Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ-ಧಾರವಾಡ

ಹೆತ್ತವರ ನಿರೀಕ್ಷೆಯಲ್ಲಿ ಪುಟ್ಟ ಕಂದ : ಪಾಲಕರ ಪತ್ತೆಗೆ ಮನವಿ.

ಹುಬ್ಬಳ್ಳಿ : ಇಲ್ಲಿನ ಕರ್ಕಿಬಸವೇಶ್ವರ ದೇವಾಲಯ ಬಳಿ ಕಳೆದ ನವೆಂಬರ್ 3 ರಂದು ರುಕ್ಸಾನಾ ಎಂಬ ನಾಲ್ಕು ವರ್ಷದ ಬಾಲಕಿಯನ್ನು ಅಕೆಯ ಪಾಲಕರು ಬಿಟ್ಟು ಹೋಗಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಮೂಲ್ಯ ಶಿಶುಗೃಹದಲ್ಲಿ ಮಗುವಿಗೆ ರಕ್ಷಣೆ ನೀಡಲಾಗಿದೆ. ಬಾಲಕಿಯ ಪಾಲಕರು 4 ತಿಂಗಳೊಳಗೆ ಸಂಪರ್ಕಿಸಬೇಕು , ಇಲ್ಲವಾದರೆ ಕಾನೂನುರೀತ್ಯಾ ಮಗುವಿನ ಹಿತರಕ್ಷಣೆಗೆ ಕ್ರಮವಹಿಸಲಾಗುವುದು ಹೆಚ್ಚಿನ ವಿವರಗಳಿಗೆ 0836-2363389 ಸಂಪರ್ಕಿಸಬಹುದು ಎಂದು …

Read More »

ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿಪಿ ಪಿ.ಕೃಷ್ಣಕಾಂತ್.

ಹುಬ್ಬಳ್ಳಿ: ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ನಾವು ಸುಮ್ಮನಿರಲ್ಲ ಎಂದು ನಗರದ ವಿವಿಧ ಕ್ರಿಮಿನಲ್​ಗಳಿಗೆ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್​ ಎಚ್ಚರಿಸಿದ್ದಾರೆ. ಅಕ್ರಮವಾಗಿ ಮಾರಕಾಸ್ತ್ರಗಳನ್ನ ಹೊಂದಿದ್ದರೆಂಬ ಆರೋಪದಲ್ಲಿ ಸೆಟ್ಲಮೆಂಟ್ ಹಾಗೂ ಇನ್ನುಳಿದ ಪ್ರದೇಶಗಳ ಹಲವು ಜನರನ್ನು ತಡರಾತ್ರಿಯವರೆಗೂ ಬೆಂಡಿಗೇರಿ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆಯೂ ತಾಕೀತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾತ್ರೋರಾತ್ರಿ ನಡೆದ …

Read More »

ದೀಪಾವಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಭರ್ಜರಿ ಕೊಡುಗೆ.

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬೆಂಗಳೂರು ಮತ್ತಿತರ ಸ್ಥಳಗಳಿಂದ ಬರುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್-19 ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ನವೆಂಬರ್ 14 ರಂದು ನರಕ …

Read More »

IPL ಬೆಟ್ಟಿಂಗ್: ಇಬ್ಬರ ಬಂಧನ.

ಧಾರವಾಡ: ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಉಪ ನಗರ ಪೊಲೀಸರು ಬಂಧಿಸಿದ್ದಾರೆ. ಮಾಳಾಪೂರದ ಲತೀಫ್​ ಅಬ್ದುಲ್ ರೆಹಮಾನ್​ ತಂಬೋಲಿ ಹಾಗೂ ರಸೂಲ್ ಓಣಿ ಗಾಂಧಿಚೌಕ ನಿವಾಸಿ ಇಜಾಜ್ ಅಹ್ಮದ್​ ಮಹ್ಮದ್​ ಯೂಸೂಫ್ ಮನಿಯಾರ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 15,100 ರೂ. ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ಮೇಲೆ ಈ ಇಬ್ಬರು ಬೆಟ್ಟಿಂಗ್​​ನಲ್ಲಿ ತೊಡಗಿದ್ದರು. ಈ …

Read More »

ಜಲಮಂಡಳಿ ಖಾಸಗೀಕರಣಕ್ಕೆ ಸರಕಾರ ಚಿಂತನೆ! ಸಾರ್ವಜನಿಕರ ಆಕ್ರೋಶ.!

