Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬಾಗಲಕೋಟೆ

ಬಾಗಲಕೋಟೆ

ಅಡುಗೆ ಅನಿಲ ಸೋರಿಕೆ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ.

ಬಾಗಲಕೋಟೆ: ನವನಗರದ ಸೆಕ್ಟರ್ ನಂಬರ್​​​ 45ರಲ್ಲಿನ ಮನೆಯೊಂದರಲ್ಲಿ ಅಡುಗೆ ಅನಿಲ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ವೀರಪ್ಪ ಸುಂಕದ ಎಂಬುವವರ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿ ಆಗಿವೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳೀಯ ಯುವಕರ ಸಹಕಾರದೊಂದಿದೆ ಬೆಂಕಿ ನಂದಿಸಿ, …

Read More »

ಮಾಜಿ ಶಾಸಕ ಕಾಶಪ್ಪನವರ್ ಕೋವಿಡ್ ನಿಂದ ಗುಣಮುಖ.

ಬಾಗಲಕೋಟೆ: ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​​ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹತ್ತು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆ ನಗರದ ಎಸ್.ನಿಜಲಿಂಗಪ್ಪ ಕುಮಾರೇಶ್ವರ ಮೆಡಿಕಲ್ ಕಾಲೇಜ್​​ನ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್​ಗೂ ಸಹ ಸೋಂಕು ದೃಢಪಟ್ಟಿದ್ದು ಇಬ್ಬರೂ ಸಹ ಅದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. …

Read More »

ಬಿಜೆಪಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ.

ಬಾಗಲಕೋಟೆ: ನಾಳೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಜರುಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆನ್​ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲ ತಿಳಿಸಿದ್ದಾರೆ. ಅವರು ನವನಗರದ ಪತ್ರಿಕಾ ಭವನದಲ್ಲಿಂದು ​ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಸುಮಾರು 3.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಕಚೇರಿ ಕಟ್ಟಡವು ಮೂರು …

Read More »

ರಾಷ್ಟ್ರ ರಾಜಕಾರಣಕ್ಕೂ , ದೆಹಲಿಗೂ ಸಂಬಂಧವಿಲ್ಲ!

ಬಾಗಲಕೋಟೆ: ರಾಷ್ಟ್ರ ರಾಜಕಾರಣಕ್ಕೂ, ದೆಹಲಿ ರಾಜಕಾರಣಕ್ಕೂ ಸಂಬಂಧ ಇಲ್ಲ. ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತ. ದೇಶದಲ್ಲಿ ದೊಡ್ಡ ದೊಡ್ಡ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಕಾಣೋದಿಲ್ಲವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅಸಮಾಧಾನ ಹೊರಹಾಕಿದರು. ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತಂತೆ ಮಾಧ್ಯಮಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿ ಆಡಳಿತ ಅಂದರೆ ಬಾಗಲಕೋಟೆ ನಗರಸಭೆ ಆಡಳಿತಕ್ಕೆ ಸೀಮಿತ. ಆಮ್ ಆದ್ಮಿ ಪಾರ್ಟಿ ಅವರು ರಾಜಕೀಯ ಗಿಮಿಕ್ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ವೋಟ್ …

Read More »

ತೋಟದಲ್ಲಿ ರೊಟ್ಟಿ ಊಟದ ಸವಿದ ಸಿದ್ದು.

