Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಾವಣಗೆರೆ

ದಾವಣಗೆರೆ

ಮದುವೆ ಆಗದಿದ್ದಕ್ಕೆ ಯುವಕ ಆತ್ಮಹತ್ಯೆ.

ದಾವಣಗೆರೆ: ವಿವಾಹವಾಗಿ ಸುಂದರ ಜೀವನ ಸಾಗಿಸಬೇಕೆಂಬ ಕನಸು ಕಂಡಿದ್ದ ಯುವಕ ಇದೀಗ ತನಗೆ ಮದುವೆಯಾಗಿಲ್ಲ ಎಂದು ಕೊರಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ‌. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೀರೇಶ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿರುವ ಪೌಲ್ಟ್ರಿ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಈತ ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹರಕನಾಳ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಈ ಕುರಿತು ನ್ಯಾಮತಿ …

Read More »

ಸಚಿವ ಶೆಟ್ಟರ್ ಪುತ್ರನ ಕಾರು ಅಪಘಾತ

ದಾವಣಗೆರೆ : ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ನಗರದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಪ್ರಶಾಂತ್ ಶೆಟ್ಟರ್, ಪತ್ನಿ ಅಂಚಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿವೈಡರ್ ಬಳಿ KA-05 AR-6577 ನಂಬರ್​ನ ಲಾರಿ, KA 03 NE 8 ನಂಬರ್​ನ ಲ್ಯಾಂಡ್ ರೋವರ್ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೈಟೆಕ್ ಆಸ್ಪತ್ರೆಗೆ ರವಾನಿಸಲಾಗಿದೆ. ದಾವಣಗೆರೆಯಿಂದ ಹುಬ್ಬಳ್ಳಿಯ ನಿವಾಸಕ್ಕೆ ಕಾರಿನಲ್ಲಿ …

Read More »

ಬಾಲಕಿಗೆ ಲೈಂಗಿಕ ಕಿರುಕುಳ : ಮೂವರು ಆರೋಪಿಗಳು ಅಂದರ್.

ದಾವಣಗೆರೆ: ಬಾಲಕಿ ಅಪಹರಿಸಿ ಲೈಂಗಿಕ‌ ಕಿರುಕುಳ ನೀಡಿದ ಆರೋಪದ ಮೇರೆಗೆ ಯುವಕ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ‌.‌ ಹಾಲೇಶ್, ಈತನಿಗೆ ಸಹಕಾರ ನೀಡಿದ ಚನ್ನಗಿರಿ ತಾಲೂಕಿನ ಹರೋಸಾಗರದ ಹಾಲೇಶಪ್ಪ ಹಾಗೂ ಕುಂದೂರು ಗ್ರಾಮದ ರುದ್ರೇಶ್ ಬಂಧಿತ ಆರೋಪಿಗಳು. ಹೊನ್ನಾಳಿ ತಾಲೂಕಿನ ಗ್ರಾಮವೊಂದರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಾಲೇಶ್ ಅಪಹರಿಸಿದ್ದಾನೆ. ಮಾತ್ರವಲ್ಲ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕೃತ್ಯಕ್ಕೆ ಸ್ನೇಹಿತ ರುದ್ರೇಶ್ ಹಾಗೂ ಹಾಲೇಶಪ್ಪ …

Read More »

ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಸಿದ್ದತೆಗೆ ಡಿಸಿ ಸೂಚನೆ.

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ನಿರ್ಧರಿಸಲಾಗಿದ್ದು, ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ಶೇಂಗಾ ಖರೀದಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ …

Read More »

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ.

ದಾವಣಗೆರೆ: ತುಂಗಾಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿಯನ್ನು ಹೊನ್ನಾಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಹೋಂ ಗಾರ್ಡ್ ಸತೀಶ್ ಎಂಬುವವರ ಪುತ್ರಿ ಕಾವ್ಯ ಇಂದು ಹೊನ್ನಾಳಿಯ ಸೇತುವೆಯ ಮೇಲಿಂದ ತುಂಗಾಭದ್ರಾ ನದಿಗೆ ಹಾರಿದ್ದಾಳೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಠಾಣೆ ಸೇತುವೆ ಸಮೀಪವೇ ಇದ್ದ ಕಾರಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ತೆಪ್ಪದಲ್ಲಿ ಹಾಗೂ ಈಜು ಬರುತ್ತಿದ್ದ ಪೊಲೀಸ್ ಸಿಬ್ಬಂದಿ, ಸ್ಥಳೀಯರು ನದಿಗೆ ಹಾರಿ …

Read More »

ದಾವಣಗೆರೆ ಎಸ್ಪಿ ಕೊರೋನಾದಿಂದ ಗುಣಮುಖ.