ಹುಬ್ಬಳ್ಳಿ:- ಕುಡಿಯುವ ನೀರು ಮೂಲಭೂತ ಸೌಕರ್ಯಗಳಲ್ಲೊಂದು. ಆದರೆ ಆ ನೀರು ಪೊರೈಕೆ ಕೆಲಸವನ್ನು ಸರ್ಕಾರ ಸರಿಯಾಗಿ ಮಾಡುತ್ತಿಲ್ಲ ಅನ್ನೋ ಆರೋಪವಿದೆ.ಇದರ ನಡುವೆಯೇ ರಾಜ್ಯ ಸರ್ಕಾರ ನೀರು ಒದಗಿಸುವ ವ್ಯವಸ್ಥೆಯನ್ನೇ, ಖಾಸಗೀಕರಣದ ಮಾಡಲು ಹೊರಟರುವುದು  ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು,ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ… ಹೌದು….ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಹೊಂದಿರೋ ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಇದರ ನಡುವೆ ಅವಳಿ ನಗರದಲ್ಲಿನ ಜನರಿಗೆ ನೀರು ಒದಗಿಸುತ್ತಿದ್ದ ಜಲಮಮಂಡಳಿಗಳ ವ್ಯವಸ್ಥೆಯನ್ನು …

Read More »

ಸ್ಕೂಟಿ ,ಆ್ಯಂಬುಲೆನ್ಸ್ ನಡುವೆ ಅಪಘಾತ.

ಹುಬ್ಬಳ್ಳಿ : ಸ್ಕೂಟಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ-ಧಾರವಾಡದ ನವನಗರದಲ್ಲಿ ನಡೆದಿದೆ. ಸುನೀಲ್ ಪಾಟೀಲ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ಸ್ಕೂಟಿಯಲ್ಲಿ ಹೊರಟಿದ್ದ ವ್ಯಕ್ತಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸುನೀಲ್ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಉತ್ತರ ವಲಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಫೆ. 8 ರಂದು ರಾಷ್ಟ್ರೀಯ ಲೋಕ ಅದಾಲತ್.

ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಫೆಬ್ರವರಿ 8 ರಂದು ರಾಷ್ಟ್ರೀಯ ಲೋಕ ಅದಾಲತ ಆಯೋಜಿಸಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ, ಮೋಟಾರ್ ವಾಹನ ಅಪಘಾತ ಪರಿಹಾರದ, ಭೂಸ್ವಾಧೀನ, ವೈವಾಹಿಕ ಅಥವಾ ಜೀವನಾಂಶ, ಕಾನೂನಿನ್ವಯ ರಾಜಿ ಆಗಬಹುದಾದ ಕ್ರಿಮಿನಲ್, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳನ್ನು ಲೋಕ ಅದಾಲತದಲ್ಲಿ ಪರಿಹರಿಸಿಕೊಳ್ಳಬಹುದು. ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಕಾನೂನಿನ್ವಯ ರಾಜಿ ಆಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯ …

Read More »

ಫೆ. 1 ರಿಂದ ಹಾಲಿನ ದರ ಹೆಚ್ಚಳ.

ಧಾರವಾಡ : ಒಕ್ಕೂಟದ ಆಡಳಿತ ಮಂಡಳಿಯ 8 ನೇ ಸಭೆಯಲ್ಲಿ ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಪರಿಗಣಿಸಿ, ಫೆಬ್ರವರಿ 1 ರಿಂದ ಜಿಲ್ಲೆಯಲ್ಲಿ ಶೇಖರಣೆ ಮಾಡುವ ಆಕಳ ಹಾಲಿಗೆ ಪ್ರತಿ ಲೀ.ಗೆ ರೂ.1 ಹಾಗೂ ಎಮ್ಮೆ ಹಾಲಿಗೆ ರೂ.3.20 ರಂತೆ ಹೆಚ್ಚಿಸಿ ಜಾರಿಗೆ ತರಲಾಗುತ್ತದೆ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share

Read More »

ಮಾಜಿ ದೇವದಾಸಿ ಮಹಿಳೆಯರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ.

ಧಾರವಾಡ : 2019-20 ನೇ ಸಾಲಿನಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯ ಉತ್ಪನ್ನಕರ ಚಟುವಟಿಕೆಗಳ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ. ಸಮೀಕ್ಷಾ ಪಟ್ಟಿಯಲ್ಲಿರುವ ಮಾಜಿ ದೇವದಾಸಿ ಮಹಿಳೆಯರು ಜ.31 ರಿಂದ ಫೆ.9 ರವರೆಗೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ರಾಮಲಿಂಗೇಶ್ವರ ಮಸೀದಿ ಹತ್ತಿರ ಇರುವ ದೇವದಾಸಿ ಪುನರ್ವಸತಿ ಯೋಜನೆಯ ಕಾರ್ಯಲಯದ ಯೋಜನಾಧಿಕಾರಿಗಳಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಫೆ. 14 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2332126 …

Read More »

ಫೆಬ್ರುವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ ಉತ್ತರ ಕರ್ನಾಟಕ ಸೊಗಡಿನ ಮದುವೆ ಮಾಡ್ರಿ ಸರಿ ಹೋಗ್ತಾನೆ ಚಿತ್ರ..