ಬಾಗಲಕೋಟೆ: ಬಾದಾಮಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋಟವೊಂದರಲ್ಲಿ ಊಟ ಮಾಡುವ ಮೂಲಕ ಗಮನ ಸೆಳೆದರು. ಮಹಾಕೂಟದ ಸಮೀಪ ಇರುವ ತೋಟದಲ್ಲಿ ಸಿದ್ದರಾಮಯ್ಯನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಗುಳೇದಗುಡ್ಡದ ಸಮೀಪ ಹುಲಿಕೇರಿ ಗ್ರಾಮದ ಪಾಂಡುರಂಗ ದೇವಾಲಯ ಉದ್ಘಾಟನೆ ಬಳಿಕ ಗಿಡ್ಡನಾಯಕ ಹಳ್ಳಿಯ ಕಾರ್ಯಕ್ರಮವೊಂದಕ್ಕೆ ಹೋಗುವ ಮಾರ್ಗ ಮಧ್ಯೆ ಬಾಳೆ ತೋಟವೊಂದರಲ್ಲಿ ಕುಳಿತು ಸಿದ್ದರಾಮಯ್ಯ ಊಟ ಸವಿದರು. ಸಿದ್ದರಾಮಯ್ಯನವರ ಆಪ್ತರಾಗಿರುವ ಹೊಳಬಸು ಶೆಟ್ಟರ ಅವರ ಮನೆಯಲ್ಲಿ ಉತ್ತರ ಕರ್ನಾಟಕ ಜವಾರಿ ಊಟವಾದ …

Read More »

ಟ್ರ್ಯಾಕ್ಟರ್ ಅಪಘಾತ: ಈಜಿ ದಡ ಸೇರಿದ ವಯೋವೃದ್ದ.

ಬಾಗಲಕೋಟೆ: ತಡರಾತ್ರಿ ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದಿದ್ದ ವೃದ್ಧರೊಬ್ಬರು ಈಜಿ ದಡ ಸೇರಿರುವ ಘಟನೆ ಕುಳಲಿ ಗ್ರಾಮದಲ್ಲಿ ನಡೆದಿದೆ. ಶಂಕರಪ್ಪ ಈಜಿ ದಡ ಸೇರಿದ ವೃದ್ದರು. ಇವರೊಂದಿಗೆ ಕಾಲುವೆಗೆ ಬಿದ್ದಿದ್ದ ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್ ಲಾಡಕಾನ್ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗೆ ಶೋಧ ನಡೆಯುತ್ತಿದ್ದೆ. ಕುಳಲಿ ಗ್ರಾಮದ ಹೊಲದಲ್ಲಿ ಭಾನುವಾರ ರಾತ್ರಿ ಕೆಲಸ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಶಂಕರಪ್ಪ, ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್​ ಮನೆಗೆ ತೆರಳುತ್ತಿದ್ದರು. ಟ್ರ್ಯಾಕ್ಟರ್​ ಇಂಜಿನ್​ ನಿಯಂತ್ರಣ …

Read More »

ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದ ಟ್ರ್ಯಾಕ್ಟರ್.

ಬಾಗಲಕೋಟೆ: ಟ್ರ್ಯಾಕ್ಟರ್​ವೊಂದು ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದಿದ್ದು, ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಹೊಲಕ್ಕೆ ಹೋಗಿ ವಾಪಸ್​​ ಬರುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್​​ನಲ್ಲಿದ್ದ ಶಿವರುದ್ರಪ್ಪ ಪೋಳ(55), ಪೈಗಂಬರ್ ಲಾಡಕನ್(25) ಹಾಗೂ ಶಂಕ್ರಪ್ಪ ಗೌಡರ್(55) ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದರೂ ಅಗ್ನಿಶಾಮಕ ದಳ …

Read More »

ಸಂತೆಯಲ್ಲಿ ತರಕಾರಿ ಖರೀದಿಸಿದ ಇನ್ಫೋಸಿಸ್ ಅಧ್ಯಕ್ಷೆ!

ಬಾಗಲಕೋಟೆ: ಸರಳತೆಯಿಂದ ಗಮನ ಸೆಳೆದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಆಗಮಿಸಿ ತರಕಾರಿ ಖರೀದಿಸಿದ್ದಾರೆ. ಭಾನುವಾರ ಬೆಳಿಗ್ಗೆ ವಾರದ ಸಂತೆಗೆ ಬಂದ ಅವರು ವ್ಯಾಪಾರಿಗಳು, ರೈತರ ಕಷ್ಟ ಆಲಿಸಿ ತರಕಾರಿ ಖರೀದಿಸಿದ್ದಾರೆ. ಜಮಖಂಡಿ ತಾಲೂಕಿನ ಶೂರ್ಪಾಲಿ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಅವರು ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ. ಇತ್ತೀಚೆಗೆ ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದ …

