Breaking News

ಕರ್ನಾಟಕ

ಬೋಗಸ ಗ್ಯಾರಂಟಿ ಕಾರ್ಡಗಳ ಬಿಡುಗಡೆ- ಕಾಂಗ್ರೆಸ್ ವಿರುದ್ಧ ಸಿಎಂ ವ್ಯಂಗ್ಯ

ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬೋಗಸ ಕಾರ್ಡಗಳ ಬಿಡುಗಡೆ ಸರಣಿ ಆರಂಭಿಸಿದೆ. ಈಗಾಗಲೇ ಮೂರನ್ನು ಬಿಟ್ಟಿದೆ ಈಗ ನಾಲ್ಕನೇಯ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ಸಿಗರು ತಮ್ಮ ಆಡಳಿತ ರಾಜ್ಯಗಳಲ್ಲಿ ಎಲ್ಲೆಲ್ಲಿ ಆಶ್ವಾಸನೆ ನೀಡಿದಂತೆ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂಬುವದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರದ ಹತಾಶೆಯಿಂದ ಆಗಲಾರದ ಬೋಗಸ …

Read More »

ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಖೈದಿ

ಹುಬ್ಬಳ್ಳಿ: ಕಲಬುರ್ಗಿಯಿಂದ ಗಡಿಪಾರು ಆದೇಶದಲ್ಲಿದ್ದ ಆರೋಪಿತ ಮೌನುದ್ದೀನ್ ಲಾಲ್‌ಸಾಬ (47) ಎಂಬ ವ್ಯಕ್ತಿ ಹೊಟ್ಟೆ ನೋವು ನೆಪ ಹೇಳಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ, ಹುಬ್ಬಳ್ಳಿಯಲ್ಲಿ ನಡೆದಿದೆ. ಆರೋಪಿ, ಕಲಬುರ್ಗಿ ಕಮಲಾಪುರ್ ಗ್ರಾಮದ ಮೈನುದ್ದೀನ್ ಲಾಲ್‌ಸಾಬ್ ಗಡಿಪಾರು ಆಗಿದ್ದ. ಅದರಂತೆ ಆರೋಪಿಯನ್ನು ಬಸ್ ಮುಖಾಂತರ ಗದಗ ಜಿಲ್ಲೆಗೆ ಕರೆದುಕೊಂಡು ಹೋಗುವಾಗ, ಹುಬ್ಬಳ್ಳಿ ಗೋಕುಲ ಬಸ್ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ 8.30ಕ್ಕೆ ಹೊಟ್ಟೆ ನೋವು ಎಂದು, ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು …

Read More »

ಕನ್ನಡ ವಿರೋಧಿಗಳ ವಿರುದ್ದ ಸೆಟೆದು ನಿಂತಿದ್ದು ನಂಜೇಗೌಡ- ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಉರಿಗೌಡ ನಂಜೇಗೌಡ ಧರ್ಮದ ಉಳುವಿಗಾಗಿ ಮತ್ತು ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದವರು. ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಕರ್ನಾಟಕಕ್ಕೆ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಕೊಡವರ ನರಮೇಧ ಮಾಡಿದ ಮತ್ತು ಹಿಂದೂಗಳನ್ನ ಕೊಂದು ಹಾಕಿದ ಕನ್ನಡ ವಿರೋಧಿ ಟಿಪ್ಪು. ಅಂತವರ ವಿರುದ್ದ ಸೆಟೆದು ನಿಂತಿದ್ದು ಉರಿಗೌಡ ನಂಜೇಗೌಡ ‌‌ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನೂ ಸುಮರ್ಣ ಮಂಡ್ಯ ಪುಸ್ತಕವನ್ನು 2006 ರಲ್ಲಿ …

Read More »

ಮೋದಿ ಅವರಿಂದ ಭಾರತ ಅಭಿವೃದ್ಧಿ ಹೊಂದಿದ್ದು -ಪಿಯೋಷ ಗೋಹಲ್

ಹುಬ್ಬಳ್ಳಿ: ಪ್ರಣಾಳಿಕೆ ಸಲಹಾ ಅಭಿಯಾನ ಅಂಗವಾಗಿ ನಗರದ ಹೆಬಸೂರು ಭವನದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಕೈಗಾರಿಕಾ, ವಾಣಿಜ್ಯ ಹಾಗೂ ಆಹಾರ ಮತ್ತು ನಾಗರಿಕ ಸಚಿವ ಪಿಯೋಷ ಗೋಹಲ್ ಭಾಷಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಆಗಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಷ್ಟು ಅಭಿವೃದ್ಧಿ ಆಗಿದೆ ಎಂದರು.