ಹುಬ್ಬಳ್ಳಿ: ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳಿಂದಲೇ ಚಿತ್ರಿತಗೊಂಡಿರುವ ಎಸ್.ಎಸ್.ಡಿ‌. ಪ್ರೊಡಕ್ಷನ್ ನಿರ್ಮಾಣದ ಬಹುನಿರೀಕ್ಷಿತ ಮದುವೆ ಮಾಡಿ ಸರಿ ಹೋಗ್ತಾನೆ ಚಿತ್ರ ಫೆಬ್ರುವರಿಯಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ ಎಂದು ನಿರ್ದೇಶಕರಾದ ಗೋಪಿ ಕೆರೂರ್ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಹೆಮ್ಮೆ ಆಗಿರುವ ಉತ್ತರ ಕರ್ನಾಟಕದ ಪ್ರತಿಭೆಗಳನ್ನೇ ಒಳಗೊಂಡು ಸಿದ್ದಪಡಿಸಿರುವ ಚಿತ್ರ ಇದಾಗಿದ್ದು, ‌ಉತ್ತರ ಕರ್ನಾಟಕದ ಖಡಕ್ ಸಂಭಾಷಣೆ ಚಿತ್ರದ ಹೈಲೆಟ್ ಆಗಿದೆ ಎಂದು ತಿಳಿಸಿದರು. ಯಾರ ಮಾತನ್ನೂ ಕೇಳದ …

Read More »

ತೆಂಗಿನ ಮರದಿಂದ ಜಿಗಿದು ವಿಚಾರಣಾಧೀನ ಕೈದಿ ಸಾವು.

ಧಾರವಾಡ(ಜ.26): ಮರದ ಮೇಲಿಂದ ಹಾರಿ ವಿಚಾರಣಾಧೀನ ಕೈದಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತ ಕೈದಿಯನ್ನ ಚೇತನ್‌ಕುಮಾರ(29) ಎಂದು ಗುರುತಿಸಲಾಗಿದೆ.ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿ ಚೇತನ್ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದವನಾಗಿದ್ದಾನೆ. 2015 ರಲ್ಲಿ ಅತ್ಯಾಚಾರದ ಆರೋಪದಲ್ಲಿ ಚೇತನ್ ಬಂಧಿತನಾಗಿದ್ದ. ಚೇತನ್ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಎಂದ ಆರೋಪಿಸಲಾಗಿತ್ತು.ಆರೋಪಿ ಚೇತನ್‌ಗೆ ಜಿಲ್ಲಾ ನ್ಯಾಯಾಲಯದಲ್ಲಿ 10 ವರ್ಷ ಶಿಕ್ಷೆಯಾಗಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿ ಚೇತನ್‌ ಬೆಂಗಳೂರು …

Read More »

ಭೀಕರ ರಸ್ತೆ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರಂತ ಅಂತ್ಯ.

ಧಾರವಾಡ(ಜ.26): ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿ, ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ(4)ರಲ್ಲಿ ಇಂದು(ಭಾನುವಾರ) ನಡೆದಿದೆ. ಮೃತ ನಾಲ್ವರಲ್ಲಿ ಉಳಿದ ಮೂವರ ಹೆಸರು ತಿಳಿದು ಬಂದಿಲ್ಲ. ಬಸಪ್ಪ ಪೂಜಾರ, ಸಿದ್ದಪ್ಪ ಇಂಗಳ್ಳಳ್ಳಿ, ಸೋಮಣ್ಣ ದೇಸಾಯಿ ಗಾಯಗೊಂಡವರಾಗಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳು …

Read More »

ಎಸ್.ಎಲ್. ಭೈರಪ್ಪ ಅವರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಬೇಂದ್ರೆ ಪ್ರಶಸ್ತಿ.

ಧಾರವಾಡ: ವರಕವಿ ಡಾ. ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ಕೊಡಮಾಡುವ 2019-20ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಬೇಂದ್ರೆ ಪ್ರಶಸ್ತಿಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಭಾಜನರಾಗಿದ್ದಾರೆ.ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಈ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಜ. 31ರಂದು ಸಂಜೆ ಐದು ಗಂಟೆಗೆ ಬೇಂದ್ರೆ ಭವನದಲ್ಲಿ ಪ್ರದಾನ ಮಾಡಲಾಗುವುದು.ಸಾಹಿತಿ ಡಾ. ಗುರುಲಿಂಗ ಕಾಪಸೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. …

Read More »

ಉದ್ಯೋಗ ಮೇಳ ಆಯೋಜಿಸುವಂತೆ ಮನವಿ

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾಕಷ್ಟು ಯುವಕ ಯುವತಿಯರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗದ ಅವಶ್ಯಕತೆ ಇರುತ್ತದೆ,ಹೀಗಾಗಿ ತಕ್ಷಣ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಒಂದು ಬೃಹತ್ ಉದ್ಯೋಗ ಮೇಳ ಆಯೋಜಿಸುವಂತೆ ಇಂದು ಜಿಲ್ಲಾಧಿಕಾರಿ ಎಂ. ದೀಪಾ ಅವರಿಗೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ನಾಗೇಶ ಕಲಬರ್ಗಿ ಅವರು ಮನವಿ ಸಲ್ಲಿಸಿದರು.ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಮತ್ತು ಕೃಷಿ ವಲಯದಲ್ಲಿ ಹೆಚ್ಚಿನ ಮಾಹಿತಿ ದೊರಕುವ ಸಲುವಾಗಿ ಮತ್ತು ಹೈನುಗಾರಿಕೆ ಹಾಗೂ ವಸ್ವ ಉದ್ಯೋಗ ಕೈಗೊಳ್ಳಲು …

Read More »
error: Content is protected !!