Read More »

ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳುಗಡೆ ವ್ಯಾಪ್ತಿಯ ಜಮೀನುಗಳಿಗೆ ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ ೩೦ ಲಕ್ಷ ರೂ., ನೀರಾವರಿಗೆ ೪೦ ಲಕ್ಷ ರೂ. ಸಿಗಲಿದೆ ಎನ್ನುವ ರೈತರ ನಿರೀಕ್ಷೆಗೆ ಫಲ ಸಿಕ್ಕುವ ಕಾಲ ಸನ್ನಿಹಿತವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಯುಕೆಪಿ ಯೋಜನೆಯಡಿ ಮುಳುಗಡೆ ಆಗಲಿರುವ ಜಮೀನುಗಳಿಗೆ ೩೦ ಲಕ್ಷ, ೪೦ ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದ ಬಹುತೇಕ ಜನಪ್ರತಿನಿಧಿಗಳು …

Read More »

ಬಲೂನ್ ಊದುವಾಗ ಗ್ಲಿಸರಿನ್ ಮಿಶ್ರಣ ಹೊಟ್ಟೆಗೆ ಸೇರಿ ಜಿ.ಪಂ. ಅಧ್ಯಕ್ಷೆ ಅಸ್ವಸ್ಥ.‌

ಬಾಗಲಕೋಟೆ: ಶಾಲಾ ಕಾರ್ಯಕ್ರಮದಲ್ಲಿ ಬಲೂನ್ ಊದುವಾಗ ಆಕಸ್ಮಿಕವಾಗಿ ಶಾಂಪೂ ಹಾಗೂ ಗ್ಲಿಸರಿನ್ ಮಿಶ್ರಣ (ಎಲಿಪೆಂಟ್ ಫೋಂ) ಹೊಟ್ಟೆಯೊಳಗೆ ಸೇರಿ ಅಸ್ವಸ್ಥಗೊಂಡ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲ್ಲೂಕಿನ ತುಳಸಿಗೇರಿಯ ಕುವೆಂಪು ಮಾದರಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿದ್ದ ಬಾಯಕ್ಕ ಮೇಟಿ, ಬಲೂನು ಊದಿ ಸಮಾರಂಭ ಉದ್ಘಾಟಿಸಲು ಮುಂದಾದರು. ಈ ವೇಳೆ ಬಲೂನಿನ ಒಳಗಿದ್ದ …

Read More »

ಶಾಶ್ವತ ಸೂರು ಕಲ್ಪಿಸುವಂತೆ ಡಿಸಿಎಂಗೆ ಮನವಿ.

  ಬಾಗಲಕೋಟೆ:- ಶಾಶ್ವತ ಸೂರು ಕಲ್ಪಿಸುವಂತೆ ಒತ್ತಾಯಿಸಿ ಮುಧೋಳ ತಾಲೂಕಿನಲ್ಲಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆಗೆ ಸಂತ್ರಸ್ತರು ಮುತ್ತಿಗೆ ಹಾಕಿ ಮನವಿ ನೀಡಿದರು . ಬೆಳಂಬೆಳಿಗ್ಗೆ ಕಾರಜೋಳ ಅವರ ಮನೆಗೆ ಸಂತ್ರಸ್ತರು ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಬಿಸಿ ಮುಟ್ಟಿಸಿ ಚಳಿ ಬಿಡಿಸಿದರು. ಯುಕೆಪಿ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನೆರೆ ಸಂತ್ರಸ್ತರು ಮಳೆಗೆ ನಲುಗಿ ಹೋಗಿದ್ದು,ಸತತ ಮಳೆಯಿಂದಾಗಿ ಮನೆಯಲ್ಲಿ ಜೀವಭಯದಿಂದ ಮಲಗುವ ಪರಿಸ್ಥಿತಿ ಎದುರಾಗಿದೆ. …

Read More »
error: Content is protected !!