕ್ತರ ದರ್ಶನ ಮಾರ್ಗವನ್ನು ತಡೆ ಹಿಡಿಯಲಾಗಿದ್ದು, ಈ ಬಗ್ಗೆ ಯಾತ್ರಾರ್ಥಿಗಳು, ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಕ್ತರು ರಾಜಾಂಗಣ ಸಮೀಪದಿಂದ ಬಂದು, ಎತ್ತರದಲ್ಲಿರುವ ಭೋಜನ ಶಾಲೆ ಮೇಲೆ ಸುತ್ತು ಬಳಸಿ, ಪ್ರವೇಶ ಪಡೆದು, ಮುಂದೆ ಸಿಗುವ ಕೆಲವೊಂದು ಓಣಿ ಮಾರ್ಗದಿಂದ ಹಾದು ಹೋಗಿ, ಸುರಂಗದಂತಿರುವ ಸಂಧಿ ಮಾರ್ಗದಲ್ಲಿ ಇಳಿದು, …

Read More »

ರಸ್ತೆ ಮಧ್ಯದಲ್ಲೇ ಕೈ ಕೈ ಮಿಲಾಯಿಸಿದ ಬಸ್ ಚಾಲಕರು.

ಮಂಗಳೂರು, ಫೆ.5: ಬಸ್ ಚಾಲಕರಿಬ್ಬರು ಬಸನ್ನು ರಸ್ತೆ ಮಧ್ಯೆ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್ ವೆಲ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಗಳ ಮಧ್ಯೆ ಟೈಮಿಂಗ್ ವಿಚಾರದಲ್ಲಿ ವಿಚಾರದಲ್ಲಿ ಈ ಹೊಡೆದಾಟ ನಡೆದಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ನಗರದ ಬೆಂದೂರ್ ವೆಲ್ ಆಯಗ್ನೆಸ್ ಕಾಲೇಜಿನ ಎದುರಿನ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಇಬ್ಬರು ಚಾಲಕರು ಹೊಡೆದಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ …

Read More »

ಕೊರೊನಾ ಆತಂಕ: ಉಡುಪಿಯಲ್ಲಿ ಮುನ್ನೆಚ್ಚರಿಕೆ ಕ್ರಮ.

ಮಂಗಳೂರು/ಉಡುಪಿ: ಚೀನದಲ್ಲಿ ಕಾಣಿಸಿಕೊಂಡು, ಸದ್ಯ ಕೇರಳದಲ್ಲಿಯೂ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗದಲ್ಲಿರುವ ದ.ಕ. ಸಹಿತ ಉಡುಪಿ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ವಿದೇಶದಿಂದ ಬರುವವರು ಮತ್ತು ವಿದೇಶಕ್ಕೆ ವಿಶೇಷವಾಗಿ ಚೀನಕ್ಕೆ ತೆರಳುವ ಮತ್ತು ಅಲ್ಲಿಂದ ಬರುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚೀನದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ …

Read More »

ಮಲ್ಪೆ ಬೀಚ್‌ ಉತ್ಸವಕ್ಕೆ ಸಾಕ್ಷಿಯಾದ ಜನಸಾಗರ.

ಮಲ್ಪೆ: ಇಲ್ಲಿನ ನೀಲ ಕಡಲ ತೀರದ ಮರಳಿನಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ವಿವಿಧ ಪಂದ್ಯಾಟಗಳು, ಶ್ವಾನ ಪ್ರದರ್ಶನ, ಗಾಳಿಪಟ ಹಾರಾಟ, ಘಮ ಘಮಿಸುತ್ತಿದ್ದ ಆಹಾರ ಮಳಿಗೆಗಳು. ಇವುಗಳೆಲ್ಲವುದರ ಮಧ್ಯೆ ಉತ್ಸಾಹಕ್ಕೆ ಮಿತಿಯೇ ಇಲ್ಲದಂತೆ ಓಡಾಡುವ ದೊಡ್ಡ ಸಂಖ್ಯೆಯ ಜನರು. ಇದೆಲ್ಲ ಕಂಡದ್ದು ರವಿವಾರ ನಡೆದ ಬೀಚ್‌ ಉತ್ಸವದಲ್ಲಿ. ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಪಶುಪಾಲನ ಇಲಾಖೆ, ಕರಾವಳಿ …

Read More »

ಧರ್ಮಸ್ಥಳ ಮ್ಯೂಸಿಯಂಗೆ ಮಹೇಶ್ವರಾನಂದ ಶ್ರೀ ಕೊಡುಗೆ.

ಧರ್ಮಸ್ಥಳ: ಆಸ್ಟ್ರೀಯ ದೇಶದ ಮಾಧವಾನಂದಾಶ್ರಮದ ಶ್ರೀ ಮಹಾಮಂಡಲೇಶ್ವರ ಪರಮಹಂಸ ಮಹೇಶ್ವರಾನಂದ ಸ್ವಾಮಿ ಇವರು ಧರ್ಮಸ್ಥಳದ ಅಪರೂಪದ ಕಾರ್ ಮ್ಯೂಸಿಯಂ ಗೆ 1972 ಮೊಡೆಲ್‌ ನ ಬೆಂಝ್ 2-80S ಕಾರನ್ನು ಕೊಡುಗೆಯಾಗಿ ನೀಡಿದರು. ರವಿವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸ್ವಾಮೀಜಿ ಕೀಲಿ ಕೈ ನೀಡಿ ಹಸ್ತಾಂತರಿಸಿದರು. ಹೆಗ್ಗಡೆ ಅವರು ಕಾರಿನ ವಿಶೇಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವಸ್ಥಾನ ಹೊರಾಂಗಣದಲ್ಲಿ ಸ್ವಾಮೀಜಿ ಜತೆ ಸ್ವತಃ ತಾವೇ ಚಾಲನೆ ಮಾಡಿದರು. ಮೂಲತಃ …

Read More »
error: Content is protected !!