Read More »

ಹುಬ್ಬಳ್ಳಿಯಲ್ಲಿ ಗ್ರಾಮದೇವತೆಯರ ಪಲ್ಲಕ್ಕಿ ಉತ್ಸವ

ಹುಬ್ಬಳ್ಳಿ: ನಗರದ ಯಲ್ಲಾಪುರ ದೇಸಾಯಿ ಓಣಿಯಲ್ಲಿರುವ ದ್ಯಾಮವ್ವದೇವಿ ಮತ್ತು ಮರಿಯಮ್ಮ ದೇವಿ ಗ್ರಾಮದೇವತೆಯರ ಮರು ಪ್ರಾಣ ಪ್ರತಿಷ್ಠಾಪನೆಯನ್ನು ಅಲ್ಲಿನ ಗುರು ಹಿರಿಯರು ಮತ್ತು ಶ್ರೀ ಗ್ರಾಮದೇವತೆ ಉತ್ಸವ ಸಮಿತಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಶ್ರೀ ದುರ್ಗವ್ವದೇವಿ, ದ್ಯಾಮವ್ವದೇವಿ, ಮರಿಯಮ್ಮದೇವಿಯವರ ಪುರ ಪ್ರವೇಶ ಪಲ್ಲಕ್ಕಿ ಉತ್ಸವದಲ್ಲಿ ದೇವತೆಯರನ್ನು ಅಲಂಕರಿಸಿ ಮೆರವಣಿಗೆ ಮಾಡಿದ್ದು, ಈ ಮೆರವಣಿಗೆಯಲ್ಲಿ ಜೋಡೆತ್ತು, ಚಂಡವಾದ್ಯ ಬಳಗ, ಡೊಳ್ಳು ಕುಣಿತ, ಕರಡಿ ಮಜಲು, ಸಾವಿರಾರು ಮಹಿಳೆಯರು ಯುವತಿಯರಿಂದ ಬೃಹತ್ …

Read More »

ಬೆಳಗಾವಿಯಲ್ಲಿ ಬೃಹತ್ ಯುವ ಕ್ರಾಂತಿ ಸಮಾವೇಶ- ರಾಹುಲ್ ಗಾಂಧಿ ಆಗಮನ

ಹುಬ್ಬಳ್ಳಿ : 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಸುರ್ಜೇವಾಲಾ,ವೇಣುಗೋಪಾಲ, ಸಿದ್ದರಾಮಯ್ಯ ಡಿಕೆಶಿವಕುಮಾರ್, ಪರಮೇಶ್ವರ,ಮುನಿಯಪ್ಪ,ಎಮ್ ಬಿ ಪಾಟೀಲ್ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಯುವ ಜನತೆಗೆ ಸಂದೇಶ ಕೊಡಲಿದ್ದಾರೆ. ಮತ್ತು ಭಾರತ ಜೋಡೋ ಯಾತ್ರೆ ವೇಳೆ ಯುಕವರು ಅನ್ಯಾಯದ ಬಗ್ಗೆ ರಾಹುಲ್ ಗಾಂಧಿಗೆ …

Read More »

ಅವಳಿನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಮಲ ಪಾಳೆಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ-72ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಿಂದ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿ.ಟಿ.ರವಿ, …

Read More »

ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮಾಹಿತಿ ನೀಡಿ- ಸಿಇಓ ಡಾ. ಸುರೇಶ ಇಟ್ನಾಳ

ಧಾರವಾಡ : ನರೇಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಿರುವ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಸುರೇಶ ಇಟ್ನಾಳ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆ ಕಾರ್ಯಕರ್ತರು ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯಕರ್ತರು ಮನೆ ಮನೆಗೆ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಿ …

Read More »

ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ..

ಹುಬ್ಬಳಿ ಬ್ರೇಕಿಂಗ್…ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ….ಕಳೆದ ಅರ್ಧಗಂಟೆಯಿಂದ ಮಳೆರಾಯನ ಅಬ್ಬರ..ಕಾಂಗ್ರೆಸ್ಪ್ರ ಜಾಧ್ವನಿಯಾತ್ರೆಗೆ ವರುಣ ಅಡ್ಡಿ…ಕಲಘಟಗಿ ಹೊರವಲಯದ ತಡಸ ಕ್ರಾಸ್ ಬಳಿ ನಡೆಯುತ್ತಿರುವ ಬಹಿರಂಗ ಸಮಾವೇಶ..ಮಳೆಯಲ್ಲಿ ಸಿಕ್ಕು ಪರದಾಡಿದ ಕಾರ್ಯಕ್ರಮಕ್ಕೆ ಬಂದ ಜನಚೇರ್ ತಲೆಗಿಡಿದುಕೊಂಡು ರಕ್ಷಣೆ..

Read More »

ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ- ಸಿಎಂ

ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸೋಮಣ್ಣ ನಾನು ಹಳೆಯ ಸ್ನೇಹಿತರು ಅವರ, ನಮ್ಮ ಭೇಟಿ ಕೇವಲ ಔಪಚಾರಿಕ. ಸೋಮಣ್ಣ ನಮ್ಮ ಜೊತೆಗಿದಾರೆ, ನಮ್ಮ ಜೊತೆಗೇ ಇರ್ತಾರೆ ಎಂದು ಹೇಳಿದ್ದಾರೆ. ಇನ್ನೂ ಪ್ರಧಾನಿ ಬಗ್ಗೆ ಮಾತನಾಡಿದ್ದು, ಪ್ರಧಾನಿ ಮೋದಿ ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ .ಅವರು ಬಂದು ಹೋಗಿದ್ದರಿಂದ ಮೋದಿ ಮತ್ತು ಬಿಜೆಪಿ ಪರ ಒಲವು ಹೆಚ್ಚಾಗಿದೆ. ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ ಎಂದರು. ಕಾಮಗಾರಿಗಳ ಕ್ರೆಡಿಟ್ …

Read More »

You cannot copy content of this page