ದಾವಣಗೆರೆ: ಆಗಸ್ಟ್ 7 ರಂದು ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿ ಹನುಮಂತರಾಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಾರದ ಹಿಂದೆ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಇವರಿಗೆ ಸೋಂಕು ತಗುಲಿದ್ದು ಖಾತ್ರಿಯಾಗಿತ್ತು. ನಂತರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಹೋಂ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ‌. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಒಂದು ವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಈಗ ನನ್ನಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಪರೀಕ್ಷೆಯಲ್ಲಿ ಕೊರೊನಾ …

Read More »

SSLC ಪಾಸಾದವರಿಗೆ 2 ಲಕ್ಷ ರೂ. ಸಹಾಯ ಧನ.

ದಾವಣಗೆರೆ: ಪ್ರವಾಸೋದ್ಯಮ ಇಲಾಖೆ ವತಿಯಿಂದ 2012-13ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 11, ಪರಿಶಿಷ್ಟ ಪಂಗಡದ 07 ಅಭ್ಯರ್ಥಿಗಳಿಗೆ ಹಾಗೂ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 13 ಅಭ್ಯರ್ಥಿಗಳಿಗೆ ತಲಾ 2 ಲಕ್ಷ ರೂ. ಸಹಾಯ ಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಲಘು ವಾಹನ ಪರವಾನಿಗೆ (ಡಿ.ಎಲ್) ಮತ್ತು ಬ್ಯಾಡ್ಜ್ ಹೊಂದಿರುವ ಅರ್ಹ ನಿರುದ್ಯೋಗಿ …

Read More »

ಶಾಸಕರ ಮೊಮ್ಮಗನ ಕಾರ್​ ಅಪಘಾತ; ವಿದ್ಯುತ್ ಕಂಬ ಮುರಿದು ಮನೆಗೆ ಡಿಕ್ಕಿ.

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಮೊಮ್ಮಗನ ಕಾರು ನಿನ್ನೆ ತಡರಾತ್ರಿ ಅಪಘಾತಕ್ಕೀಡಾಗಿದೆ. ದಾವಣಗೆರೆ ನಗರದ ಹೊರವಲಯದ ಶಾಮನೂರಿನಲ್ಲಿ ಘಟನೆ ನಡೆದಿದೆ. ಶಾಸಕ ರವೀಂದ್ರನಾಥ್ ಪುತ್ರಿಯಾದ ಪಾಲಿಕೆ ಸದಸ್ಯೆ ವೀಣಾ ಹಾಗೂ ನಂಜಪ್ಪ ಅವರ ಪುತ್ರ ಅರುಣ್​​ ಕುಮಾರ್ ಅಪಘಾತವೆಸಗಿದ ಯುವಕ. ಅವರ ಇನ್ನೋವಾ ಕಾರು ವಿದ್ಯುತ್​​ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಮನೆಯೊಂದಕ್ಕೆ ಗುದ್ದಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. …

Read More »

ವಿವಿಧ ಯೋಜನೆಯಡಿ ಸಾಲ ಸೌಲಭ್ಯ!

ದಾವಣಗೆರೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ವಿವಿಧ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಹ ಫಲಾನಭವಿಗಳು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಚೈತನ್ಯ ಸಹಾಯಧನ ಯೋಜನೆಯಡಿ ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ, ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ 25,000 ರೂ.ನಿಂದ 5 ಲಕ್ಷ ರೂ.ದ ವರೆಗೆ ಶೇ.20 ರಷ್ಟು ಗರಿಷ್ಟ 25,000 ರೂ.ಗಳ ಸಹಾಯಧನ ಮಂಜೂರು ಮಾಡಲಾಗುವುದು. …

Read More »

ವಿಕಲಚೇತನರಿಗೆ ಸಿಹಿಸುದ್ದಿ. ‌

ದಾವಣಗೆರೆ: VOICE (we are your Voice) ಸಂಸ್ಥೆ ಬೆಂಗಳೂರು ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ವಿವಿಧ ಕಂಪನಿಗಳು, ಸಂಘ-ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.23 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳವು ಕ್ರೀಡಾ ಮೈದಾನ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆ.ಎಸ್.ಆರ್.ಪಿ) 4ನೇ ಬೆಟಾಲಿಯನ್ ಪೆರೇಡ್ ಮೈದಾನ, ಮಡಿವಾಳ ಮಾರುಕಟ್ಟೆ ಹತ್ತಿರ, ಕೋರಮಂಗಲ, ಬೆಂಗಳೂರು-560034 ಇಲ್ಲಿ ನಡೆಯಲಿದೆ. …

Read More »

ಗ್ರಾಮ ಲೆಕ್ಕಿಗರ ಹುದ್ದೆಗೆ ನೇರ ನೇಮಕಾತಿ.

ದಾವಣಗೆರೆ, (ಫೆ.04): ದಾವಣಗೆರೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 18 ಗ್ರಾಮ ಲೆಕ್ಕಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಫೆಬ್ರವರಿ 27ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ನೌಕರಿ ಪರ್ವ: 1112 FDA ಹುದ್ದೆಗೆ KPSC ಅರ್ಜಿ ಆಹ್ವಾನ ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ (ಪಿಯುಸಿ) ತೇರ್ಗಡೆಯಾಗಿರಬೇಕು. ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವಯೋಮಿತಿಯನ್ನು …

Read More »

ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಒತ್ತಾಯ.

ದಾವಣಗೆರೆ [ಜ.21]: ಮಂದಗತಿಯಲ್ಲಿ ಸಾಗುತ್ತಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ ಕಾಮಗಾರಿಯನ್ನು ಇನ್ನಾದರೂ ತ್ವರಿತಗತಿಯಲ್ಲಿ ಆರಂಭಿಸುವಂತೆ ನೈರುತ್ಯ ರೈಲ್ವೆ ಪ್ರಯಾಣಿಕರ ಸಂಘ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ರನ್ನು ಒತ್ತಾಯಿಸಿದೆ.ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಜರೂರು ಕೈಗೊಳ್ಳಬೇಕು. ನೇರ ರೈಲ್ವೆ ಮಾರ್ಗವು ಮಧ್ಯ ಕರ್ನಾಟಕವಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನರ ಬಹು ವರ್ಷದ ಬೇಡಿಕೆಯೂ ಆಗಿದೆಯೆಂದು ಅಜಯ್‌ಸಿಂಗ್‌ಗೆ ಬರೆದ ಪತ್ರದಲ್ಲಿ ಸಂಘ ತಿಳಿಸಿದೆ.ಮೂರೂ ಜಿಲ್ಲೆಗಳ …

Read More »

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.              ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಂತರ ಸುದ್ದಿಗಾರೊಂದಿಗೆ ಮಾತಾಡಿದ ಅವರು, 45 ವಾರ್ಡ್‍ಗಳ ಅಧಿಕೃತ ಫಲಿತಾಂಶ ಪ್ರಕಟಿಸಿದರು, 45 ವಾಡ್‍ಗಳಿಂದ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಪಕ್ಷೇತರ 5 ರಲ್ಲಿ ಗೆಲವು ಸಾಧಿಸಿದೆ. …

Read More »

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ ಕಾಂಗ್ರೆಸ್‍ಗೆ ಒಬ್ಬರ ಸಹಾಯದಿಂದ ಅಧಿಕಾರ ಚುಕ್ಕಾಣೆ ಹಿಡಿಯುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿ ಕೂರಲಿದೆ.                 ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ …

Read More »

ರಾಜೇಶ್ ಪರ ತೇಜಸ್ವಿ ಬಿರುಸಿನ ಪ್ರಚಾರ.

ದಾವಣಗೆರೆ: ಪತ್ರಕರ್ತ ಹಾಗೂ ಜೆಡಿಎಸ್ ಅಭ್ಯರ್ಥಿ ರಾಜೇಶ್ ಅವರು ದಾವಣಗೆರೆ ನಗರದ ಡಿಸಿಎಂ ಟೌನ್ ಶೀಪ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದರು‌. ರೈತಮುಖಂಡ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ತೇಜಸ್ವಿ ಪಟೇಲ್ ರಾಜೇಶ ಪರ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು. ರಾಜೇಶ್ ಓರ್ವ ಸಾಮಾಜಿಕ ಕಾಳಜಿ ಇರುವ ಯುವಕ. ಮೇಲಾಗಿ ವಾರ್ಡನಲ್ಲಿ ಉತ್ಸಾಹದಲ್ಲಿ ಪ್ರಚಾರ ಮಾಡುತ್ತಿದ್ದಾನೆ. ಹಣದಿಂದಲೇ ಎಲ್ಲವೂ ಅಲ್ಲ ರಾಜೇಶ್ ಒಳ್ಳೆಯ ಯುವಕ ಎನ್ನುವ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿರುವೆ. …

Read More »
error: Content is protected !!